ಮಿಸ್ಟರ್ 'ಸಿಎಂ' ಕಣ್ಣೀರ ಧಾರೆ ಇದೇಕೆ? ಎಚ್.ಡಿ ಕುಮಾರ ಸ್ವಾಮಿ ಅಳುಮುಂಜಿ ಆಗಿದ್ದೇಕೆ?

ಸದಾ ಕಣ್ಣೀರು ಹಾಕುವ ಮುಖ್ಯಮಂತ್ರಿಯನ್ನು ಬಿಜೆಪಿ ಅದ್ಭುತ ನಟ ಎಂದು ಛೇಡಿಸಿದೆ, ಕುಮಾರ ಸ್ವಾಮಿ ಏಕೆ ಅಳುತ್ತಿದ್ದಾರೆ ಎಂಬುದು ಕಾಂಗ್ರೆಸ್ ನಾಯಕರಿಗೆ...
ಕುಮಾರ ಸ್ವಾಮಿ ಕಣ್ಣೀರು
ಕುಮಾರ ಸ್ವಾಮಿ ಕಣ್ಣೀರು
ಬೆಂಗಳೂರು: ಬಿಜೆಪಿಯವರು ಆಡೋದಕ್ಕೂ ಕುಮಾರಸ್ವಾಮಿ ಮಾಡ್ತಿರೋದಕ್ಕೂ ಸರಿಯಾಗುತ್ತಿದೆ. ಸದಾ ಕಣ್ಣೀರು ಹಾಕುವ ಮುಖ್ಯಮಂತ್ರಿಯನ್ನು ಬಿಜೆಪಿ ಅದ್ಭುತ ನಟ
ಎಂದು ಛೇಡಿಸಿದೆ, ಕುಮಾರ ಸ್ವಾಮಿ ಏಕೆ ಅಳುತ್ತಿದ್ದಾರೆ ಎಂಬುದು ಕಾಂಗ್ರೆಸ್ ನಾಯಕರಿಗೆ ನಿಗೂಢ ರಹಸ್ಯವಾಗಿದೆ, ಸಿಎಂ ಅಳುವಿಗೆ ಏನು ಕಾರಣ ಎಂಬುದು ಸ್ವತಃ ಜೆಡಿಎಸ್ ಪಕ್ಷದವರಿಗೆ ತಿಳಿದಿಲ್ಲ, ಅಳು ಯಾವಾಗಲೂ ಸಹಾಯಕ್ಕೆ ನಿಲ್ಲುವುದಿಲ್ಲ ಎಂಬುದು ರಾಜಕೀಯ ತಜ್ಞರ ವಿಶ್ಲೇಷಣೆಯಾಗಿದೆ.
"ನನ್ನನ್ನು ನೀವು ಜೀವಂತವಾಗಿ ನೋಡಬೇಕಾದರೆ ಚುನಾವಣೆಯಲ್ಲಿ ನನ್ನನ್ನು ಗೆಲ್ಲಿಸಿ" ಎಂದು ಸಿಎಂ ಕುಮಾರ ಸ್ವಾಮಿ 2 ತಿಂಗಳ ಹಿಂದೆ ವಿಧಾನಸಭೆ ಚುನಾವಣಾ ಪ್ರಚಾರದ ವೇಳೆ ಬೆಂಗಳೂರಿನ ಜನತೆಗೆ ಅತ್ತು ಕೊಂಡು ಮನವಿ ಮಾಡಿದ್ದರು. ಅದಾದ ನಂತರ ಕುಮಾರ ಸ್ವಾಮಿ ರಾಜ್ಯದ ಮುಖ್ಯಮಂತ್ರಿಯಾಗಿ ಅಧಿಕಾರದ ಚುಕ್ಕಾಣಿ ಕೂಡ ಹಿಡಿದಿದ್ದಾರೆ, ಹೀಗಿದ್ದರೂ ಕುಮಾರ ಸ್ವಾಮಿ ಅವರ ಕಣ್ಣೀರಿಗೆ ಬ್ರೇಕ್ ಬಿದ್ದಿಲ್ಲ. 
