ಉದ್ಯೋಗ ಸೃಷ್ಟಿ, ಸುಗಮ ರಸ್ತೆ ಸಂಚಾರಕ್ಕೆ ನನ್ನ ಮೊದಲ ಆದ್ಯತೆ: ಸೌಮ್ಯಾ ರೆಡ್ಡಿ

ಶಾಸಕಿಯಾಗಿ ಆಯ್ಕೆಯಾಗುವುದಕ್ಕೂ ಮುನ್ನ ಸೌಮ್ಯ ರೆಡ್ಡಿ ಪರಿಸರ ಸಂಬಂಧಿ ವಿಷಯಗಳು ಹಾಗೂ ಪ್ರಾಣಿ ಹಕ್ಕು ವಿಷಯವಾಗಿ ಜಯನಗರ ಭಾಗದ ಜನ...
ಸೌಮ್ಯಾ ರೆಡ್ಡಿ
ಸೌಮ್ಯಾ ರೆಡ್ಡಿ
ಬೆಂಗಳೂರು: ಶಾಸಕಿಯಾಗಿ ಆಯ್ಕೆಯಾಗುವುದಕ್ಕೂ ಮುನ್ನ ಸೌಮ್ಯ ರೆಡ್ಡಿ ಪರಿಸರ ಸಂಬಂಧಿ ವಿಷಯಗಳು ಹಾಗೂ ಪ್ರಾಣಿ ಹಕ್ಕು ವಿಷಯವಾಗಿ  ಜಯನಗರ ಭಾಗದ ಜನರಿಗೆ ಚಿರ ಪರಿಚಿತರು.ಜಯನಗರ ವಿಧಾನಸಭೆ ಕ್ಷೇತ್ರದಿಂದ ಶಾಸಕಿಯಾಗಿ ಆಯ್ಕೆಯಾಗಿರುವ ಸೌಮ್ಯಾ ರೆಡ್ಡಿ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ಸಂದರ್ಶನ ನೀಡಿದ್ದಾರೆ.
ನಿಮ್ಮ ತಂದೆಯ ಹಿಂದಿನ ಕ್ಷೇತ್ರಕ್ಕೆ ನೀವು ಶಾಸಕಿಯಾಗಿರುವುದು ಹೇಗೆ ಅನಿಸುತ್ತದೆ?
ನಿಜಕ್ಕೂ ನನಗೆ ತುಂಬಾ ಹೆಮ್ಮೆ ಹಾಗೂ ನಾನು ಆಬಾರಿಯಾಗಿದ್ದೇನೆ. ಇದು ಕೇವಲ ನನ್ನ ಗೆಲುವು ಮಾತ್ರವಲ್ಲ, ಪಕ್ಷದ ಕಾರ್ಯಕರ್ತರ ಗೆಲುವು, ಜಯನಗರದ ಜನತೆ ಹಾಗೂ ನನ್ನ ತಂದೆ ಮತ್ತು ಪಕ್ಷದ ಮುಖಂಡರ ಗೆಲುವಾಗಿದೆ. ಜಯನಗರವನ್ನು ಮಾದರಿ ಕ್ಷೇತ್ರವಾಗಿಸುವುದೇ ನನ್ನ ಉದ್ದೇಶ
ನಿಮ್ಮ ಪರವಾಗಿ ಕೆಲಸ ಮಾಡಿದ ಅಂಶ ಯಾವುದು?
ನನ್ನ ತಂದೆ ಈ ಕ್ಷೇತ್ರವನ್ನು ನಾಲ್ಕು ಬಾರಿ ಪ್ರತಿನಿಧಿಸಿದ್ದಾರೆ, ಅವರು ಬೇರೆ ಕ್ಷೇತ್ರಕ್ಕೆ ಹೋದರೂ ಕೂಡ ಇಲ್ಲಿನ ಜನರ ಜೊತೆ ನನ್ನ ತಂದೆ ಸಂಪರ್ಕದಲ್ಲಿದ್ದರು. ಬೆಂಬಲಿಗರ ಅವಿರತ ಶ್ರಮ ಪಕ್ಷದ ನಾಯಕರ ಕಾರ್ಯಕರ್ತರ ಕೆಲಸದಿಂದಾಗಿ ನನ್ನ ಗೆಲುವು ಸಾಧ್ಯವಾಯಿತು. ಮಹಿಳಾ ವಿಷಯಗಳು ಪರಿಸರ ಮತ್ತು ಮಾನವ ಹಕ್ಕುಗಳ ಸಂಬಂಧ ನಾನು ಮಾಡಿದ ಕೆಲಸವನ್ನು ಇಲ್ಲಿನ ಜನ ಗುರುತಿಸಿದ್ದಾರೆ,
ಸಾಮಾಜಿಕ ಕಾರ್ಯಕರ್ತೆಯಾಗಿ ನೀವು ಮಾಡಿರುವ ಕೆಲಸ ಸಕರಾತ್ಮಕ  ಇಮೇಜ್ ಗೆ ಕಾರಣವಾಯಿತೆ?
ಕಳೆದ 15 ವರ್ಷಗಳಿಂದ  ನಾನು ಮಾಡಿರುವ ಕೆಲಸ ಹಾಗೂ ನನ್ನ ಸಾಮರ್ಥ್ಯ ನೋಡಿ ಪಕ್ಷ ನನಗೆ ಟಿಕೆಟ್ ನೀಡಿದ್ದು, ನನ್ನ ಕೆಲಸಗಳು ನನ್ನ ಗೆಲುವಿಗೆ ಸಹಾಯ ಮಾಡಿವೆ.
ಜಯನಗರದ ಬಗ್ಗೆ ನಿಮ್ಮ ದೃಷ್ಠಿಯೇನು?
ಒಬ್ಬ ಮಹಿಳೆಯಾಗಿ ನನ್ನ ಮುಂದೆ ಹಲವು ಸಮಸ್ಯೆಗಳಿವೆ,  ಕಳೆದ 1 ವರ್ಷದಿಂದ ಈ ಭಾಗದ ಜನರ ಜೊತೆ ಕಾಲ ಕಳೆದಿದ್ದೇನೆ.  ವಾರ್ಡ್ ಮಟ್ಟದಲ್ಲಿ ಹಲವು ಸಮಸ್ಯೆಗಳನ್ನು ಗುರುತಿಸಿದ್ದೇನೆ. ಯುವಕರಿಗೆ ನಿರುದ್ಯೋಗ ಸಮಸ್ಯೆ ಹೆಚ್ಚಿದೆ, ಗುಂಡಿಗಳು, ರಸ್ತೆ ಸಂಚಾರ ಸಮಸ್ಯೆ,  ಸಾರ್ವಜನಿಕ ಆಸ್ಪತ್ರೆ ಶಾಲೆ ಕಾಲೇಜುಗಳ ಕಟ್ಟಡಗಳನ್ನು ಮೇಲ್ಜರ್ಜಗೇರಿಸಬೇಕು. ಹಸಿರನ್ನು ಸಂರಕ್ಷಿಸಿ, ಘನ ತ್ಯಾಜ್ಯ ನಿರ್ವಹಣೆ, ನನ್ನ ಕರ್ತವ್ಯವಾಗಿದೆ, ಜಯನಗರವನ್ನು ಕಸಮುಕ್ತ ಕ್ಷೇತ್ರವಾಗಿಸುವುದಕ್ಕೆ ನನ್ನ ಆದ್ಯತೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com