ಮುಖ್ಯಮಂತ್ರಿ ಕುಮಾರಸ್ವಾಮಿಯ ರೈತರ ಸಾಲ ಮನ್ನಾ ಯೋಜನೆ: ಕಾಂಗ್ರೆಸ್ ನಲ್ಲಿ ಆತಂಕ

ಸಮ್ಮಿಶ್ರ ಸರ್ಕಾರದ ಆದ್ಯತೆಗಳನ್ನು ಪ್ರತಿಫಲಿಸುವ ಬಜೆಟ್ ನ್ನು ಮಂಡಿಸಲು ಮುಖ್ಯಮಂತ್ರಿ ...
ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ
ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ

ಬೆಂಗಳೂರು: ಸಮ್ಮಿಶ್ರ ಸರ್ಕಾರದ ಆದ್ಯತೆಗಳನ್ನು ಪ್ರತಿಫಲಿಸುವ ಬಜೆಟ್ ನ್ನು ಮಂಡಿಸಲು ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ದೃಢ ನಿರ್ಧಾರ ಮಾಡಿರುವುದರಿಂದ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರ ತನ್ನ ಮೊದಲ ಅಗ್ನಿ ಪರೀಕ್ಷೆಯನ್ನು ಜುಲೈ 5ರಂದು ಎದುರಿಸಲಿದೆ.

ಬಹು ನಿರೀಕ್ಷಿತ ರೈತರ ಸಾಲಮನ್ನಾ ಪ್ರಕಟ ರಾಜ್ಯದ ಹಲವು ರೈತರಿಗೆ ಮತ್ತು ಜೆಡಿಎಸ್ ಪಕ್ಷದ ನಾಯಕರಲ್ಲಿ ಖುಷಿಯನ್ನು ತಂದರೆ ಕಾಂಗ್ರೆಸ್ ಪಕ್ಷದೊಳಗಿನ ಹಲವು ಮುಖಂಡರಿಗೆ ಇದು ಸಮಾಧಾನ ತರಲಿಕ್ಕಿಲ್ಲ.

ಸರ್ಕಾರದಲ್ಲಿ ಅಭಿವೃದ್ಧಿ ಜನಪರ ಕಾರ್ಯಗಳನ್ನು ಜಾರಿಗೆ ತರಲು ಮತ್ತು ಸುಸ್ಥಿರ ಸರ್ಕಾರಕ್ಕಾಗಿ ಸಂಪೂರ್ಣ ಬೆಂಬಲ ನೀಡುವುದಾಗಿ ಕಾಂಗ್ರೆಸ್ ಹೈಕಮಾಂಡ್ ಭರವಸೆ ನೀಡಿದ್ದರೂ ಕೂಡ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಅವರ ನಿಷ್ಠಾವಂತ ಬೆಂಬಲಿಗರ ಭಿನ್ನಮತ ಮತ್ತು ಮುನಿಸು ಸರ್ಕಾರದಲ್ಲಿ ಭಿನ್ನರಾಗವನ್ನು ಹಾಡುತ್ತಿದೆ.

ಕುಮಾರಸ್ವಾಮಿಯವರು ಪೂರ್ಣ ಪ್ರಮಾಣದ ಬಜೆಟ್ ಮಂಡಿಸುತ್ತೇನೆ ಎಂದು ಘೋಷಿಸಿದ ದಿನದಿಂದ ಅತೃಪ್ತಿ ವ್ಯಕ್ತಪಡಿಸುತ್ತಾ ಬಂದಿರುವ ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷರಾಗಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ರೈತರ ಸಾಲಮನ್ನಾ ವಿಚಾರಕ್ಕೆ ಕೂಡ ಅಪಸ್ವರ ಎತ್ತಿರುವುದು ಸಮ್ಮಿಶ್ರ ಸರ್ಕಾರದ ಪಕ್ಷಗಳ ಮಧ್ಯೆ ಎಲ್ಲವೂ ಸರಿಯಿಲ್ಲ ಎಂದು ತೋರಿಸುತ್ತದೆ. ಸರ್ಕಾರದಲ್ಲಿ ಸಚಿವ ಸ್ಥಾನ ಆಕಾಂಕ್ಷಿ ಶಾಸಕರ ಅಸಮಾಧಾನ ಕೂಡ ಸರ್ಕಾರದ ಸುಗಮ ಆಡಳಿತಕ್ಕೆ ಹಿನ್ನಡೆಯಾಗಿದೆ.

ಈ ಮಧ್ಯೆ ಬಜೆಟ್ ನಲ್ಲಿ ರೈತರ ಸಾಲಮನ್ನಾ ವಿಚಾರವನ್ನು ಪ್ರಸ್ತಾಪಿಸಲು ಕುಮಾರಸ್ವಾಮಿ ದೃಢ ನಿಶ್ಚಯ ಮಾಡಿದ್ದಾರೆ. ಮೂಲಗಳಿಂದ ಸಿಕ್ಕಿರುವ ಮಾಹಿತಿ ಪ್ರಕಾರ, ಭರವಸೆಗಳನ್ನು ಈಡೇರಿಸಲು ಕಾರ್ಯವಿಧಾನಗಳನ್ನು ಪರಿಶೀಲಿಸಲಾಗುತ್ತಿದೆ.

ರೈತರ ಸಾಲಮನ್ನಾದಿಂದ ಒಟ್ಟಾರೆ ಹಣಕಾಸು ಹೊರೆ ಸರ್ಕಾರದ ಬೊಕ್ಕಸಕ್ಕೆ 53 ಸಾವಿರ ಕೋಟಿ ರೂಪಾಯಿಗಳಾಗಿದ್ದು ಇದೀಗ ಸುಮಾರು 30 ಸಾವಿರ ಕೋಟಿ ರೂಪಾಯಿಗಳನ್ನು ಮನ್ನಾ ಮಾಡಲು ಸರ್ಕಾರ ಮುಂದಾದಂತಿದೆ. ಇದರಿಂದ ರೈತರ ಬೆಳೆ ಸಾಲ ಮಾತ್ರ ಮನ್ನಾ ಆಗುತ್ತದೆಯೇ ಹೊರತು ಕೃಷಿ ಉತ್ಪನ್ನಗಳಿಗೆ ತೆಗೆದುಕೊಂಡ ಸಾಲವಲ್ಲ ಎಂದು ರಾಜ್ಯ ಕಾರ್ಯದರ್ಶಿಗಳು ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಗೆ ಮಾಹಿತಿ ನೀಡಿದ್ದಾರೆ.ಅಲ್ಲದೆ ಸಣ್ಣ ಮತ್ತು ಮಧ್ಯಮ ಗಾತ್ರದ ರೈತರ ಸಾಲಗಳು ಮಾತ್ರ ಮನ್ನಾ ಆಗುತ್ತವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com