ಅಳುಮುಂಜಿ ಕುಮಾರ ಸ್ವಾಮಿ ಅವರ ಇಮೇಜ್ ಬಗ್ಗೆ ರಾಷ್ಟ್ರ ಮಟ್ಟದಲ್ಲಿ ಚರ್ಚೆಯಾಗುತ್ತಿದೆ.. ಕುಮಾರ ಸ್ವಾಮಿ ಅದ್ಭುತ ನಟ ಎಂದು ಬಿಜೆಪಿ ಟೀಕಿಸಿದರೇ, ಸಿಎಂ ಏಕೆ ಅಳುತ್ತಿದ್ದಾರೆ ಎಂದು ಕಾರಣ ತಿಳಿಯದೇ ಕಾಂಗ್ರೆಸ್ಸಿಗರು ತಲೆಗೆ ಹುಳ ಬಿಟ್ಟುಕೊಂಡಿದ್ದಾರೆ. ತಮ್ಮ ಕಣ್ಣೀರಿನ ಮೂಲಕ ಸಿಎಂ ಜನರ ಸಹಾನೂಭೂತಿ ಗಳಿಸಿ ಆ ಮೂಲಕ ಮತ್ತಷ್ಟು ಪ್ರಬಲವಾಗಲು ಯತ್ನಿಸುತ್ತಿದ್ದಾರೆ ಎಂದು ಕಾಂಗ್ರೆಸ್ ಸರ್ಕಲ್ ನಲ್ಲಿ ಮಾತುಗಳು ಕೇಳಿ ಬರುತ್ತಿವೆ.
ವಿಕ್ಟಿಮ್ ಕಾರ್ಡ್ ಪ್ಲೇ ಮಾಡುವುದಕ್ಕಿಂತ ಅಳುವೇ ಹೆಚ್ಚು ಪರಿಣಾಮಕಾರಿಯಾಗಿದೆ ಎಂದು ನಂಬಿದ್ದಾರೆ ಎಂದು ರಾಜಕೀಯ ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ. ಒಂದು ಸಮೂಹದ ಬೆಂಬಲವನ್ನು ಸದಾ ಪಡೆದುಕೊಳ್ಳಲು ಭಾವನಾತ್ಮಕವಾಗಿ ನಡೆದುಕೊಳ್ಳುವ ರೀತಿ ಇದಾಗಿದೆ, ಅಳುವುದು ಕುಮಾರ ಸ್ವಾಮಿ ಅವರಿಗೆ ತಮ್ಮ ತಂದೆ ದೇವೇಗೌಡರಿಂದ ಅನುವಂಶಿಕವಾಗಿ ಬಂದಿದೆ.ಇಂಥಹ ಭಾವನಾತ್ಮಕ ವಿಚಾರ ಮತದಾರರ ಮುಂದೆ ತಪ್ಪೊಪ್ಪಿಗೆಯಂತೆ ಕಾಣುತ್ತದೆ ಎಂದು ರಾಜಕೀಯ ವಿಶ್ಲೇಷಕ ಸಂದೀಪ್ ಶಾಸ್ತ್ರಿ ತಿಳಿಸಿದ್ದಾರೆ.,
ಅಧಿಕಾರ ಸ್ವೀಕರಿಸಿದ ದಿನದಿಂದ ಸಿಎಂ ತಾನು ಸಂದರ್ಭದ ಬಲಿಪಶು , ಕಾಂಗ್ರೆಸ್ ಋಣದಲ್ಲಿದ್ದೇನೆ, ಅಸಾಹಯಕ ಎಂದು ಹೇಳಿಕೊಂಡೇ ಬರುತ್ತಿದ್ದಾರೆ, ಚುನಾವಣೆ ವೇಳೆ ಮತದಾರರಿಗೆ ತಾವುಸ ನೀಡಿದ್ದ ಭರವಸೆಗಳನ್ನು ಸಂಪೂರ್ಣವಾಗಿ ಈಡೇರಿಸ,ಲು ಸಾಧ್ಯವಾಗದಿರುವ ನೋವಿಗೆ ಸಿಎಂ ಅಳುತ್ತಿದ್ದಾರೆ ಎಂದು ತಜ್ಞರ ಅಭಿಮತವಾಗಿದೆ,
ಈ ಹಿಂದೆ ದೇವೇಗೌಡರು ಸುದ್ದಿಗೋಷ್ಠಿ, ಸಭೆ ಸಮಾರಂಭಗಳಲ್ಲಿ ಕಣ್ಣೀರು ಹಾಕುತ್ತಿದ್ದುದ್ದನ್ನು ಎಲ್ಲರೂ ನೋಡುತ್ತಿದ್ದರು. ಅದನ್ನೆ ಈಗ ಕುಮಾರ ಸ್ವಾಮಿ ಮುಂದುವರಿದಿದೆ. ಅಳುವುದು ವಿಶೇಷವಾಗಿ ಮುಖ್ಯಮಂತ್ರಿಗಳಿಗೆ ಸಹಾಯವಾಗುತ್ತದೆ..
