ನನ್ನ ಬಳಿಯೂ ಡೈರಿಗಳಿವೆ, ಸಮಯ ಬಂದಾಗ ಬಿಚ್ಚಿಡುತ್ತೇನೆ: ಡಿಕೆಶಿ; ಸಚಿವರ ಬೆಂಬಲಕ್ಕೆ ನಿಂತ ಜೆಡಿಎಸ್

ನನ್ನ ಬಳಿಯೂ ಇಂತಹ ಹಲವು ಡೈರಿಗಳಿವೆ. ಸಮಯ ಬಂದಾಗ ಬಿಡುಗಡೆ ಮಾಡುತ್ತೇನೆ. ನನ್ನನ್ನೇ ಏಕೆ ಟಾರ್ಗೆಟ್ ಮಾಡ್ತಿದ್ದಾರೆ? ಬೇರೆಯವರ ಮನೇಲಿ...
ಡಿ.ಕೆ ಶಿವಕುಮಾರ್
ಡಿ.ಕೆ ಶಿವಕುಮಾರ್
Updated on
ಬೆಂಗಳೂರು:  ನನ್ನ ಬಳಿಯೂ ಇಂತಹ ಹಲವು ಡೈರಿಗಳಿವೆ. ಸಮಯ ಬಂದಾಗ ಬಿಡುಗಡೆ ಮಾಡುತ್ತೇನೆ. ನನ್ನನ್ನೇ ಏಕೆ ಟಾರ್ಗೆಟ್ ಮಾಡ್ತಿದ್ದಾರೆ? ಬೇರೆಯವರ ಮನೇಲಿ ಡೈರಿ, ಲೆಕ್ಕ ಇಟ್ಟಿದ್ದು ಗೊತ್ತಿದ್ದರೂ ಅಂತವರ ಮೇಲೆ ಏಕೆ ದಾಳಿ ಇಲ್ಲ ಎಂದು ಸಚಿವ ಡಿ,ಕೆ ಶಿವಕುಮಾರ್ ಪ್ರಶ್ನಿಸಿದ್ದಾರೆ.
ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ ಅವರಿಗೆ ಆರ್ಥಿಕ ಅಪರಾಧಗಳ ನ್ಯಾಯಾಲಯ ನೋಟಿಸ್ ನೀಡಿರುವುದು ರಾಜಕೀಯ ಕಲಹಕ್ಕೆ ಕಾರಣವಾಗಿದ್ದು, ಜೆಡಿಎಸ್ ಕಾಂಗ್ರೆಸ್ ಸಚಿವ ಶಿವಕುಮಾರ್ ಗೆ ಬೆನ್ನೆಲುಬಾಗಿ ನಿಂತಿದ್ದು ಎಲ್ಲಾ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ.
ಸಚಿವ ಡಿಕೆಶಿ ಅವರು ಹವಾಲ ವ್ಯವಹಾರದಲ್ಲಿ ಭಾಗಿಯಾಗಿರುವ ಆರೋಪ ಎದುರಾಗಿದ್ದು, ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಷ್ಟೇ ನನ್ನ ತಾಯಿ, ಕುಟುಂಬದವರಿಗೂ ಆರ್ಥಿಕ ಅಪರಾಧಗಳ ನ್ಯಾಯಾಲಯದಿಂದ ನೋಟಿಸ್‌ ಬಂದಿದ್ದು ಆಗಸ್ಟ್ 2 ರೊಳಗೆ ಹಾಜರಾಗಬೇಕೆಂದು ಹೇಳಲಾಗಿದೆ. ಕೋರ್ಟ್‌ನ ಆದೇಶ ಗೌರವಿಸುತ್ತೇವೆ, ವಿಚಾರಣೆಗೆ ಹಾಜರಾಗುತ್ತೇವೆ ಎಂದು ತಿಳಿಸಿದರು.
ಡಿಕೆ ಶಿವಕುಮಾರ್ ಬೆಂಬಲಕ್ಕೆ ಜೆಡಿಎಸ್ ನಿಂತಿದೆ. ಎಚ್ .ಡಿ ಕುಮಾರ ಸ್ವಾಮಿ ಅವರ ಸಂಪುಟ ಸಹೋದ್ಯೋಗಿಗಳನ್ನು  ಬಿಜೆಪಿ ಟಾರ್ಗೆಟ್ ಮಾಡಿದ್ದಾರೆ, ಕುಮಾರ ಸ್ವಾಮಿ ಸರ್ಕಾರದ ಸಚಿವರನ್ನು ಸಿಕ್ಕಿಹಾಕಿಸಿ ಬಿಜೆಪಿ ಆಟ ಆಡುತ್ತಿದೆ, ಇದೊಂದು ತಿರುಚಿದ ಪ್ರಕರಣವಾಗಿದ್ದು ನಾವೆಲ್ಲಾ ಶಿವಕುಮಾರ್ ಅವರ ಜೊತೆಗಿದ್ದೇವೆ ಎಂದು ಜೆಡಿಎಸ್ ವಕ್ತಾರ ರಮೇಶ್ ಬಾಬು ಹೇಳಿದ್ದಾರೆ.
ಸದ್ಯ ಪ್ರಕರಣ ಕೋರ್ಟ್ ನಲ್ಲಿದ್ದು, ಗುಜರಾತ್ ರಾಜ್ಯಸಭಾ ಚುನಾವಣೆಯಿಂದ ಇಲ್ಲಿಯವರೆಗೆ ಬಿಜೆಪಿ ಶಿವಕುಮಾರ್ ಅವರನ್ನು ಹೇಗೆ ಟಾರ್ಗೆಟ್ ಮಾಡುತ್ತಿದೆ ಎಂಬುದನ್ನು ಇಡೀ ರಾಷ್ಚ್ರವೇ ನೋಡುತ್ತಿದೆ, ಜನರಿಗೆ ಎಲ್ಲೆ ಬೆಳವಣೆಗೆಗಳ ಬಗ್ಗೆ ಅರಿವಿದೆ ಎಂದು ಅವರು ತಿಳಿಸಿದ್ದಾರೆ.
ಇನ್ನೂ ಶಿವಕುಮಾರ್ ವಿಷಯವಾಗಿ ಚರ್ಚಿಸಲು ಸಿಎಂ ಕುಮಾರ ಸ್ವಾಮಿ ದೇವೇಗೌಡರ ಜೊತೆ ಸಭೆ ನಡೆಸಿದು ಎಂಬ ಹೇಳಿಕೆಯನ್ನು ರಮೇಶ್ ಬಾಬು ತಳ್ಳಿ ಹಾಕಿದ್ದಾರೆ, 

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com