ಪರಿಷತ್ ಗೆ ಒಬ್ಬ ಆಟೋ ಚಾಲಕರ ನಾಮನಿರ್ದೇಶನ: ಈಡೇರದೇ ಉಳಿದಿರುವ ಕುಮಾರಸ್ವಾಮಿ ಭರವಸೆಗಳು ಇವು!

ಜೆಡಿಎಸ್ ಅಧಿಕಾರಕ್ಕೆ ಬಂದ 1 ತಿಂಗಳೊಳಗೆ ಆಟೋ ಚಾಲಕರ ಪ್ರತಿನಿಧಿಯೊಬ್ಬರನ್ನು ವಿಧಾನ ಪರಿಷತ್ ನಾಮ ನಿರ್ದೇಶನ ಮಾಡುವುದಾಗಿ....
ಕುಮಾರಸ್ವಾಮಿ
ಕುಮಾರಸ್ವಾಮಿ
ಬೆಂಗಳೂರು: ಜೆಡಿಎಸ್ ಅಧಿಕಾರಕ್ಕೆ ಬಂದ 1 ತಿಂಗಳೊಳಗೆ ಆಟೋ ಚಾಲಕರ ಪ್ರತಿನಿಧಿಯೊಬ್ಬರನ್ನು ವಿಧಾನ ಪರಿಷತ್ ನಾಮಕರಣ ಮಾಡುವುದಾಗಿ ಸಿಎಂ ಕುಮಾರ ಸ್ವಾಮಿ ರಾಜ್ಯ ವಿಧಾನ ಸಭೆ ಚುನಾವಣೆಗೆ 2 ತಿಂಗಳು ಮೊದಲು ಭರವಸೆ ನೀಡಿದ್ದರು. 
ಕುಮಾರ ಸ್ವಾಮಿ ಸಿಎಂ ಆಗಿದ್ದಾರೆ, ಪಕ್ಷ ಅಧಿಕಾರಕ್ಕೆ ಬಂದಿದೆ, ಆಧರೆ ನೀಡಿದ್ದ ಭರವಸೆ ಮಾತ್ರ ಈಡೇರಿಲ್ಲ, ಈ ವರ್ಷದ ಫೆಬ್ರವರಿಯಲ್ಲಿ ಟಾನ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಕುಮಾರ ಸ್ವಾಮಿ ಆಟೋರಿಕ್ಷಾ ಚಾಲಕರು ಮತ್ತು ಕ್ಯಾಬ್ ಚಾಲಕರ ಜೊತೆ ಸಂವಾದ ನಡೆಸಿದ್ದರು.  ಈ ವೇಳೆ ಜೆಡಿಎಸ್ ಬೆಂಬಲಿಸುವಂತೆ ಮನವಿ ಮಾಡಿದ್ದರು. ತಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ನಿಮ್ಮಲ್ಲಿ ಒಬ್ಬರನ್ನು ವಿಧಾನಸೌಧ ಪ್ರವೇಶಕ್ಕೆ ಅವಕಾಶ ನೀಡುವುದಾಗಿ ಹೇಳಿದ್ದರು. ಮೇ 23 ರಂದು ಕುಮಾರ ಸ್ವಾಮಿ ಸಿಎಂ ಪ್ರಮಾಣ ವಚನ ಸ್ವೀಕರಿಸಿದ್ದಾರೆ, ಆದರೆ ತಾವು ನೀಡಿದ್ದ ಭರವಸೆ ಮಾತ್ರ ಇನ್ನೂ ಈಡೇರಿಲ್ಲ.
ಕುಮಾರ ಸ್ವಾಮಿ ಸಮ್ಮಿಶ್ರ ಸರ್ಕಾರದ ಸಿಎಂ ಆಗಿದ್ದಾರೆ, ಹೀಗಾಗಿ ಭರವಸೆ ಈಡೇರಿಸಲಾಗುವುದಿಲ್ಲ, ಒಂದು ವೇಳೆ ನಮ್ಮ ಪಕ್ಷ ಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ಬಂದಿದ್ದರೇ ಖಂಡಿತವಾಗಿಯೂ ಕುಮಾರ ಸ್ವಾಮಿ ತಮ್ಮ ಮಾತನ್ನು ನೆರವೇರಿಸುತ್ತಿದ್ದರು ಎಂದು ಜೆಡಿಎಸ್ ಎಂಎಲ್ಸಿ ಟಿಎ ಶರವಣ ಹೇಳಿದ್ದಾರೆ.
