ಇನ್ನು ಸಿಂಧಗಿಯ ಲಿಂಗಾಯತ ಶಾಸಕ ಎಂ,ಸಿ ಮನಗೂಳಿ ಹೆಸರು ಕೇಳಿ ಬಂದಿದ್ದು ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ. ಜೆಡಿಎಸ್ ನ ಹಿರಿಯ ಲಿಂಗಾಯತ ಶಾಸಕ ಬಸವರಾಜ ಹೊರಟ್ಟಿ ಅವರನ್ನು ನಿರ್ಲಕ್ಷ್ಯಿಸಲಾಗಿದೆ,. ಜೊತೆಗೆ ಹಿರಿಯ ಮುಖಂಡರಾದ ಹೊರಟ್ಟಿ, ಎಚ್. ವಿಶ್ವನಾಥ್, ಎ,ಟಿ ರಾಮಸ್ವಾಮಿ, ಶಿವಲಿಂಗೇಗೌಡ ಮತ್ತು ಬಿ.ಎಂ ಫರೂಕ್ ಅವರು ಸಚಿವ ಸ್ಥಾನದಿಂದ ಹೊಂಚಿತರಾಗಿದ್ದಾರೆ.