'ಕೈ' ಬಿಟ್ಟು 'ಕಮಲ' ಹಿಡಿಯಲಿರುವ ಮಾಲೀಕಯ್ಯ ಗುತ್ತೇದಾರ್

ರಾಜ್ಯ ವಿಧಾನಸಭೆ ಚುನಾವಣೆಗೆ ದಿನಾಂಕ ಘೋಷಣೆಯಾದ ಬೆನ್ನಲ್ಲೇ ರಾಜಕೀಯ ನಾಯಕರ ಪಕ್ಷಾಂತರ ಪರ್ವ ಪ್ರಾರಂಭವಾಗಿದೆ.
ಮಾಲೀಕಯ್ಯ ಗುತ್ತೇದಾರ್
ಮಾಲೀಕಯ್ಯ ಗುತ್ತೇದಾರ್
ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆಗೆ ದಿನಾಂಕ ಘೋಷಣೆಯಾದ ಬೆನ್ನಲ್ಲೇ ರಾಜಕೀಯ ನಾಯಕರ ಪಕ್ಷಾಂತರ ಪರ್ವ ಪ್ರಾರಂಭವಾಗಿದೆ. ಹೈದರಾಬಾದ್‌ ಕರ್ನಾಟಕದ ಪ್ರಭಾವಿ ನಾಯಕ, ಅಫಜಲಪುರ ಕ್ಷೇತ್ರದ ಶಾಸಕರಾದ ಮಾಲೀಕಯ್ಯ ಗುತ್ತೇದಾರ್ ಕಾಂಗ್ರೆಸ್ ಪಕ್ಷ  ಹಾಗೂ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲು ಸಿದ್ದರಾಗಿದ್ದಾರೆ. ಇದು ಕಾಂಗ್ರೆಸ್ ಗೆ ಶಾಕ್ ನಿಡಿದೆ.
ಕಾಂಗ್ರೆಸ್ ಪಕ್ಷ ತೊರೆದು ಬಿಜೆಪಿ ಸೇರ್ಪಡೆಯಾಗುವುದಾಗಿ ಗುತ್ತೇದಾರ್ ಸುದ್ದಿಗಾರರಿಗೆ  ತಿಳಿಸಿದ್ದಾರೆ.  ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿರುವ ಅವರು ಮೈಸೂರಿನಲ್ಲಿ ನಡೆಯುವ ಅಮಿತ್ ಶಾ ಕಾರ್ಯಕ್ರಮದಲ್ಲಿ ಬಿಜೆಪಿಗೆ ಸೇರುವುದಾಗಿ ಹೇಳಿದ್ದಾರೆ.
"ನನಗೆ ಸಚಿವ ಸ್ಥಾನ ನೀಡಿಲ್ಲವೆನ್ನುವ ಕಾರಣಕ್ಕಾಗಿ ನಾನು ಪಕ್ಷ ತೊರೆಯುತ್ತಿಲ್ಲ. ಆದರೆ ಕಾಂಗ್ರೆಸ್ ನಲ್ಲಿ ನಡೆದ ಕೆಲವು ಒಳಗಿನ ವಿದ್ಯಮಾನಗಳು ನನಗೆ ಖೇದವನ್ನುಂಟು ಮಾಡಿದೆ. " ಗುತ್ತೇದಾರ್ ಹೇಳಿದರು.
ಈಡಿಗ ಸಮುದಾಯಕ್ಕೆ ಸೇರಿರುವ ಗುತ್ತೇದಾರ್ ಹೈದರಾಬಾದ್ ಕರ್ನಾಟಕ ಬಾಗದಲ್ಲಿ ತನ್ನದೇ ಬೆಂಬಲಿಗರನ್ನು ಹೊಂದಿದ್ದಾರೆ. ಇವರು ಅಫಜಲಪುರ ಕ್ಷೇತ್ರದಿಂದ ಆರು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com