ಸಮಾಜ ಒಡೆಯವ ಕೆಲಸ ಮಾಡುತ್ತಿರುವ ಸಿಎಂ ಕುವೆಂಪು ಕೃತಿ ಓದಲಿ: ಅಮಿತ್ ಶಾ

ಕನ್ನಡದ ಪ್ರಸಿದ್ಧ ಕವಿ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕುವೆಂಪು ಅವರಿಗೆ ಸಿಎಂ ಸಿದ್ದರಾಮಯ್ಯ ಕ್ಷುಲ್ಲಕ ರಾಜಕಾರಣಕ್ಕಾಗಿ ಅನ್ಯಾಯ ಮಾಡುತ್ತಿದ್ದಾರೆ..
ಅಮಿತ್ ಶಾ ಮತ್ತು ಸಿದ್ದರಾಮಯ್ಯ
ಅಮಿತ್ ಶಾ ಮತ್ತು ಸಿದ್ದರಾಮಯ್ಯ
ಶಿವಮೊಗ್ಗ: ಕನ್ನಡದ ಪ್ರಸಿದ್ಧ ಕವಿ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕುವೆಂಪು ಅವರಿಗೆ ಸಿಎಂ ಸಿದ್ದರಾಮಯ್ಯ ಕ್ಷುಲ್ಲಕ ರಾಜಕಾರಣಕ್ಕಾಗಿ ಅನ್ಯಾಯ ಮಾಡುತ್ತಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಹೇಳಿದ್ದಾರೆ.
ಕುವೆಂಪು ಅವರ  ಗ್ರೇಟ್ ಕರ್ನಾಟಕ  ಕನಸನ್ನು ಸಿಎಂ ಸಿದ್ದರಾಮಯ್ಯ ಅವರಂತ ರಾಜಕಾರಣಿಗಳು ತಮ್ಮ ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳುತ್ತಿದ್ದಾರೆ. ಒಂದು ಸಮುದಾಯವನ್ನು ಮತ್ತೊಂದು ಸಮುದಾಯವ ವಿರುದ್ಧ ಎತ್ತಿ ಕಟ್ಟುತ್ತಿದ್ದಾರೆ, ಇದು ಖಂಡನೀಯ ಇದಕ್ಕೆ ತಕ್ಕುದಾದ ಬೆಲೆಯನ್ನು ಸಿಎಂ ತೆರಬೇಕಾಗುತ್ತದೆ ಎಂದು ಹೇಳಿದ್ದಾರೆ. ಸಮಾಜ ಒಡೆಯುವ ಕೆಲಸದಲ್ಲಿ ತೊಡಗಿರುವ ಸಿದ್ದರಾಮಯ್ಯ ಕುವೆಂಪು ಅವರ ವಿಶ್ವಮಾನವ ಸಂದೇಶವುಳ್ಳ ಸಾಹಿತ್ಯವನ್ನು ಒದಲಿ ಎಂದು ಸಲಹೆ ನೀಡಿದ್ದಾರೆ.
ಕುವೆಂಪು ಅವರ ಕವಿಶೈಲಕ್ಕೆ ಬಂದು ಆನಂದ, ಅನುಭೂತಿಯನ್ನು ಅನುಭವಿಸುತ್ತಿದ್ದೇನೆ. ಕನ್ನಡ ಸಾಹಿತ್ಯಕ್ಕೆ ಕುವೆಂಪುರವರ ಕೊಡುಗೆ ಅಪಾರವಾದದ್ದು, ಅವರು ಕೊಟ್ಟ ರಾಮಾಯಣಂ ದರ್ಶನಂ, ನಾಡಗೀತೆಯಂತ ಕೊಡುಗೆಯನ್ನು ಯಾರೂ ಮರೆಯಲಾರರು, ಈ ಕಾರಣದಿಂದಲೆ ಅವರಿಗೆ ಅತ್ಯುನ್ನತ ಜ್ಞಾನಪೀಠ ಪ್ರಶಸ್ತಿ ಲಭಿಸಿದೆ ಎಂದರು.
ಕುವೆಂಪು ಅವರು ಏಕತೆ. ಮತ್ತು ಸಾಮಾಜಿಕ ಸಾಮರಸ್ಯಕ್ಕೆ ಕೊಟ್ಟ ಕೊಡುಗೆ ಅಪಾರವಾದುದ್ದು, ಅವರ ತತ್ವಾದರ್ಶಗಳು, ಸಾಹಿತ್ಯ ಕೊಡುಗೆಗಳು ಕರ್ನಾಟಕದ ಇಂದಿನ ಸ್ಥಿತಿಗೆ ಹೆಚ್ಚು ಪ್ರಸ್ತುತವಾಗಿವೆ. ಅಂತಹ ಮಹಾನ್ ವ್ಯಕ್ತಿಗೆ ಭಾವಪೂರ್ಣವಾಗಿ ಸ್ಮರಣಾಂಜಲಿ ಸಲ್ಲಿಸುತ್ತೇನೆ ಎಂದು ಅಮಿತ್ ಷಾ ಹೇಳಿದರು.
ಈ ಸಂದರ್ಭದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ, ಕೇಂದ್ರ ಸಚಿವ ಅನಂತಕುಮಾರ್, ಮಾಜಿ ಶಾಸಕ ಆರಗಜ್ಞಾನೇಂದ್ರ, ಶಾಸಕ ಜೀವರಾಜ್ ,ಮಾಜಿ ಸಚಿವ ಹರತಾಳು ಹಾಲಪ್ಪ, ಮತ್ತಿತರರು ಜೊತೆಗಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com