ದೈತ್ಯ ನಾಯಕರ ಮನವಿಗೂ ಬಗ್ಗದ ಬಂಡಾಯಗಾರರು: ಮಧ್ಯಸ್ಥಿಕೆಗೆ ಮುಂದಾದ ಕೇಂದ್ರ ನಾಯಕರು!

ಖಾತೆ ಹಂಚಿಕೆ ಸಂಬಂಧ ಭುಗಿಲೆದ್ದಿರುವ ಅಸಮಾಧಾನ ಹಿರಿಯ ಪಕ್ಷಕ ಕಾಂಗ್ರೆಸ್ ಗೆ ಇರಿಸುಮುರಿಸು ಉಂಟು ಮಾಡಿದೆ. ಸಂಪುಟ ವಿಸ್ತರಣೆ ಮತ್ತು ಖಾತೆ ಹಂಚಿಕೆ ...
ಎಂ.ಬಿ ಪಾಟೀಲ್ ಮತ್ತು ಕುಮಾರ ಸ್ವಾಮಿ
ಎಂ.ಬಿ ಪಾಟೀಲ್ ಮತ್ತು ಕುಮಾರ ಸ್ವಾಮಿ
Updated on
ಬೆಂಗಳೂರು: ಖಾತೆ ಹಂಚಿಕೆ ಸಂಬಂಧ ಭುಗಿಲೆದ್ದಿರುವ ಅಸಮಾಧಾನ ಹಿರಿಯ ಪಕ್ಷಕ ಕಾಂಗ್ರೆಸ್ ಗೆ ಇರಿಸುಮುರಿಸು ಉಂಟು ಮಾಡಿದೆ. ಸಂಪುಟ ವಿಸ್ತರಣೆ ಮತ್ತು ಖಾತೆ ಹಂಚಿಕೆ ಸಂಬಂಧ ರಾಜ್ಯ ನಾಯಕರಲ್ಲಿ ಭಿನ್ನಮತ ಉಂಟಾಗುವುದನ್ನು ಕೇಂದ್ರ ಕಾಂಗ್ರೆಸ್ ನಾಯಕರು ನಿರೀಕ್ಷಿಸಿದ್ದರು, ಆದರೆ ಹೈಕಮಾಂಡ್ ನಿರೀಕ್ಷೆಯನ್ನು ಮೀರಿ ದೊಡ್ಡ ಪ್ರಮಾಣದಲ್ಲಿ ಆಕ್ರೋಶದ ಕಟ್ಟೆ ಒಡೆದಿರುವುದು ಪಕ್ಷಕ್ಕೆ ಅರಗಿಸಿಕೊಳ್ಳಲಾಗುತ್ತಿಲ್ಲ.
ಸಂಪುಟ ವಿಸ್ತರಣೆ ಮಾಡುವಾಗ ಹೈ ಕಮಾಂಡ್ ರಾಜ್ಯದ ಎಲ್ಲಾ ಹಿರಿಯ ಕಾಂಗ್ರೆಸ್ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಂಡಿತ್ತು. ಚುನಾವಣೆ ಪ್ರಚಾರದಲ್ಲಿ ಮುಂಚೂಣಿಯಲ್ಲಿದ್ದ ಹಲವು ನಾಯಕರು ಅಸಮಾಧಾನ ಗೊಂಡಿದ್ದಾರೆ, ಸಚಿವ ಸ್ಥಾನ ವಂಚಿತರಾಗಿರುವ ಎಂ ಬಿ ಪಾಟೀಲ್ ನೇತೃತ್ವದಲ್ಲಿ ಶಾಸಕರು ಕಳೆದ 2 ದಿನದಿಂದ ಪದೇ ಪದೇ ಸಭೆ ಸೇರುತ್ತಿರುವುದರಿಂದ ಅಂತಿಮವಾಗಿ ಕೇಂದ್ರ ನಾಯಕರೇ ಮಧ್ಯಸ್ಥಿಕೆ ವಹಿಸಲು ಮುಂದಾಗಿದ್ದಾರೆ.
