ಖಾಸಗಿ ವಿಮಾನಕ್ಕೆ ಬ್ರೇಕ್, ಸ್ವಂತ ಹಣದಲ್ಲೇ ಇಂಧನ: ಸರ್ಕಾರದ ಬೊಕ್ಕಸಕ್ಕೆ ಹೊರೆಯಾಗದಂತೆ ಸಿಎಂ ಕ್ರಮ

: ಅನಗತ್ಯ ಸಿಬ್ಬಂದಿ, ಕಚೇರಿಗಳ ನವೀಕರಣ ಸೇರದಂತೆ ಹಲವು ಅನುಪಯುಕ್ತ ವೆಚ್ಚಗಳಿಗೆ ಕಡಿವಾಣ ಹಾಕುವಂತೆ ಕುಮಾರ ಸ್ವಾಮಿ ಆದೇಶ ನೀಡಿದ ...
ಮುಖ್ಯ ಮಂತ್ರಿ ಕುಮಾರ ಸ್ವಾಮಿ
ಮುಖ್ಯ ಮಂತ್ರಿ ಕುಮಾರ ಸ್ವಾಮಿ
ಬೆಂಗಳೂರು: ಅನಗತ್ಯ ಸಿಬ್ಬಂದಿ, ಕಚೇರಿಗಳ ನವೀಕರಣ ಸೇರದಂತೆ ಹಲವು ಅನುಪಯುಕ್ತ ವೆಚ್ಚಗಳಿಗೆ ಕಡಿವಾಣ ಹಾಕುವಂತೆ  ಕುಮಾರ ಸ್ವಾಮಿ ಆದೇಶ ನೀಡಿದ ಬೆನ್ನಲ್ಲೇ ತಾವು ಖಾಸಗಿ ವಿಮಾನಗಳಲ್ಲಿ ಪ್ರಯಾಣಿಸುವುದಿಲ್ಲ ಎಂದು ಹೇಳಿ ಸಾರ್ವಜನಿಕರ ಹಣ ಪೋಲಾಗುವುದನ್ನು ತಪ್ಪಿಸಲು ಸಿಎಂ ಮುಂದಾಗಿದ್ದಾರೆ.
ಜಯನಗರದ ನ್ಯಾಷನಲ್ ಕಾಲೇಜಿನಲ್ಲಿ ಮಾತನಾಡಿದ ಕುಮಾರ ಸ್ವಾಮಿ, ಮೇ 17 ರಿಂದ ಮೇ 20 ರವರೆಗೆ ಸಿಎಂ ಆಗಿದ್ದ ಯಡಿಯೂರಪ್ಪನವರು ಮೂರು ದಿನಗಳಲ್ಲಿ 13 ಲಕ್ಷ ಪ್ರಯಾಣ ವೆಚ್ಚ ಮಾಡಿದ್ದಾರೆ ಎಂದು ಟೀಕಿಸಿದರು.
ಒಂದನೇ ತರಗತಿಯಿಂದ ಪದವಿಯವರೆಗೆ ಹೆಣ್ಣು ಮಕ್ಕಳಿಗೆ ಉಚಿತ ಶಿಕ್ಷಣ ನೀಡುವ ಉದ್ಧೇಶವಿದೆ ಎಂದು ಹೇಳಿದ್ದಾರೆ. ನಾನು ಅದೃಷ್ಟದಿಂದ ಸಿಎಂ ಆಗಿದ್ದೇನೆ, ಕಾಂಗ್ರೆಸ್ ಬೆಂಬಲದಿಂದಾಗಿ ನಾನು ಸಿಎಂ ಆಗಿದ್ದೇನೆ, ನನಗೆ ಗೊತ್ತಿಲ್ಲ ಅವರು ಎಲ್ಲಿಯವರೆಗೂ ಬೆಂಬಲ ನೀಡುತ್ತಾರೋ ಅಲ್ಲಿಯವರೆಗೂ ಮಾತ್ರ ನಾನು ಮುಖ್ಯಮಂತ್ರಿ, ಅಲ್ಲಿಯವರೆಗೂ ನಾನು ಸಿಎಂ ಆಗಿ ಸರಿಯಾದದದ್ದನ್ನೇ ಮಾಡುತ್ತೇನೆ ಎಂದು ಹೇಳಿದ್ದಾರೆ.
ಇನ್ನು ಅನಗತ್ಯ ವೆಚ್ಚಗಳಿಗೆ ಕಡಿವಾಣ ಹಾಕಿ,ರೈತರ ಸಾಲ ಮನ್ನಾ ಮಾಡಲು ಬಳಸುವುದಾಗಿ ತಿಳಿಸಿದ್ದಾರೆ, ಸಾರ್ವಜನಿಕರಿಂದ ಸಂಗ್ರಹಿಸಿದ ತೆರಿಗೆ ಹಣ ನ್ಯಾಯಯುತಕವಾಗಿ ಬಳಕೆಯಾಗಬೇಕು, ಹೀಗಾಗಿ ನಾನು ಖಾಸಗಿ ವಿಮಾನಗಳಲ್ಲಿ ಪ್ರಯಾಣಿಸಲು ಜನರ ಹಣವನ್ನು ದುರುಪಯೋಗ ಪಡಿಸಿಕೊಳ್ಳುವುದಿಲ್ಲ, ಸರ್ಕಾರಿ ಕಾರುಗಳನ್ನು ನಾನು ಬಳಸುವಾಗ ನನ್ನದೇ ಹಣದಿಂದ ಇಂಧನ ತುಂಬಿಸಿಕೊಳ್ಳುತ್ತೇನೆ ಎಂದು ಹೇಳಿದ್ದಾರೆ. ತೆರಿಗೆಯ ಪ್ರತಿಯೊಂದು ಪೈಸೆ ಪರಿಣಾಮಕಾರಿಯಾಗಿ ಬಳಕೆಯಾಗಬೇಕು, ಸರ್ಕಾರದ ಆರ್ಥಿಕತೆಗೆ .ಯಾವುದೇ ತೊಂದರೆಯಾಗದಂತೆ ರೈತರ ಸಾಲಮನ್ನಾ ಮಾಡುವುದಾಗಿ ಹೇಳಿದ್ದಾರೆ..
ರಾಜ್ಯದ ಹಣಕಾಸು ವ್ಯವಸ್ಥೆಗೆ ಧಕ್ಕೆಯಾಗದಂತೆ ಚೌಕಟ್ಟಿನೊಳಗೆ ಕೆಲಸ ಮಾಡುವುದಾಗಿ ತಿಳಿಸಿದ್ದಾರೆ. ಮುಖ್ಯಮಂತ್ರಿಗಳಾಗಿ ಆಯ್ಕೆಯಾದ ಹಿನ್ನೆಲೆಯಲ್ಲಿ ಅವರು ಕಾಲೇಜು ಶಿಕ್ಷಣ ಪಡೆದ ಬೆಂಗಳೂರಿನ ನ್ಯಾಷನಲ್ ಕಾಲೇಜಿನಲ್ಲಿ ಆಡಳಿತ ಮಂಡಳಿ ಸನ್ಮಾನ ಸಮಾರಂಭ ಹಮ್ಮಿಕೊಂಡಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com