ಭ್ರಷ್ಟ ಸಿದ್ದರಾಮಯ್ಯ ಸರ್ಕಾರವನ್ನು ಕಿತ್ತೊಗೆಯಲು ರಾಜ್ಯ ಬಿಜೆಪಿ ಕಾರ್ಯಕರ್ತರು ಸಿದ್ಧ: ಅಮಿತ್ ಶಾ

ರಾಜ್ಯ ವಿಧಾನಸಭಾ ಚುನಾವಣೆಗೆ ದಿನಾಂಕ ನಿಗದಿಯಾಗುತ್ತಿದ್ದಂತೆ ರಾಜಕೀಯ ಚಟುವಟಿಕೆಗಳು ಬಿರುಸುಗೊಂಡಿದ್ದು, ಪ್ರಚಾರಾಂದೋಲನ ಭರದಿಂದ ಸಾಗಿದೆ.
ಅಮಿತ್ ಶಾ
ಅಮಿತ್ ಶಾ

ಮೈಸೂರು: ರಾಜ್ಯ ವಿಧಾನಸಭಾ ಚುನಾವಣೆಗೆ ದಿನಾಂಕ ನಿಗದಿಯಾಗುತ್ತಿದ್ದಂತೆ ರಾಜಕೀಯ ಚಟುವಟಿಕೆಗಳು ಬಿರುಸುಗೊಂಡಿದ್ದು, ಪ್ರಚಾರಾಂದೋಲನ ಭರದಿಂದ ಸಾಗಿದೆ.

ಎರಡು ದಿನ ರಾಜ್ಯ ಭೇಟಿ ಕೈಗೊಂಡಿರುವ  ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತವರು ಜಿಲ್ಲೆ ಮೈಸೂರು ಹಾಗೂ ಚಾಮರಾಜನಗರ ಜಿಲ್ಲೆಗಳಲ್ಲಿ ಪ್ರವಾಸ ನಡೆಸಿದರು.

ಮೈಸೂರಿನಲ್ಲಿ ನವಶಕ್ತಿ ಸಮಾವೇಶವನ್ನುದ್ದೇಶಿಸಿ ಮಾತನಾಡಿದ ಅಮಿತ್ ಶಾ, ಸಿದ್ದರಾಮಯ್ಯ ನೇತೃತ್ವದ ಭ್ರಷ್ಟ ಸರ್ಕಾರವನ್ನು ಕಿತ್ತೊಗೆದ್ದು, ಬಹುಮತದೊಂದಿಗೆ ಬಿಜೆಪಿ ಸರ್ಕಾರ ಅಸ್ವಿತ್ವಕ್ಕೆ ತರುವಂತೆ ಪಕ್ಷದ ಕಾರ್ಯಕರ್ತರಿಗೆ ಕರೆ ನೀಡಿದರು.

ಕೇಂದ್ರದ ಮೋದಿ ಸರ್ಕಾರ ಮುದ್ರಾ ಯೋಜನೆಯಲ್ಲಿ ಕರ್ನಾಟಕಕ್ಕೆ 39,400 ಕೋಟಿ ರೂಪಾಯಿ ನೀಡಲಾಗಿದೆ.ಸ್ಮಾರ್ಟ್ ಸಿಟಿ ಯೋಜನೆಯಡಿ 960 ಕೋಟಿ ರೂಪಾಯಿ,  ಅಮೃತ ಮಿಷನ್ ನಡಿ ಸ್ವಚ್ಛ ಭಾರತ ಆಂದೋಲನಕ್ಕಾಗಿ 204 ಕೋಟಿ , ಪ್ರಧಾನಮಂತ್ರಿ ನೀರಾವರಿ ಯೋಜನೆಯಡಿ 405 ಕೋಟಿ ನೀಡಿರುವುದಾಗಿ ಅಮಿತ್ ಶಾ ತಿಳಿಸಿದರು.

 ಇದೇ ವೇಳೆ ಮಾತನಾಡಿದ ಅಮಿತ್ ಶಾ,  ಸಿದ್ದರಾಮಯ್ಯನವರೇ, ನಿಮಗೆ ಜಯಂತಿ ಆಚರಣೆ ಮಾಡುವುದೇ ಇದ್ದಲ್ಲಿ, ರಾಷ್ಟ್ರ ಕವಿ ಕುವೆಂಪು ರವರ ಜಯಂತಿ ಆಚರಿಸಿ, ಭಾರತ ರತ್ನ ಸರ್ ಎಂ. ವಿಶ್ವೇಶ್ವರಯ್ಯ ರವರ ಜಯಂತಿ ಆಚರಿಸಿ. ಆದರೆ ಟಿಪ್ಪು ಸುಲ್ತಾನ್ ಬಿಟ್ರೆ ನಿಮಗೆ ಯಾರೂ ಕಾಣಿಸೋದಿಲ್ಲವೇ?  ಎಂದು ವಾಗ್ದಾಳಿ ನಡೆಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com