ಸದ್ಯದ ಮಟ್ಟಿಗೆ ಎಂಎಲ್ ಸಿಗಳಿಗೆ ಮಂತ್ರಿ ಹುದ್ದೆ ಇಲ್ಲ: ಜೆಡಿಎಸ್ ವರಿಷ್ಠರ ತೀರ್ಮಾನ

ಸಚಿವ ಸ್ಥಾನ ಆಕಾಂಕ್ಷಿಗಳಾಗಿರುವ ಜೆಡಿಎಸ್ ನ ವಿಧಾನಪರಿಷತ್ ಸದಸ್ಯರಾದ ಟಿ ಎ ಶರವಣ ಮತ್ತು ...
ಜೆಡಿಎಸ್ ನಾಯಕರು
ಜೆಡಿಎಸ್ ನಾಯಕರು

ಬೆಂಗಳೂರು: ಸಚಿವ ಸ್ಥಾನ ಆಕಾಂಕ್ಷಿಗಳಾಗಿರುವ ಜೆಡಿಎಸ್ ನ ವಿಧಾನಪರಿಷತ್ ಸದಸ್ಯರಾದ ಟಿ ಎ ಶರವಣ ಮತ್ತು ಬಿ ಎಂ ಫಾರೂಖ್ ಮೊದಲಾದವರಿಗೆ ಸದ್ಯದ ಪರಿಸ್ಥಿತಿಯಲ್ಲಿ ಮಂತ್ರಿಗಿರಿ ನೀಡದಿರಲು ಜೆಡಿಎಸ್ ತೀರ್ಮಾನಿಸಿದೆ.

ನಿನ್ನೆ ಬೆಂಗಳೂರಿನಲ್ಲಿ ಜೆಡಿಎಸ್ ವರಿಷ್ಠ ಹೆಚ್ ಡಿ ದೇವೇಗೌಡ ನೇತೃತ್ವದಲ್ಲಿ ನಡೆದ ಜೆಡಿಸ್ ನ ಶಾಸಕಾಂಗ ಪಕ್ಷದ ಸಭೆಯಲ್ಲಿ ಈ ನಿರ್ಧಾರಕ್ಕೆ ಬರಲಾಯಿತು. ನಾಳೆಯೇ ಎಲ್ಲಾ 11 ಸಚಿವರು ಪ್ರಮಾಣವಚನ ಸ್ವೀಕರಿಸದಿರಲು ಕೂಡ ನಿನ್ನೆಯ ಸಭೆಯಲ್ಲಿ ತೀರ್ಮಾನಿಸಲಾಯಿತು. ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಮತ್ತು ಪಕ್ಷದ ರಾಷ್ಟ್ರೀಯ ಕಾರ್ಯದರ್ಶಿ ದಾನಿಶ್ ಆಲಿ ಸಭೆಯಲ್ಲಿ ಹಾಜರಿದ್ದರು.

ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರದಲ್ಲಿ ಜೆಡಿಎಸ್ ಗೆ ಕೇವಲ 11 ಸಂಪುಟ ಸಚಿವ ಸ್ಥಾನ ಲಭ್ಯವಾಗಿದ್ದು, ಇಂತಹ ಸಂದರ್ಭದಲ್ಲಿ ವಿಧಾನಪರಿಷತ್ ಸದಸ್ಯರಿಗೆ ಸಚಿವ ಸ್ಥಾನ ನೀಡುವ ಯಾವುದೇ ತರಾತುರಿಯ ನಿರ್ಧಾರ ತೆಗೆದುಕೊಳ್ಳಬಾರದೆಂಬ ನಿರ್ಧಾರಕ್ಕೆ ವರಿಷ್ಠರು ಬಂದರು. ಶಾಸಕರಲ್ಲಿಯೇ ಹಲವರು ಸಚಿವಾಕಾಂಕ್ಷಿಗಳಿದ್ದು ಅವರನ್ನು ಮೊದಲು ಸಂತುಷ್ಠಿಪಡಿಸಬೇಕಾಗಿದೆ ಎಂದು ಜೆಡಿಎಸ್ ಪದಾಧಿಕಾರಿಯೊಬ್ಬರು ತಿಳಿಸಿದ್ದಾರೆ.

ಜೆಡಿಎಸ್ ನ ಎಲ್ಲಾ 37 ಮಂದಿ ಶಾಸಕರು ಸಚಿವ ಹುದ್ದೆ ನೀಡಿಕೆಯಲ್ಲಿ ಹೆಚ್ ಡಿ ದೇವೇಗೌಡರ ತೀರ್ಮಾನಕ್ಕೆ ಬದ್ಧರಾಗಿದ್ದಾರೆ. ನಾಳೆಯೇ ಎಲ್ಲಾ 11 ಸಂಪುಟ ಸಚಿವ ಹುದ್ದೆಯನ್ನು ಹಂಚಿಕೆ ಮಾಡುತ್ತಿಲ್ಲ. ಕೆಲವು ಸ್ಥಾನಗಳನ್ನು ಸದ್ಯಕ್ಕೆ ಖಾಲಿಯಿಡಲಿದ್ದೇವೆ ಎಂದು ದನೀಶ್ ಆಲಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಗೆ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com