ಪಕ್ಷ ವಿರೋಧಿ ಹೇಳಿಕೆ : ಮುಖಂಡರಿಂದ ವಿವರಣೆ ಬಯಸಿ ಕಾಂಗ್ರೆಸ್ ನೋಟಿಸ್

ಪಕ್ಷದ ನಾಯಕತ್ವದ ವಿರುದ್ದ ಹೇಳಿಕೆ ನೀಡಿದ್ದಕ್ಕಾಗಿ ವಿವರಣೆ ನೀಡುವಂತೆ ಇಬ್ಬರು ಹಿರಿಯ ನಾಯಕರಿಗೆ ಕೆಪಿಸಿಸಿ ನೋಟಿಸ್ ನೀಡಿದೆ. ವಾರದೊಳಗೆ ವಿವರಣೆ ನೀಡುವಂತೆ ಮಾಜಿ ಸ್ಪೀಕರ್ ಕೆ. ಬಿ. ಕೋಳಿವಾಡ್ ಮತ್ತು ಮಾಜಿ ಶಾಸಕ ಕೆ. ಎನ್. ರಾಜಣ್ಣ ಅವರಿಗೆ ಸೂಚಿಸಲಾಗಿದೆ.
ಕಾಂಗ್ರೆಸ್ ಚಿಹ್ಹೆ
ಕಾಂಗ್ರೆಸ್ ಚಿಹ್ಹೆ

ಬೆಂಗಳೂರು: 2018ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಅಧಿಕಾರ ಕಸಿದುಕೊಳ್ಳುವ ನಿಟ್ಟಿನಲ್ಲಿ ಕಾಂಗ್ರೆಸ್ ಮಹಾ ಮೈತ್ರಿಕೂಟ ರಚನೆಯತ್ತ ಗಮನ ಹರಿಸಿದ್ದು, ಜೆಡಿಎಸ್ -ಕಾಂಗ್ರೆಸ್ ಮೈತ್ರಿ ಸರ್ಕಾರದ ವಿರುದ್ಧ ಭಿನ್ನಾಭಿಪ್ರಾಯ ಸೃಷ್ಟಿಸುವಂತಹ ಹೇಳಿಕೆ ನೀಡದಂತೆ ಮುಖಂಡರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದೆ.

ಪಕ್ಷದ ನಾಯಕತ್ವದ ವಿರುದ್ದ ಹೇಳಿಕೆ ನೀಡಿದ್ದಕ್ಕಾಗಿ ವಿವರಣೆ ನೀಡುವಂತೆ ಇಬ್ಬರು ಹಿರಿಯ ನಾಯಕರಿಗೆ ಕೆಪಿಸಿಸಿ ನೋಟಿಸ್ ನೀಡಿದೆ. ವಾರದೊಳಗೆ ವಿವರಣೆ ನೀಡುವಂತೆ ಮಾಜಿ ಸ್ಪೀಕರ್ ಕೆ.ಬಿ. ಕೋಳಿವಾಡ್ ಮತ್ತು ಮಾಜಿ ಶಾಸಕ ಕೆ.ಎನ್. ರಾಜಣ್ಣ ಅವರಿಗೆ ಸೂಚಿಸಲಾಗಿದೆ.

ಕುಮಾರಸ್ವಾಮಿ ಸಾರ್ವಜನಿವಾಗಿ ಆಳಲು ಕಾಂಗ್ರೆಸ್ ನಾಯಕರು ಕಾರಣ ಎಂದು ಕೋಳಿವಾಡ್ ಹೇಳಿಕೆ ನೀಡಿದ್ದರು. ಈ ಮಧ್ಯೆ ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ಸೀಟು ಹೊಂದಾಣಿಕೆಗೆ ಸಂಬಂಧಿಸಿದಂತೆ ರಾಜಣ್ಣ ಸಾರ್ವಜನಿಕವಾಗಿ ವಿರೋಧ ವ್ಯಕ್ತಪಡಿಸಿದ್ದರು.

ನಿಮ್ಮ ಹೇಳಿಕೆಗಳು ಪಕ್ಷಕ್ಕೆ ಮುಜುಗರ ಉಂಟುಮಾಡಿವೆ. ಇದು ಪಕ್ಷ ವಿರೋಧಿ ಚಟುವಟಿಕೆಯನ್ನು ತೋರಿಸುತ್ತದೆ. ಈ ವಿಷಯವನ್ನು ಗಂಭೀರವಾಗಿ ತೆಗೆದುಕೊಂಡಿರುವುದಾಗಿ ಕೋಳಿವಾಡ್ ಗೆ ನೀಡಿರುವ ನೋಟಿಸ್ ನಲ್ಲಿ ತಿಳಿಸಲಾಗಿದೆ.ವಾರದೊಳಗೆ ವಿವರಣೆ ನೀಡಬೇಕು, ಒಂದು ವೇಳೆ ನೀಡಲು ವಿಫಲವಾದ್ದಲ್ಲಿ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಹೇಳಲಾಗಿದೆ.

ನೋಟಿಸ್ ತಮ್ಮಗೆ ತಲುಪಿಲ್ಲ. ನೋಟಿಸ್ ನೋಡಿದ ನಂತರ ಪ್ರತಿಕ್ರಿಯೆ ನೀಡುತ್ತೇನೆ. ಪಕ್ಷದೊಳಗಿನ ಕೆಲ ನಾಯಕರ ವಿರುದ್ಧ ಮಾತನಾಡಿದ್ದೇನೆ ಹೊರತು, ಪಕ್ಷ ವಿರೋಧಿ ಹೇಳಿಕೆಯನ್ನು ನೀಡಿಲ್ಲ  ಎಂದು ಕೋಳಿವಾಡ್ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com