ಯಶವಂತಪುರದಲ್ಲಿ ಸೋಮಶೇಖರ್ ಗೆ ಸುಲಭದ ಜಯ? ಹಾಲಿ ಶಾಸಕರ ವಿರುದ್ಧ ಜಗ್ಗೇಶ್ ಫೈಟ್

ಹಾಲಿ ಶಾಸಕ ಎಸ್ ಟಿ ಸೋಮಶೇಖರ್ ಯಶವಂತಪುರ ಕ್ಷೇತ್ರದಿಂದ ಮತ್ತೊಮ್ಮೆ ಗೆದ್ದು ಬಂದರೆ ಆಶ್ಚರ್ಯ ಪಡುವ ಅವಶ್ಯಕತೆಯಿಲ್ಲ,...
ಸೋಮಶೇಖರ್ ಮತ್ತು ಜಗ್ಗೇಶ್
ಸೋಮಶೇಖರ್ ಮತ್ತು ಜಗ್ಗೇಶ್
ಬೆಂಗಳೂರು: ಹಾಲಿ ಶಾಸಕ ಎಸ್ ಟಿ ಸೋಮಶೇಖರ್ ಯಶವಂತಪುರ ಕ್ಷೇತ್ರದಿಂದ ಮತ್ತೊಮ್ಮೆ ಗೆದ್ದು ಬಂದರೆ ಆಶ್ಚರ್ಯ ಪಡುವ ಅವಶ್ಯಕತೆಯಿಲ್ಲ, ಹಲವು ಅಭಿವೃದ್ಧಿ ಕಾರ್ಯಕ್ರಮಗಳೇ ಸೋಮಶೇಖರ್ ಅವರ ಗೆಲುವಿಗೆ ಶ್ರೀರಕ್ಷೆಯಾಗಲಿದೆ.
ನಗರದ ಅತಿದೊಡ್ಡ ವಿಧಾನಸಭೆ ಕ್ಷೇತ್ರಗಳಲ್ಲೊಂದಾದ ಯಶವಂತಪುರ ಕ್ಷೇತ್ರದಲ್ಲಿ 4.54 ಲಕ್ಷ ಮತದಾರರಿದ್ದಾರೆ. ಇಲ್ಲಿ ಒಕ್ಕಲಿಗ ಮತದಾರರ ಸಂಖ್ಯೆ ಅಧಿಕವಾಗಿದ್ದು, ಬಿಜೆಪಿಯಿಂದ ನಟ ಜಗ್ಗೇಶ್ ಹಾಗೂ ಜೆಡಿಎಸ್ ನಿಂದ ಟಿ.ಎನ್ ಜವರಾಯಿಗೌಡ ಕಣಕ್ಕಿಳಿದಿದ್ದಾರೆ.
ಈ ಹಿಂದೆ ಯಶವಂತಪುರ ಕ್ಷೇತ್ರದಿಂದ  ಶೋಭಾ ಕರಂದ್ಲಾಜೆ ಸ್ಪರ್ದಿಸಿ ಗೆಲುವು ಸಾಧಿಸಿದ್ದರು. ಈ ಬಾರಿಯೂ ಶೋಭಾ ಇಲ್ಲಿಂದಲೇ ಸ್ಪರ್ಧಿಸುತ್ತಾರೆ ಎಂಬ ಊಹಾ ಪೋಹಾಗಳು ಎದ್ದಿದ್ದವು, ಆದರೆ ಕೊನೆ ಕ್ಷಣದಲ್ಲಿ ಜಗ್ಗೇಶ್ ಅವರು ಕಣಕ್ಕಿಳಿದಿದ್ದಾರೆ.
ಯಶವಂತಪುರ ಕ್ಷೇತ್ರದಲ್ಲಿ ಸೋಮಶೇಖರ್ ಹಲವು ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿದ್ದು ಈ ಬಾರಿ ಸಂಪುಟದ್ಲ ತಮಗೆ ಸ್ಥಾನ ಸಿಗಬಹುದೆಂದು ನಿರೀಕ್ಷಿಸಿದ್ದರು. 2008 ರಲ್ಲಿ ಶೋಭಾ ಕರಂದ್ಲಾದೆ ವಿರುದ್ಧ ಸ್ಪರ್ದಿಸಿದ್ದ ಸೋಮಶೇಖರ್ 1,082 ಮತಗಳಿಂದ ಸೋತಿದ್ದರು. ನಂತರ ಕೆಜೆಪಿ ಸೇರಿದ ಶೋಭಾ 2013 ರಲ್ಲಿ ರಾಜಾಜಿನಗರಕ್ಕೆ ತೆರಳಿದ್ದರಿಂದ ಸೋಮಶೇಖರ್ ಸುಲಭವಾಗಿ ಜಯ ಸಾಧಿಸಿದರು.
2013 ರಲ್ಲಿ ಟಿ,ಎನ್ ಜವರಾಯಿಗೌಡರ ವಿರುದ್ಧ 30 ಸಾವಿರ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು. ಬಿಜೆಪಿಯ ಕೃಷ್ಣಪ್ಪ ಕೇವಲ12 ಸಾವಿ ಮತಗಳನ್ನು ಪಡೆದಿದ್ದರು. ನಗರದಲ್ಲಿ ಯಾವುದೇ ಹೊಸ ಯೋಜನೆಗಳು ಪ್ರಾರಂಭವಾಗುವಾಗ ಸೋಮಶೇಖರ್ ಮುಂಚೂಣಿಯಲ್ಲಿರುತ್ತಿದ್ದರು. ಯಾವುದೇ ಅಭ್ಯರ್ಥಿಯನ್ನು ಅವರು ಸುಲಭವಾಗಿ ಪರಿಗಣಿಸುವುದಿಲ್ಲ.  ಇನ್ನೂ ನಟ ಜಗ್ಗೇಶ್ ಅವರ ಯಾವುದೇ ಕಾರ್ಯಕ್ರಮಗಳನ್ನು ಪ್ರಸಾ ಮಾಡದಂತೆ ಚುನಾವಣಾ ಆಯೋಗ ನಿಷೇಧ ಹೇರಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com