ಸಚಿವ ಸಂಪುಟ ರಚನೆಗೆ ಜ್ಯೋತಿಷಿಗಳ ಸಲಹೆ ಕೇಳಿದ ದೇವೇಗೌಡರು!

ಯಾವುದೇ ರಾಜಕೀಯ ನಿರ್ಧಾರ ತೆಗೆದುಕೊಳ್ಳುವ ಮೊದಲು ಜ್ಯೋತಿಷಿಗಳನ್ನು ಕೇಳಿ ಮುಂದೆ ಹೆಜ್ಜೆ ಇಡುವ...
ಹೆಚ್ ಡಿ ದೇವೇಗೌಡ
ಹೆಚ್ ಡಿ ದೇವೇಗೌಡ

ಹಾಸನ: ಯಾವುದೇ ರಾಜಕೀಯ ನಿರ್ಧಾರ ತೆಗೆದುಕೊಳ್ಳುವ ಮೊದಲು ಜ್ಯೋತಿಷಿಗಳನ್ನು ಕೇಳಿ ಮುಂದೆ ಹೆಜ್ಜೆ ಇಡುವ ಮಾಜಿ ಪ್ರಧಾನಿ ಜೆಡಿಎಸ್ ವರಿಷ್ಠ ಹೆಚ್ ಡಿ ದೇವೇಗೌಡರು, ಇದೀಗ ಸಚಿವ ಸಂಪುಟ ರಚನೆ ದಿನವನ್ನು ನಾಳೆಯಿಂದ ಬುಧವಾರಕ್ಕೆ ಮುಂದೂಡಿದ್ದಾರೆ.

ಈ ಎಲ್ಲ ವಿಚಾರಗಳ ಬಗ್ಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕ್ರಾಂತಿಕಾರಿಯಾಗಿ ಯೋಚಿಸುತ್ತಿದ್ದರೆ ಇನ್ನು ಕೆಲವು ರಾಜಕೀಯ ನಾಯಕರು ವಿರೋಧಿಸುತ್ತಾರೆ. ಇನ್ನು ಕೆಲವರು ದೇವೇಗೌಡರ ಇಚ್ಛೆಯಂತೆ ನಡೆದುಕೊಳ್ಳುತ್ತಾರೆ. ಕರ್ನಾಟಕದ ಕಾಂಗ್ರೆಸ್ ಉಸ್ತುವಾರಿಯಾಗಿರುವ ಕೆ.ಸಿ.ವೇಣುಗೋಪಾಲ್ ಹೈಕಮಾಂಡ್ ನ ಸಲಹೆ ಪಡೆದು ಸಚಿವರ ಪ್ರಮಾಣವಚನ ಸ್ವೀಕಾರ ಸಮಾರಂಭವನ್ನು ಸೋಮವಾರ ನಿಗದಿಪಡಿಸಿದ್ದರು. ಆದರೆ ಇದೀಗ ದೇವೇಗೌಡರಿಂದಾಗಿ ಮುಂದೂಡಲಾಗಿದೆ.

ಮುಂದಿನ ಲೋಕಸಭೆ ಚುನಾವಣೆಯವರೆಗೆ ಇಂತಹ ಸಣ್ಣಪುಟ್ಟ ವಿಷಯಗಳಿಗೆ ವಿರೋಧ ವ್ಯಕ್ತಪಡಿಸದೆ ಜೆಡಿಎಸ್ ನಾಯಕರ ಜೊತೆ ಹೊಂದಿಕೊಂಡು ಹೋಗುವಂತೆ ಸೋನಿಯಾ ಗಾಂಧಿ, ರಾಹುಲ್ ಗಾಂಧಿಯವರು ಕಾಂಗ್ರೆಸ್ ನ ನಾಯಕರಿಗೆ ಸೂಚಿಸಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ.

ಈ ಮಧ್ಯೆ ದೇವೇಗೌಡರು ಮಾತ್ರ ಒಳ್ಳೆಯ ಮುಹೂರ್ತ ನಿಗದಿಪಡಿಸುವುದರಲ್ಲಿಯೇ ಬ್ಯುಸಿಯಾಗಿದ್ದಾರೆ. ಶಾಸಕರುಗಳು ಎಷ್ಚು ಹೊತ್ತಿಗೆ ಪ್ರಮಾಣವಚನ ಸ್ವೀಕರಿಸಬೇಕು, ವೇದಿಕೆ ಎಷ್ಟು ಹೊತ್ತಿಗೆ ಸಿದ್ದಪಡಿಸಬೇಕು, ಸಚಿವರು ಎಷ್ಟು ಹೊತ್ತಿಗೆ ವೇದಿಕೆ ಹತ್ತಬೇಕು, ಎಷ್ಟು ಹೊತ್ತಿಗೆ ಇಳಿಯಬೇಕು ಇತ್ಯಾದಿಗಳ ಕುರಿತು ಲೆಕ್ಕಾಚಾರ ಹಾಕುತ್ತಾ ಆ ಬಗ್ಗೆ ಸೂಕ್ಷ್ಮವಾಗಿ ಗಮನ ಹರಿಸುತ್ತಿದ್ದಾರೆ. ಖ್ಯಾತ ಜ್ಯೋತಿಷಿಯೊಬ್ಬರನ್ನು ಕೇಳಿ ದೇವೇಗೌಡರು ಈ ನಿರ್ಧಾರಕ್ಕೆ ಬಂದಿದ್ದಾರೆ ಎಂದು ನಂಬಲರ್ಹ ಮೂಲಗಳು ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಗೆ ತಿಳಿಸಿವೆ.

ದೇವೇಗೌಡರ ಪ್ರೀತಿಯ ಮಗನಾದ ಹೆಚ್ ಡಿ ರೇವಣ್ಣ ಸರ್ಕಾರ ರಚನೆ, ಸಚಿವರ ಪ್ರಮಾಣವಚನ ಬಗ್ಗೆ ಹೊಳೆನರಸೀಪುರ ಮತ್ತು ಶೃಂಗೇರಿಯಲ್ಲಿರುವ ಜ್ಯೋತಿಷಿಗಳ ಬಳಿ ಹೋಗಿ ಕೇಳಿದ್ದರಂತೆ. ಅವರು ಹೇಳಿದಂತೆ ಸಚಿವರ ಪ್ರಮಾಣವಚನಕ್ಕೆ ಮುಹೂರ್ತ ನಿಗದಿಪಡಿಸಲಾಗಿದೆ. ಅಲ್ಲದೆ ರೇವಣ್ಣನವರು ತಮಿಳುನಾಡಿನ ಶ್ರೀರಂಗಮ್ ದೇವಸ್ಥಾನಕ್ಕೆ ಹೋಗಿ ಅಲ್ಲಿನ ಜ್ಯೋತಿಷಿಗಳಲ್ಲಿ ತಮ್ಮ ಪಕ್ಷದ ಸಂಭಾವ್ಯ ಸಚಿವರುಗಳ ಜಾತಕದ ಬಗ್ಗೆ ಕೇಳಿ ಬಂದಿದ್ದಾರಂತೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com