ಸಾಮಾನ್ಯ ಕನಿಷ್ಠ ಕಾರ್ಯಕ್ರಮ‌ ಸಮಿತಿಯಲ್ಲಿ ಎಚ್.ಡಿ ರೇವಣ್ಣ, ಮೊಯ್ಲಿಗೆ ಸ್ಥಾನ

ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ ಮೊದಲ ಸಭೆಯ ನಂತರ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ಸಾಮಾನ್ಯ ಕನಿಷ್ಠ ಕಾರ್ಯಕ್ರಮ‌ ರೂಪಿಸಲು ...
ರೇವಣ್ಣ ಮತ್ತು ವೀರಪ್ಪ ಮೊಯ್ಲಿ
ರೇವಣ್ಣ ಮತ್ತು ವೀರಪ್ಪ ಮೊಯ್ಲಿ
ಬೆಂಗಳೂರು:  ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ ಮೊದಲ ಸಭೆಯ ನಂತರ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ಸಾಮಾನ್ಯ ಕನಿಷ್ಠ ಕಾರ್ಯಕ್ರಮ‌ ರೂಪಿಸಲು ಸಮಿತಿಯನ್ನು ರಚಿಸಿವೆ.
ಸಮಿತಿಯಲ್ಲಿ ಮೂವರು ಕಾಂಗ್ರೆಸ್​ ಮತ್ತು ಇಬ್ಬರು ಜೆಡಿಎಸ್​ ಸದಸ್ಯರಿದ್ದಾರೆ. ಕಾಂಗ್ರೆಸ್​ನಿಂದ ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ, ಸಚಿವರಾದ ಆರ್‌.ವಿ.ದೇಶಪಾಂಡೆ ಮತ್ತು ಡಿ.ಕೆ.ಶಿವಕುಮಾರ್‌ ಇದ್ದರೆ, ಜೆಡಿಎಸ್​ನಿಂದ ಸಚಿವ ಎಚ್​.ಡಿ ರೇವಣ್ಣ ಮತ್ತು ಎಸ್​. ಸುಬ್ರಹ್ಮಣ್ಯ ಅವರಿದ್ದಾರೆ.
ಇನ್ನು ಸಮ್ಮಿಶ್ರ ಸರ್ಕಾರ ಇರುವುದರಿಂದ ಎರಡೂ ಪ್ರಣಾಳಿಕೆ ಜಾರಿ ಮಾಡುವುದು ಕಷ್ಟದ ಕೆಲಸ. ಆದ್ದರಿಂದ ಎರಡೂ ಪ್ರಣಾಳಿಕೆಗಳಲ್ಲಿನ ಸಾಮಾನ್ಯ ಕನಿಷ್ಠ ಕಾರ್ಯಕ್ರಮಗಳನ್ನು ಪಟ್ಟಿ ಮಾಡಿ ಜಾರಿ ಮಾಡಲಾಗುವುದು, ಸಾಮಾನ್ಯ ಕನಿಷ್ಠ ಕಾರ್ಯಕ್ರಮಗಳನ್ನು ಪಟ್ಟಿ ಮಾಡಲು ಸಮಿತಿ ರಚಿಸಲಾಗುವುದು. ಸಮಿತಿಯು ಇನ್ನು ಹತ್ತು ದಿನದಲ್ಲಿ ವರದಿ ನೀಡಲಿದೆ ಎಂದು ಸಿದ್ದರಾಮಯ್ಯ ಅವರು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com