ಸಂಪುಟದಿಂದ ಹೊರಟ್ಟಿ ಹೊರಗೆ: ದೊಡ್ಡ ಗೌಡರ ವಿರುದ್ಧ ಶರವಣ ಅಸಮಾಧಾನದ ಹೊಗೆ!

ಸಂಪುಟದಲ್ಲಿ ಸ್ಥಾನಕ್ಕಾಗಿ ಲಾಭಿ ನಡೆಸುತ್ತಿದ್ದ ವಿಧಾನ ಪರಿಷತ್ ಸದಸ್ಯರಿಗೆ ದೇವೇಗೌಡರ ಹೇಳಿಕೆ ತೀವ್ರ ಅಸಮಾಧಾನ ತರಿಸಿದೆ. ಸಂಪುಟದಲ್ಲಿ ಪರಿಷತ್ ಸದಸ್ಯರಿಗೆ ಸ್ಥಾನ ...
ಶರವಣ
ಶರವಣ
Updated on
ಬೆಂಗಳೂರು: ಸಂಪುಟದಲ್ಲಿ ಸ್ಥಾನಕ್ಕಾಗಿ ಲಾಭಿ ನಡೆಸುತ್ತಿದ್ದ ವಿಧಾನ ಪರಿಷತ್ ಸದಸ್ಯರಿಗೆ ದೇವೇಗೌಡರ ಹೇಳಿಕೆ ತೀವ್ರ ಅಸಮಾಧಾನ ತರಿಸಿದೆ. ಸಂಪುಟದಲ್ಲಿ ಪರಿಷತ್ ಸದಸ್ಯರಿಗೆ ಸ್ಥಾನ ಇಲ್ಲ ಎಂಬ ಹೇಳಿಕೆಯಿಂದ ಪಕ್ಷದೊಳಗೆ ಆಂತರಿಕ ಭಿನ್ನಮತ ತಲೆ ದೋರಿದೆ.
ಸೋಮವಾರ ನಡೆದ ಪಕ್ಷದ ಶಾಸಕಾಂಗ ಸಭೆಗೆ ಜೆಡಿಎಸ್ ವಿಧಾನ ಪರಿಷತ್ ಸದಸ್ಯರನ್ನು ಹೊರಗಿಟ್ಟಿತ್ತು. ಹೀಗಾಗಿ ಹಲವು ಸದಸ್ಯರು ಬಹಿರಂಗವಾಗಿ ತಮ್ಮ ಅಸಮಾಧಾನ ಹೊರ ಹಾಕಿದ್ದಾರೆ.
ಮುಖ್ಯಮಂತ್ರಿ ಕುಮಾರ ಸ್ವಾಮಿ ಮತ್ತು ದೇವೇಗೌಡರನ್ನು ಭೇಟಿ ಮಾಡಿದ ಕೆಲವು ಪರಿಷತ್ ಸದಸ್ಯರು, ಸಂಪುಟಕ್ಕೆ ತಮ್ಮನ್ನು ಸೇರಿಸಿಕೊಳ್ಳುವಂತೆ ಮನವಿ ಮಾಡಿದ್ದಾರೆ.
ತಮಗೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಖಾತೆ ಸಿಗಲಿದೆ ಎಂಬ ಭರವಸೆಯಲ್ಲಿದ್ದ ಬಸವರಾಜ ಹೊರಟ್ಟಿ ಅವರಿಗೆ ತೀವ್ರ ನಿರಾಸೆಯಾಗಿದೆ. ಬುಧವಾರ ಹೊರಟ್ಟಿ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸುವ ಸಾಧ್ಯತೆಗಳಿಲ್ಲ, 
ಈ ಸಂಬಂಧ ಪ್ರತಿಕ್ರಿಯಿಸಿರುವ ಹೊರಟ್ಟಿ ನನಗೆ ಅಸಮಾಧಾನವಿಲ್ಲ, ಯಾವುದು ನನ್ನ ಕೈಯ್ಯಲಿಲ್ಲ, ನಾನು ಯಾವುದೇ ಹುದ್ದೆಗಾಗ ಲಾಭಿ ನಡೆಸಿಲ್ಲ ಎಂದು ಹೇಳಿದ್ದಾರೆ. 
ಇನ್ನೂ ಪರಿಷತ್ ಸದಸ್ಯರಿಗೆ ಸಂಪುಟದಲ್ಲಿ ಸ್ಥಾನ ಇಲ್ಲ ಎಂಬ ಹೇಳಿಕೆಗೆ ಪ್ರತಿಕ್ರಿಯಿಸಿರುವ ಸದಸ್ಯ ಶರವಣ ನಾನು ಸಚಿವ ಸಂಪುಟದ ಪ್ರಬಲ ಆಕಾಂಕ್ಷಿಯಾಗಿದ್ದೆ, ನನ್ನನ್ನು ಸಚಿವನನಾಗಿಸುವ ಭರವಸೆ ನೀಡಿದ್ದರು, ಆದರೆ ಮಾಡಲಿಲ್ಲ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com