ಇಲಾಖೆ ಕೆಲಸ ಬಿಟ್ಟು ಬೇರೇನೂ ಮಾಡಿಲ್ಲ, ಸೂಪರ್ ಸಿಎಂ ನಾನಲ್ಲ: ಎಚ್.ಡಿ ರೇವಣ್ಣ

ರೇವಣ್ಣ ಸೂಪರ್ ಸಿಎಂ ಆಗಿದ್ದಾರೆ ಎಂದು ಎಲ್ಲರೂ ಪುಕ್ಕಟೆ ಪ್ರಚಾರ ಕೊಡುತ್ತಿದ್ದಾರೆ. ಆದರೆ ಲೋಕೋಪಯೋಗಿ ಇಲಾಖೆ ಕೆಲಸ ಬಿಟ್ಟು ಬೇರೇನೂ ನಾನು ಮಾಡಿಲ್ಲ
ಲೋಕೋಪಯೋಗಿ ಸಚಿವ ಎಚ್​.ಡಿ ರೇವಣ್ಣ
ಲೋಕೋಪಯೋಗಿ ಸಚಿವ ಎಚ್​.ಡಿ ರೇವಣ್ಣ
ಹುಬ್ಬಳ್ಳಿ: ರೇವಣ್ಣ ಸೂಪರ್ ಸಿಎಂ ಆಗಿದ್ದಾರೆ ಎಂದು ಎಲ್ಲರೂ ಪುಕ್ಕಟೆ ಪ್ರಚಾರ ಕೊಡುತ್ತಿದ್ದಾರೆ. ಆದರೆ ಲೋಕೋಪಯೋಗಿ ಇಲಾಖೆ ಕೆಲಸ ಬಿಟ್ಟು ಬೇರೇನೂ ನಾನು ಮಾಡಿಲ್ಲ ಎನ್ನುವುದಾಗಿ ಲೋಕೋಪಯೋಗಿ ಸಚಿವ ಎಚ್​.ಡಿ ರೇವಣ್ಣ ಹೇಳಿದ್ದಾರೆ.
ಹುಬ್ಬಳ್ಳಿಯಲ್ಲಿ ನಡೆದ  ಅಧಿಕಾರಿಗಳ ಸಭೆ ಬಳಿಕ ಮಾದ್ಯಮಗಳ ಜತೆ ಮಾತನಾಡಿದ ಸಚಿವರು ಜನಸಂಪನ್ಮೂಲ ಹಾಗೂ ವೈದ್ಯಕೀಯ ಸಚಿವ ಡಿ.ಕೆ ಶಿವಕುಮಾರ್ ಮತ್ತು ನಾನು ಚೆನಾಗಿದ್ದೇವೆ. ಆದರೆ ಕೆಲ ಮಂದಿ ನಮ್ಮಗಳ ನಡುವೆ ಜಗಳ ತಂದಿಡಲು ಪ್ರಯತ್ನಿಸುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
"ನೀರಾವರಿ ಇಲಾಖೆಯಲ್ಲಿ ನಾನು ಯಾವ ಹಸ್ತಕ್ಷೇಪ ಮಾಡಿಲ್ಲ ಎಂದು ಬಹಿರಂಗವಾಗಿ ಹೇಳಿದ್ದೇನೆ. ಡಿ.ಕೆ. ಶಿವಕುಮಾರ್ ಹಾಗೂ ಣಾನು ಚೆನ್ನಾಗಿದ್ದೇವೆ.ನಾನು ಸೂಪರ್ ಸಿಎಂ ಆಗಿದ್ದೇನೆ ಎಂದು ಪುಕ್ಕಟೆ ಪ್ರಚಾರ ಕೊಡುತ್ತಿದ್ದಾರೆ. ಆದರೆ ಣಾನು ನನ್ನ ಇಲಾಖೆಯಾದ ಲೋಕೋಪಯೋಗಿ ಇಲಾಖೆ ಕೆಲಸ ಬಿಟ್ಟು ಬೇರೆ ಕೆಲಸ ಮಾಡಿಲ್ಲ." ಸಚಿವರು ಹೇಳಿದರು.
ಬಜೆಟ್ ಬಗ್ಗೆ ಕೇಳಿದರೆ ಸಲಹೆ ನೀಡುವೆ
ಪೂರ್ಣ ಪ್ರಮಾಣದ ಬಜೆಟ್, ಪೂರಕ ಬಜೆಟ್ ಮಂಡನೆ ಬಗ್ಗೆ ನನ್ನ ಬಳಿ ಯಾರೇ ಸಲಹೆ ಕೇಳಿದರೆ ಅವರಿಗೆ ಸಲಹೆ ನಿಡುತ್ತೇನೆ. ಎಂದು ಹೇಳಿರುವ ರೇವಣ್ಣ ಬಸವರಾಜ ಹೊರಟ್ಟಿ ಉನ್ನತ ಶಿಕ್ಷಣ ಇಲಾಖೆಗೆ ಅಪಾರ ಕೊಡುಗೆ ನೀಡಿದ್ದಾರೆ.30 ವರ್ಷಗಳಲ್ಲಿ ಹಲವಾರು ಸಮಸ್ಯೆಗಳನ್ನು ಅವರು ಬಗೆಹರಿಸಿದ್ದಾರೆ.ಹೊರಟ್ಟಿ ಮತ್ತು ಕೋನರಡ್ಡಿ ಇಬ್ಬರಿಗೂ ಸೂಕ್ತ ಸ್ಥಾನಮಾನ ಸಿಗಬೇಕಿದೆ ಎಂದರು.
ಸರ್ಕಾರ ಐದು ವರ್ಷ ಸಂಪೂರ್ಣ ಅಧಿಕಾರದಲ್ಲಿದೆ. ಎಂದು ವಿಶ್ವಾಸ ವ್ಯಕ್ತಪಡಿಸಿದ ಸಚಿವರು ವರ್ಗಾವಣೆ ವಿಚಾರವಾಗಿ ಆರ್‌ಡಿಪಿಆರ್ ಇಲಾಖೆಗೆ ಅಧಿಕಾರ ನೀಡಲಾಗಿದೆ.ವರ್ಗಾವಣೆ ಮಾಡಿಸಿಕೊಳ್ಳುವುದು ಅವರವರಿಗೆ ಬಿಟ್ಟದ್ದು.ಎಂದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com