
ಮೈಸೂರು: ಹಣದ ಪ್ರಾಬಲ್ಯ ಮತ್ತು ಜಾತಿ ರಾಜಕೀಯ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ನನ್ನ ತಂದೆ ಸಿದ್ದರಾಮಯ್ಯನವರ ಸೋಲಿಗೆ ಕಾರಣವಾಯಿತು ಎಂದು ವರುಣಾ ಕ್ಷೇತ್ರದ ಶಾಸಕ ಡಾ ಯತೀಂದ್ರ ಹೇಳಿದ್ದಾರೆ.
ಕಾಂಗ್ರೆಸ್ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ವಿರೋಧ ಪಕ್ಷಗಳ ಹಣದ ಪ್ರಭಾವ ಮತ್ತು ಜಾತಿ ರಾಜಕೀಯ ನನ್ನ ತಂದೆಯವರ ಸೋಲಿಗೆ ಎರಡು ಮುಖ್ಯ ಕಾರಣಗಳು. ಆದರೆ ಬಾದಾಮಿ ಕ್ಷೇತ್ರದ ಜನತೆ ಸಿದ್ದರಾಮಯ್ಯನವರನ್ನು ಕೈಬಿಡಲಿಲ್ಲ. ಬಾದಾಮಿ ಜನತೆ ನನ್ನ ತಂದೆಯನ್ನು ಬೆಂಬಲಿಸಿದ್ದಕ್ಕಾಗಿ ನಾನು ಅವರಿಗೆ ಕೃತಜ್ಞತೆ ಹೇಳುತ್ತೇನೆ ಎಂದರು.
ಮಾಜಿ ಮುಖ್ಯಮಂತ್ರಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯನವರ ಕಿರಿಯ ಪುತ್ರ ಡಾ ಯತೀಂದ್ರ ವರುಣಾ ಕ್ಷೇತ್ರದ ನೂತನ ಶಾಸಕರಾಗಿ ಆಯ್ಕೆಯಾಗಿದ್ದಾರೆ.
Advertisement