ಕರ್ನಾಟಕ ವಿಧಾನ ಪರಿಷತ್ ನ ಆರು ಕ್ಷೇತ್ರಗಳಿಗೆ ಇಂದು ಮತದಾನ

ವಿಧಾನ ಪರಿಷತ್‌ ಮೂರು ಶಿಕ್ಷಕರ ಮತ್ತು ಮೂರು ಪದವೀಧರ ಕ್ಷೇತ್ರಗಳ ಸದಸ್ಯರ ಆಯ್ಕೆಗೆ ಇಂದು ಮತದಾನ ಆರಂಭವಾಗಿದೆ. ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಬೆಂಗಳೂರು:  ವಿಧಾನ ಪರಿಷತ್‌ ಮೂರು ಶಿಕ್ಷಕರ ಮತ್ತು ಮೂರು ಪದವೀಧರ ಕ್ಷೇತ್ರಗಳ ಸದಸ್ಯರ ಆಯ್ಕೆಗೆ ಇಂದು ಮತದಾನ ಆರಂಭವಾಗಿದೆ. 
ಪರಿಷತ್ ಸಭಾಪತಿ ಡಿ.ಎಚ್ ಶಂಕರಮೂರ್ತಿ  ಸೇರಿದಂತೆ ಪದವೀಧರ ಕ್ಷೇತ್ರದಲ್ಲಿ 8 ಅಭ್ಯರ್ಥಿಗಳು ಮತ್ತು ಶಿಕ್ಷಕರ ಕ್ಷೇತ್ರದಲ್ಲಿ 12 ಅಭ್ಯರ್ಥಿಗಳು ಕಣದಲ್ಲಿದ್ದಾರೆ.
ಮರಿತಿಬ್ಬೇಗೌಡ, ರಮೇಶ್ ಬಾಬು ಕ್ಯಾಪ್ಟವ್ ಗಣೇಶ್ ಕಾರ್ಣಿಕ್, ರಾಮಚಂದ್ರ ಗೌಡ ಮತ್ತು ಅಮರನಾಥ್ ಪಾಟೀಲ್  ಕಣದಲ್ಲಿದ್ದಾರೆ. ಜೂನ್ 12 ರಂದು ಫಲಿತಾಂಶ ಹೊರಬೀಳಲಿದೆ.
ಶಿಕ್ಷಕರ ಕ್ಷೇತ್ರದಲ್ಲಿ 3,110 ಪುರುಷರು ಮತ್ತು 1,848 ಮಹಿಳೆಯರು ಸೇರಿ 4,960 ಮತದಾರರು ಹಾಗೂ ಪದವೀಧರ ಕ್ಷೇತ್ರದಲ್ಲಿ 16,913ಪುರುಷರು, 10,125 ಮಹಿಳೆಯರು ಸೇರಿ 27,044 ಮತದಾರರು ಇದ್ದಾರೆ. ಮತದಾನಕ್ಕಾಗಿ ಜಿಲ್ಲೆಯಲ್ಲಿ ಪದವೀಧರ ಕ್ಷೇತ್ರಕ್ಕೆ 42 ಮತ್ತು ಶಿಕ್ಷಕರ ಕ್ಷೇತ್ರಕ್ಕೆ 32 ಮತಗಟ್ಟೆಗಳು ಸೇರಿದಂತೆ ಒಟ್ಟು 74 ಮತಗಟ್ಟೆಗಳನ್ನು ತೆರೆಯಲಾಗಿದೆ. ಪ್ರಾಶಸ್ತ್ಯದ ಮತದಾನವಾದ್ದರಿಂದ ಇಲ್ಲಿ ಮತಯಂತ್ರಕ್ಕೆ ಬದಲಾಗಿ ಮತಪತ್ರಗಳನ್ನು ಬಳಸಲಾಗುತ್ತದೆ. ಪದವೀಧರ ಕ್ಷೇತ್ರಕ್ಕೆ ಬಿಳಿ ಬಣ್ಣದ ಮತ್ತು ಶಿಕ್ಷಕರ ಕ್ಷೇತ್ರಕ್ಕೆ ಗುಲಾಬಿ ಬಣ್ಣದ ಮತಪತ್ರ ನೀಡಲಾಗುತ್ತದೆ. 
ಚುನಾವಣೆ ಕಾರ್ಯಕ್ಕಾಗಿ 270 ಸಿಬ್ಬಂದಿ, 70 ವೀಕ್ಷಕರು ಹಾಗೂ 70 ಪೊಲೀಸ್‌ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಚುನಾವಣೆ ಆಯೋಗವು ಎಲ್ಲ ಮತಗಟ್ಟೆಗಳಲ್ಲಿ ಮತದಾನದ ಸಂಪೂರ್ಣ ಪ್ರಕ್ರಿಯೆಯೆನ್ನು ವೀಡಿಯೊ ಚಿತ್ರೀಕರಣ ಮಾಡುತ್ತಿದೆ. ಮತದಾನದ ಬಳಿಕ ಮತಪೆಟ್ಟಿಗೆಗಳನ್ನು ತಾಲೂಕು ಕೇಂದ್ರದಲ್ಲಿ ಬಳಿಕ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಂಗ್ರಹಿಸಿ, ಅಂತಿಮವಾಗಿ ಕ್ರೋಡೀಕರಿಸಿದ ಮತಪೆಟ್ಟಿಗೆಗಳನ್ನು ಮೈಸೂರಿನ ವಿಭಾಗೀಯ ಆಯುಕ್ತರಿಗೆ ಕಳುಹಿಸಲಾಗುತ್ತದೆ. ಮತ ಎಣಿಕೆಯು ಮೈಸೂರಿನಲ್ಲೇ ನಡೆಯಲಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com