ಮಹಮದ್ ಹ್ಯಾರಿಸ್ ಇಮೇಜ್ ಮರಳಿ ತರಲು ಯೂತ್ ಕಾಂಗ್ರೆಸ್ ಯತ್ನ: ನೆಟಿಜನ್ ಗಳಿಂದ ಆಕ್ರೋಶ

ಫರ್ಜಿ ಕೆಫೆಯಲ್ಲಿ ವಿದ್ವತ್ ಲೋಕನಾಥನ್ ಮೇಲೆ ನಡೆದ ಹಲ್ಲೆಯ ನಂತರ ಶಾಸಕ ಹ್ಯಾರಿಸ್ ಪುತ್ರ ಮೊಹಮದ್ ನಲಪಾಡ್ ಘನತೆಯನ್ನು ಮತ್ತೆ ತರಲು ಯೂತ್ ...
ಮಹಮದ್ ನಲಪಾಡ್
ಮಹಮದ್ ನಲಪಾಡ್
Updated on
ಬೆಂಗಳೂರು: ಫರ್ಜಿ ಕೆಫೆಯಲ್ಲಿ ವಿದ್ವತ್ ಲೋಕನಾಥನ್ ಮೇಲೆ ನಡೆದ ಹಲ್ಲೆಯ ನಂತರ ಶಾಸಕ ಹ್ಯಾರಿಸ್ ಪುತ್ರ ಮೊಹಮದ್ ನಲಪಾಡ್ ಘನತೆಯನ್ನು ಮತ್ತೆ ತರಲು ಯೂತ್ ಕಾಂಗ್ರೆಸ್ ಯತ್ನಿಸುತ್ತಿದೆ.
ಈ ಹಿನ್ನೆಲೆಯಲ್ಲಿ ಯೂತ್ ಕಾಂಗ್ರೆಸ್ ಹುದ್ದೆಯಿಂದ ವಜಾಗೊಂಡಿರುವ ನಲಪಾಡ್ ಬಗ್ಗೆ ಒಳ್ಳೆಯ ಅಭಿಪ್ರಾಯ ಮೂಡಿಸಲು ಸಾಮಾಜಿಕ ಮಾಧ್ಯಮಗಳಲ್ಲಿ  ವಿಡಿಯೋ ರಿಲೀಸ್ ಮಾಡಲಾಗಿದೆ.
ಶಾಂತಿನಗರ ಯೂತ್ ಕಾಂಗ್ರೆಸ್ ಫೇಸ್ ಬುಕ್ ಪೇಜ್ ಅಡ್ಮಿನ್ 1 ನಿಮಿಷ 45 ಸೆಕೆಂಡ್ ಇರುವ ವಿಡಿಯೋವನ್ನು ಫೇಸ್ ಬುಕ್ ಪೇಜ್ ನಲ್ಲಿ ಅಪ್ ಲೋಡ್ ಮಾಡಿದ್ದಾರೆ, ಶಾಂತಿನಗರ ವಿಧಾನಸಭೆ ಕ್ಷೇತ್ರದಲ್ಲಿ ನಲಪಾಡ್ ಗೆ ಜನ ನೀಡುವ ಗೌರವ, ಅಭಿಮಾನಗಳ ಬಗ್ಗೆ ವಿಡಿಯೋ ದೃಶ್ಯಾವಳಿಗಳಿವೆ.
ಶಾಂತಿ ನಗರ ಯೂತ್ ಕಾಂಗ್ರೆಸ್ ಪೇಜ್ ಒಂದು ವಾರದ ಹಿಂದೆ ವಿಡಿಯೋ ಪೋಸ್ಟ್ ಮಾಡಿದೆ,   Mohammed Haris Nalapad #Fighting_for_justice #Crossing_the_hurdles_of_opposition_fake_paid_media_news. ನಾವೆಲ್ಲಾ ನಿಮಗಾಗಿ ಕಾಯುತ್ತಿದ್ದೇವೆ ಎಂಬುದಾಗಿ ಬರೆಯಲಾಗಿದೆ.
ಈ ವಿಡಿಯೋದಲ್ಲಿ ನಲಪಾಡ್ ಜನರಿಂದ ಸಹಾನೂಭೂತಿ ಗಳಿಸಲು ಯತ್ನಿಸುತ್ತಿರುವ ಹಲವು ಫೋಟೋಗಳಿವೆ, ಯುವಕರ ಆಶಾಕಿರಣ, ಮಕ್ಕಳು ಆತನನ್ನು ಸೂಪರ್ ಹೀರೋ ಎಂದು ಕರೆಯುತ್ತಾರೆ, ಉತ್ತಮ ಮಗ ಮಂತಾದ ಶ್ಲೋಗನ್ ಗಳನ್ನು ಹಾಕಿ ನಲಪಾಡ್ ನನ್ನು ಪ್ರಮೋಟ್ ಮಾಡುವಂತ ವಿಡಿಯೋ ಇದಾಗಿದೆ. 
ಆದರೆ ಈ ವಿಡಿಯೋ ಬಗ್ಗೆ ನೆಟಿಜನ್ ಗಳು ಅಆಸಮಾಧಾನ ವ್ಯಕ್ತ ಪಡಿಸಿದ್ದಾರೆ,. ಮಹೊಮದ್ ನನ್ನು ಸಮರ್ಥನೆ ಮಾಡಿಕೊಳ್ಳಲು ಕೆಲವರು ಬಂದರೇ, ಹಲವರು ಆತನ ವಿಡಿಯೋ ನೋಡಿ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
ನಲಪಾಡ್ ಮುಗ್ದ ಎಂಬುದು 2018ರ ಬಹು ದೊಡ್ಡ ಜೋಕ್, ದೇವರೇ ನಮ್ಮ ದೇಶವನ್ನು ಕಾಪಾಡು ಎಂದು ರೋಹಿತ್ ಎಂಬುವರು ಬರೆದಿದ್ದಾರೆ. 
ಮೊದಲು ಐಕಾನ್ ಎಂಬುದರ ಅರ್ಥ ತಿಳಿದುಕೊಳ್ಳಿ, ಮುಟ್ಟಾಳರಂತೆ ವರ್ತಿಸಬೇಡಿ, ಯೂತ್ ಐಕಾನ್ ಎಂಬುದಾಗಿ ಇರುವವರೂ ಸ್ವಾಮಿ ವಿವೇಕಾನಂದರೊಬ್ಬರೇ ಎಂದು ಅರಿಹಂತ್ ಎಂಬುವರು ಬೇಸರ ವ್ಯಕ್ತ ಪಡಿಸಿದ್ದಾರೆ. 
ಇನ್ನೂ ಕೆಲವರು ಮಾತ್ರ ಮೊಹಮದ್ ನಲಪಾಡ್ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ, ಇನ್ನೂ ಇ ಸಂಬಂಧ ಮಾತನಾಡಿರುವ ಯೂತ್ ಕಾಂಗ್ರೆಸ್ ಕಾರ್ಯಕರ್ತ ಶಾಂತಿನಗರ ಕ್ಷೇತ್ರದಲ್ಲಿ ಮೊಹಮದ್ ಹ್ಯಾರಿಸ್ ಮತ್ತು ನಡುವೆ ನಡುವೆ ಇರುವ ಬಾಂಧವ್ಯದ ಬಗ್ಗೆ ತಿಳಿಸಲು ಈ ವಿಡಿಯೋ ಪೋಸ್ಟ್ ಮಾಡಲಾಗಿದೆ ಎಂದು ಸಮರ್ಥಿಸಿಕೊಂಡಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com