ನಮ್ಮ 37 ಶಾಸಕರನ್ನು ಮಾತ್ರ ಜನ ಗೆಲ್ಲಿಸಿದ್ದಾರೆ, ಹೀಗಾಗಿ ಆಟೋ ರಿಕ್ಷಾ ಅಥವಾ ಕ್ಯಾಬ್ ಚಾಲಕರನ್ನು  ಎಂಎಲ್ಸಿ ಮಾಡಲು ಸಾಧ್ಯವಿಲ್ಲ, ನಾವು ಅಧಿಕಾರಕ್ಕೆ ಬಂದಿದ್ವೇವೆ,ಅದರೆ ಅದಕ್ಕೆ ಅನೇಕ ಹೊರಗಿನವರು ಸಹಾಯ ಮಾಡಿದ್ದಾರೆ, ಪ್ರಭಾವಿ ವ್ಯಕ್ತಿಗಳನ್ನು ನಾಮಕರಣ ಮಾಡುವಂತೆ ಜೆಡಿಎಸ್ ಮೇಲೆ ಒತ್ತಡವಿದೆ. ಆದರೆ ಈಗ ಆಟೋ ಚಾಲಕರೊಬ್ಬರನ್ನು ನಾಮ ನಿರ್ದೇಶನ ಮಾಡಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ಕುಮಾರ ಸ್ವಾಮಿ ಘೋಷಣೆ ಮಾಡುವುದರಲ್ಲಿ ನಿಸ್ಸೀಮರು, ಆದರೆ ಅದನ್ನು ಪೂರ್ಣಗೊಳಿಸುವುದು ಅವರಿಂದ ಸಾಧ್ಯವಿಲ್ಲ ಎಂದು ಬಿಜೆಪಿ ವಕ್ತಾರ ಪ್ರಕಾಶ್ ಹೇಳಿದ್ದಾರೆ., 
ಕುಮಾರ ಸ್ವಾಮಿ ಅವರು ನೀಡಿದ ಹೇಳಿಕೆ ರಾಜಕೀಯ ಗಿಮಿಕ್ ಅಷ್ಟೆ,. ಒಂದು ವೇಳೆ ಅವರಿಗೆ ಬಹುಮತ ಸಿಕ್ಕಿ ಅಧಿಕಾರಕ್ಕೆ ಬಂದಿದ್ದರೂ ಅವರು ಆಟೋ ಚಾಲಕರನ್ನು ನಾಮ ನಿರ್ದೇಶನ ಮಾಡುತ್ತಿರಲಿಲ್ಲ, ಬದಲಿಗೆ ಪಕ್ಷಕ್ಕೆ ಧನ ಸಹಾಯ ಮಾಡಿದ ಶ್ರೀಮಂತರಿಗೆ ಹಾಗೂ ಪ್ರಭಾವಿ ವ್ಯಕ್ತಿಗಳನ್ನೇ ನೇಮಕ ಮಾಡುತ್ತಿದ್ದರು, ನಾವೆಲ್ಲಾ ಕೇವಲ ಆಟೋ ಚಾಲಕರಷ್ಟೇ ಎಂದು ಆದರ್ಶ ಆಟೋ ಚಾಲಕರ ಸಂಘದ ಅಧ್ಯಕ್ಷ ಮಂಜುನಾಥ್ ಆರೋಪಿಸಿದ್ದಾರೆ.
ಈಡೇರದೇ ಹಾಗೆಯೇ ಉಳಿದಿರುವ ಕುಮಾರ ಸ್ವಾಮಿ ನೀಡಿದ್ದ ಭರವಸೆಗಳಿವು:
  • ರೈತರ ಸಾಲಮನ್ನಾ
  • ಮುಸ್ಲಿಂ ನಾಯಕನನ್ನು ಉಪಮುಖ್ಯಮಂತ್ರಿಯಾಗಿಸುವುದು
  • ಆಟೋ ಚಾಲಕರೊಬ್ಬರನ್ನು  ವಿಧಾನ ಪರಿಷತ್ ಗೆ ನಾಮ ನಿರ್ದೇಶನ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com