ಉಡುಪಿ : ದೇವೇಗೌಡರನ್ನು ಹಾಡಿ ಹೊಗಳಿದ ಪ್ರಧಾನಿ ಮೋದಿ

ಮಾಜಿ ಪ್ರಧಾನಿ ಎಚ್. ಡಿ. ದೇವೇಗೌಡರ ಬಗ್ಗೆ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ವ್ಯಂಗ್ಯವಾಗಿ ಮಾತನಾಡುವ ಮೂಲಕ ಅವಮಾನಿಸಿದ್ದಾರೆ ಎಂದು ಪ್ರಧಾನಿ ನರೇಂದ್ರಮೋದಿ ಟೀಕಿಸಿದ್ದಾರೆ.
ನರೇಂದ್ರ ಮೋದಿ
ನರೇಂದ್ರ ಮೋದಿ

ಉಡುಪಿ :  ಮಾಜಿ ಪ್ರಧಾನಿ ಎಚ್. ಡಿ. ದೇವೇಗೌಡರು ದೇಶದ ವರಿಷ್ಠ ನಾಯಕರಲ್ಲಿ  ಒಬ್ಬರಾಗಿದ್ದಾರೆ. ಅಂತಹ ನಾಯಕರ ಬಗ್ಗೆ   ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ವ್ಯಂಗ್ಯವಾಗಿ  ಮಾತನಾಡುವ ಮೂಲಕ ಅವಮಾನಿಸಿದ್ದಾರೆ  ಎಂದು ಹೇಳುವ ಮೂಲಕ  ಪ್ರಧಾನಿ ನರೇಂದ್ರ ಮೋದಿ, ದೇವೇಗೌಡರನ್ನು ಹಾಡಿ ಹೊಗಳಿದ್ದಾರೆ.

ಇಲ್ಲಿನ ಎಂಜಿಎಂ ಕ್ರೀಡಾಂಗಣದಲ್ಲಿ ಬಿಜೆಪಿ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ರಾಹುಲ್ ಗಾಂಧಿ ಜೀವನ ಈಗಷ್ಟೇ ಆರಂಭವಾಗಿದೆ.  ಆದರೆ. ದೇವೇಗೌಡರು ಜೀವನವನ್ನು ಎಷ್ಟೊಂದು ಸವೆಸಿದ್ದಾರೆ,ಅವರು ದೆಹಲಿಯಲ್ಲಿನ ತಮ್ಮ ಮನೆಗೆ ಬಂದಾಗಲೆಲ್ಲಾ ಬಾಗಿಲವರೆಗೂ ಬಂದು ಸ್ವಾಗತ ಕೋರುತೇನೆ, ಮತ್ತೆ ಹೋಗುವಾಗಲು ಕಾರಿನ ಬಳಿ ಹೋಗಿ ಬೀಳ್ಕೂಡುತ್ತೇನೆ ಎಂದು ಅವರ ಬಗ್ಗೆ ಕೊಂಡಾಡಿದರು.

ದಕ್ಷಿಣ  ಕನ್ನಡ , ಉಡುಪಿ ದೇವಭೂಮಿ ಎಂದು ಖ್ಯಾತಿಯಾಗಿದ್ದು,  ಜನಸಂಘಕ್ಕಾಗಿ  ಉಡುಪಿಯ ಕೊಡುಗೆ ಅಪಾರವಾಗಿದೆ.  ಟಿಎಂಪಿ ಪೈ ಹಾಜೇ ಸಾಹೇಬ್ ಎ. ಬಿ, ಶೆಟ್ಟಿ ಅವರು ಈ ನೆಲದ ಕೊಡುಗೆಗಳಾಗಿದ್ದಾರೆ. ಇಲ್ಲಿನ ಮಗ ಗುರುರಾಜ್ ವೇಟ್ ಲಿಪ್ಟಿಂಗ್ ಲ್ಲಿ ಪದಕ ತಂದಿರುವುದು ಹೆಮ್ಮೆಯ ಸಂಗತಿ ಎಂದರು.

ಜನ್ ಧನ್ ಮೂಲಕ ಬಡವರನ್ನು ಬ್ಯಾಂಕಿಂಗ್ ವ್ಯವಸ್ಥೆಯೊಂದಿಗೆ ಕೈ ಜೋಡಿಸಲಾಗಿದೆ.  ನಮ್ಮ ಸರ್ಕಾರ ಯುವ ಜನತೆಯ ಭವಿಷ್ಯ ರೂಪಿಸಲು ಪಣ ತೊಟ್ಟಿರುವುದಾಗಿ ಹೇಳಿದ ