ಮುಖ್ಯ ಕಾರ್ಯದರ್ಶಿ ಆಹ್ವಾನದ ಮೇರೆಗೆ ಸಮಾರಂಭಕ್ಕೆ ಆಗಮಿಸಿದ್ದೇ. ರಾಜಭವನದ ಮುಂದೆ ಅರ್ಧ ಗಂಟೆ ಕಾದರೂ ಒಳಗೆ ಬರಲಾಗದೆ ವಾಪಸ್ ಹಿಂದಿರುಗಿದ್ದೇನೆ. ರಾಜಭವನದ ಒಳಗೂ ಹೊರಗೂ ತುಂಬಿದ್ದ ಜನರು, ಹೊರಗಡೆ ಇದ್ದ ವಾಹನಗಳು ಅತಿಯಾಗಿದ್ದವು. ಇವರಿಗೆ ಅನುಮತಿ ನೀಡಿದವರಾರೂ. ಅಧಿಕಾರಿಗಳ ದುರಂಹಕಾರ, ಅಜ್ಞಾನ, ರಾಜಭವನದ ಒಳಗೆ ಇರುವ ಅಧಿಕಾರಿಗಳ ದುರಂಹಕಾರದಿಂದಾಗಿ ಸಮಾರಂಭಕ್ಕೆ ಹಾಜರಾಗಲು ಆಗಲಿಲ್ಲ ಎಂದು ರಮೇಶ್ ಕುಮಾರ್ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.