ಅತಿಯಾಗಿ ಅಳುವುದು ರಾಜಕೀಯದಲ್ಲಿಲ್ಲ, ಕಣ್ಣೀರು ಕಡಿಮೆ ಬಳಸಿದರೇ  ಒಳ್ಳೆಯದು, ಒಂದು ವೇಳೆ ಹೆಚ್ಚಿನ ಕಣ್ಣೀರು ಒಳ್ಳೆಯದಲ್ಲ ಎಂದು ಅಜೀಂ ಪ್ರೇಮ್ ಜಿ ವಿವಿ ಪ್ರೊಫೆಸರ್ ಎ.ನಾರಾಯಣ ತಿಳಿಸಿದ್ದಾರೆ.
ದೇಶ ಪ್ರಬಲ ನಾಯಕನನ್ನು ನಿರೀಕ್ಷಿಸುತ್ತದೆ, ವಿಕ್ಟಿಮ್ ಕಾರ್ಡ್ ಪ್ಲೇ ಮಾಡುವವರನ್ನ ಬಯಸುವುದಿಲ್ಲ.ಈ ಹಿಂದೆ ಮಂತ್ರಿಯಾಗಿ ಕೆಲಸ ಮಾಡದೇ ಏಕಾಏಕಿಯಾಗಿ ಸಿಎಂ ಹುದ್ದೆ ಅಲಂಕರಿಸಿದ್ದಾರೆ, ಸಂದರ್ಬಗಳನ್ನು ಸರಿಯಾಗಿ ನಿರ್ವಹಿಸುವ ಚಾಕಚಾಕ್ಯತೆ ಹಾಗೂ  ರಾಜಕೀಯ ಪ್ರಬುದ್ಧತೆ ಇಲ್ಲದಿರುವುದು, ಪದೇ ಪದೇ ಕುಮಾರ ಸ್ವಾಮಿ ಅಳುವಿಗೆ ಕಾರಣವಾಗುತ್ತಕಿದೆ ಎಂದು ಹೇಳಿದ್ದಾರೆ,
ಅದರ ಅರ್ಥ ಅವರು ತಮಗೆ ವಹಿಸಿರುವ ಕೆಲಸವನ್ನು ಮಾಡಲು ಕಷ್ಟ ಪಡುತ್ತಿದ್ದಾರೆ ಎಂಬುದನ್ನು ತೋರಿಸುತ್ತದೆ, ಕುಮಾರ ಸ್ವಾಮಿ ಅವರ ಕಣ್ಣೀರು ಸಮ್ಮಿಶ್ರ ಸರ್ಕಾರದ ಮೇಲೆ ನೆಗಟಿವ್ ಪರಿಣಾಮ ಬೀರುತ್ತದೆ, ಎಂದು ಶಾಸ್ತ್ರಿ  ಹೇಳಿದ್ದಾರೆ, ಕುಮಾರ ಸ್ವಾಮಿ ಮನ ಪೂರ್ವಕವಾಗಿ ಅಳುತ್ತಾರೆ, ಬಿಜೆಪಿ ಮತ್ತಷ್ಟು ಪ್ರಬಲವಾಗಲು ಇದು ಸಹಾಯವಾಗುತ್ತದೆ ಎಂದು ತಿಳಿಸಿದ್ದಾರೆ,
ಇನ್ನು ಕುಮಾರ ಸ್ವಾಮಿ ಅವರ ಅಳುವನ್ನು ನೋಡಲಾಗದ ಹಾಸನದ  ಪ್ರಿಕೆಜಿ ಮಗು, ಅಳದಂತೆ ಮನವಿ ಮಾಡಿದೆ 2 ನಿಮಿಷದ ವಿಡಿಯೋದಲ್ಲಿ ಮಾತನಾಡಿರುವ ಬಾಲಕಿ, ನೀವು ಅತ್ತರೆ ನಮಗು ಅಳು ಬರುತ್ತದೆ ಎಂದು ಹೇಳಿರುವ ವಿಡಿಯೋ ವೈರಲ್ ಆಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com