ಸಿದ್ದರಾಮಯ್ಯ ಸರ್ಕಾರದ 'ಭಾಗ್ಯ'ಗಳ ಮುಂದುವರಿಕೆ: ಶೀಘ್ರವೇ ನಿಗಮ-ಮಂಡಳಿ ನೇಮಕ

ರಾಜ್ಯದಲ್ಲಿನ ಸಮ್ಮಿಶ್ರ ಸರ್ಕಾರದಲ್ಲಿ ಸಮನ್ವಯ ಸಾಧಿಸಲು ರಚಿಸಲಾಗಿರುವ ಜೆಡಿಎಸ್ ಕಾಂಗ್ರೆಸ್ ಸಮನ್ವಯ ಸಮಿತಿ ಸಭೆ ಗುರುವಾರ ...
ಸಮನ್ವಯ ಸಮಿತಿ ಸಭೆಗೆ ತೆರಳುತ್ತಿರುವ ಸಿದ್ದರಾಮಯ್ಯ ಡಿಸಿಎಂ ಪರಮೇಶ್ವರ್ ಮತ್ತು ವೇಣುಗೋಪಾಲ್
ಸಮನ್ವಯ ಸಮಿತಿ ಸಭೆಗೆ ತೆರಳುತ್ತಿರುವ ಸಿದ್ದರಾಮಯ್ಯ ಡಿಸಿಎಂ ಪರಮೇಶ್ವರ್ ಮತ್ತು ವೇಣುಗೋಪಾಲ್
ಬೆಂಗಳೂರು: ರಾಜ್ಯದಲ್ಲಿನ ಸಮ್ಮಿಶ್ರ ಸರ್ಕಾರದಲ್ಲಿ ಸಮನ್ವಯ ಸಾಧಿಸಲು ರಚಿಸಲಾಗಿರುವ ಜೆಡಿಎಸ್ ಕಾಂಗ್ರೆಸ್ ಸಮನ್ವಯ ಸಮಿತಿ ಸಭೆ ಗುರುವಾರ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆಯಿತು. 
ಕಾಂಗ್ರೆಸ್ ಜೆಡಿಎಸ್‌ನವರು ಪ್ರತ್ಯೇಕ ಪ್ರಣಾಳಿಕೆ ಬಿಡುಗಡೆ ಮಾಡಿತ್ತು. ಸಮ್ಮಿಶ್ರ ಸರ್ಕಾರ ಆದ ಕಾರಣ ಎರಡು ಪ್ರಣಾಳಿಕೆಯನ್ನು ಜಾರಿಗೊಳಿಸೋದು ಕಷ್ಟದ ಕೆಲಸ. ಇದು ಐದು ವರ್ಷದ ಪ್ರಣಾಳಿಕೆ. ಹೀಗಾಗಿ ಒಂದು ಕಮಿಟಿ ಮಾಡಲು ತೀರ್ಮಾನಿಸಲಾಗಿದೆ. ಕಾಂಗ್ರೆಸ್‌ನಿಂದ ಮೂರು ಮತ್ತು ಜೆಡಿಎಸ್‌ನಿಂದ ಇಬ್ಬರು ಇರುತ್ತಾರೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. 
ಸಾಮಾನ್ಯ ಕನಿಷ್ಠ ಕಾರ್ಯಕ್ರಮ ರೂಪಿಸಲಾಗುತ್ತದೆ. ಆ ಬಗ್ಗೆ 10 ದಿನದೊಳಗೆ ವರದಿ ಕೊಡಬೇಕು. ಅದನ್ನು ಸಮಿತಿ ಮುಂದೆ ಚರ್ಚಿಸಿ ತೀರ್ಮಾನಿಸಲಾಗುತ್ತದೆ ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ. ಹಿಂದಿನ ಸರ್ಕಾರ ಮಾಡಿದ ಎಲ್ಲಾ ಪ್ರಮುಖ ಯೋಜನೆಗಳು ಹಾಗೂ ಬಜೆಟ್ ಹಾಗೆಯೇ ಮುಂದುವರಿಯುತ್ತದೆ. ಸಾಮಾನ್ಯ ಕನಿಷ್ಠ ಕಾರ್ಯಕ್ರಮ ಜಾರಿಯಾದ ಮೇಲೆ ಹೊಸ ಯೋಜನೆ ಜಾರಿ ಮಾಡಲಾಗುತ್ತದೆ. 
ಸಿಎಂ ಹಾಗೂ ಡಿಸಿಎಂ ಚರ್ಚೆ ಮಾಡಿ ಮೊದಲು 30 ನಿಗಮ ಮಂಡಳಿಗಳಿಗೆ ನೇಮಕ ಮಾಡಲಾಗುತ್ತದೆ. ಅತೃಪ್ತ ಶಾಸಕರ ಬಗ್ಗೆ ಕೂಡ ಚರ್ಚೆ ಮಾಡಿದ್ದೇವೆ. ಜತೆಗೆ ಜಿಲ್ಲಾ ಉಸ್ತುವಾರಿ ಸಚಿವರ ನೇಮಕ ವಿಚಾರ ಆಡಳಿತಾತ್ಮಕ ತೀರ್ಮಾನ. ಅದನ್ನು ಸಿಎಂ, ಡಿಸಿಎಂ ಮಾಡುತ್ತಾರೆ ಎಂದು ಹೇಳಿದ್ದಾರೆ.
ಇನ್ನೂ ಎರಡು ಪಕ್ಷಗಳಲ್ಲಿ ಶಾಸಕರ ಭಿನ್ನಮತವಿದ್ದು, ಅದನ್ನು ನಿವಾರಿಸಲು ಎರಡು ಪಕ್ಷಗಳ ಮುಖಂಡರು ಇದನ್ನು ಬಗೆಹರಿಸಲು ಪ್ರಯತ್ನಿಸಲಾಗುವುದು ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com