ಮುಖ್ಯಮಂತ್ರಿ ಕುಮಾರ ಸ್ವಾಮಿ ಶುಕ್ರವಾರ ಎಂಬಿ ಪಾಟೀಲ್ ನಿವಾಸಕ್ಕೆ ಭೇಟಿ ನೀಡಿದ್ದು ಕಾಂಗ್ರೆಸ್ ಕ್ಯಾಂಪ್ ಗೆ ಎಚ್ಚರಿಕೆಯ ಕರೆ ಗಂಟೆಯಾಗಿದೆ, ಕುಮಾರ ಸ್ವಾಮಿ ಭೇಟಿ ಬಳಿಕ, ಎಂಬಿ ಪಾಟೀಲ್ ದೆಹಲಿಗೆ ತೆರಳಲು ಬಯಸಿದ್ದರು. ಕುಮಾರ  ಸ್ವಾಮಿ ಮಧ್ಯಸ್ಥಿಕೆ ರಾಜ್ಯ ಕಾಂಗ್ರೆಸ್ ಮುಖಂಡರ ನಾಯಕತ್ವವನ್ನು ಪ್ರಶ್ನಿಸುವಂತೆ ಮಾಡಿದೆ, ಎಐಸಿಸಿ ಪ್ರತಿನಿಧಿಗಳು ಈ ಎಲ್ಲಾ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿವೆ, ನಾವು ಸಮ್ಮಿಶ್ರ ಸರ್ಕಾರದಲ್ಲಿದ್ದೇವೆ, ಕಾಂಗ್ರೆಸ್ ಮತ್ತು ಜೆಡಿಎಸ್ ಜವಾಬ್ದಾರಿಯಾಗಿದೆ, ಶಾಸಕರನ್ನು ಸಿಎಂ ಭೇಟಿ ಮಾಡಿದರೇ ಸಮಸ್ಯೆ ಹೇಗೆ ಉಂಟಾಗುತ್ತದೆ ಎಂದು ಎಐಸಿಸಿ ಕಾರ್ಯದರ್ಶಿ ಪ್ರಶ್ನಿಸಿದ್ದಾರೆ.
ಕೆಲ ನಾಯಕರು ಅಸಮಾಧಾನಗೊಳ್ಳುತ್ತಾರೆ ಎಂಬುದು ತಿಳಿದಿತ್ತು, ಆದರೆ ಅದು ಈ ಮಟ್ಟಕ್ಕೆ ಹೋಗುತ್ತದೆ ಎಂದು ನಿರೀಕ್ಷಿಸಿರಲಿಲ್ಲ, ಎಂದು ಕರ್ನಾಟಕ ಮೂಲದ ಕೇಂದ್ರ ಕಾಂಗ್ರೆಸ್ ನಾಯಕರೊಬ್ಬರು ಹೇಳಿದ್ದಾರೆ. ಎಐಸಿಸಿ ಪ್ರದಾನ ಕಾರ್ಯದರ್ಶಿ ಕೆ,ಸಿ ವೇಣುಗೋಪಾಲ್ ಗೈರು ಪರಿಸ್ಥಿತಿಗೆ ಮತ್ತಷ್ಟು ಸಹಾಯಕವಾಗಿದೆ. ಎಲ್ಲಾ ಅತೃಪ್ತ ಶಾಸಕರೊಂದಿಗೆ  ವೇಣುಗೋಪಾಲ್ ಸಂಪರ್ಕದಲ್ಲಿದ್ದಾರೆ, ಅಗತ್ಯ ಬಿದ್ದರೆ ಗುಲಾಂ ನಬಿ ಆಜಾದ್ ಕೂಡ ಬರುತ್ತಾರೆ ಎಂದು ಮೂಲಗಳು ತಿಳಿಸಿವೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com