ರಾಜ್ಯಸಭೆ ಚುನಾವಣೆ: ಬಂಡಾಯ ಶಾಸಕರ ಮೇಲೆ ನಿಂತಿದೆ ಕಾಂಗ್ರೆಸ್, ಜೆಡಿಎಸ್ ಅಭ್ಯರ್ಥಿಗಳ ಭವಿಷ್ಯ

ರಾಜ್ಯಸಭೆ ಚುನಾವಣೆಯಲ್ಲಿ ಜೆಡಿಎಸ್ ಬಂಡಾಯ ಶಾಸಕರಿಗೆ ಮತದಾನ ಮಾಡುವ ಹಕ್ಕಿನ ಮೇಲೆ ಕಾಂಗ್ರೆಸ್ ಮತ್ತು ಜೆಡಿಎಸ್ ಅಭ್ಯರ್ಥಿಗಳ ಭವಿಷ್ಯ ನಿಂತಿದೆ....
ಸಂಸತ್ತು
ಸಂಸತ್ತು
ಬೆಂಗಳೂರು:  ರಾಜ್ಯಸಭೆ ಚುನಾವಣೆಯಲ್ಲಿ ಜೆಡಿಎಸ್ ಬಂಡಾಯ ಶಾಸಕರಿಗೆ ಮತದಾನ ಮಾಡುವ ಹಕ್ಕಿನ ಮೇಲೆ ಕಾಂಗ್ರೆಸ್ ಮತ್ತು ಜೆಡಿಎಸ್ ಅಭ್ಯರ್ಥಿಗಳ ಭವಿಷ್ಯ ನಿಂತಿದೆ.
ಜೆಡಿಎಸ್ ನ 7 ಬಂಡಾಯ ಶಾಸಕರಿಗೆ ಮತದಾನ ಮಾಡದಂತೆ ಸ್ಪೀಕರ್ ಕೋಳಿವಾಡ ಅವರಿಗೆ ನಿರ್ದೇಶನ ನೀಡುವಂತೆ ಅರ್ಜಿದಾರರು ಹೈಕೋರ್ಟ್ ಮೊರೆ ಹೋಗಿದ್ದರು. 
ಸ್ಪೀಕರ್ ಗೆ ಆದೇಶ ಮಾಡುವ ಹಕ್ಕು ಹೈಕೋರ್ಟ್ ಗೆ ಇಲ್ಲ ಎಂದು ಶಾಸಕರು ವಾದಿಸಿದ್ದಾರೆ. ಇಂದು ಈ ಸಂಬಂಧ ತೀರ್ಪು ಹೊರ ಬೀಳಲಿದೆ.
ಬಂಡಾಯ ಶಾಸಕರು ಮತದಾನ ಮಾಡುವುದು ಅಥವಾ ಮಾಡದೇ ಇರುವುದು ರಾಜ್ಯ ಸಭೆ ಚುನಾವಣೆಯಲ್ಲಿ ಪ್ರಮುಖ ಪಾತ್ರ ವಹಿಸಲಿದೆ. ಕಾಂಗ್ರೆಸ್ ನ ಹಾಗೂ ಜೆಡಿಎಸ್ ನ ಅಭ್ಯರ್ಥಿ ಭವಿಷ್ಯ ನಿರ್ಧಾರವಾಗಲಿದೆ, ಜೆಡಿಎಸ್ ನ ಬಂಡಾಯ ಶಾಸಕರು ಮತದಾನ ಮಾಡಿದರಷ್ಟೇ ಕಾಂಗ್ರೆಸ್ ನ ಮೂರನೇ ಅಭ್ಯರ್ಥಿ ಗೆಲ್ಲಲು ಸಾಧ್ಯ., ಹಾಗೆಯೇ ಜೆಡಿಎಸ್ ಅಭ್ಯರ್ಥಿ  ಫಾರೂಖ್ ಗೆಲುವಿಗೂ ಕೂಡ ಬಂಡಾಯ ಅಭ್ಯರ್ಥಿಗಳು ಮತದಾನ ಮಾಡುವ ಅವಶ್ಯಕತೆಯಿದೆ.
ಒಂದು ವೇಳೆ ಮತದಾನ ಮಾಡದಂತೆ ಸ್ಪೀಕರ್  ಆದೇಶ ನೀಡಿದರೇ ಫಾರೂಖ್ ಅವರಿಗೆ ಈ ಬಾರಿಯೂ  ಸೋಲು ಖಚಿತ, 2016ರ ರಾಜ್ಯ ಸಭೆ ಚುನಾವಣೆಯಲ್ಲಿ  ಫಾರೂಖ್ ಅವರಿಗೆ ಮತದಾನ ನೀಡುವಂತೆ ಜೆಡಿಎಸ್ ವಿಪ್ ನೀಡಿತ್ತು, ಆದರೆ 7 ಬಂಡಾಯ ಶಾಸಕರು ವಿಪ್ ಉಲ್ಲಂಘಿಸಿ ಕಾಂಗ್ರೆಸ್ ಅಭ್ಯರ್ಥಿಗೆ ಮತ ಹಾಕಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com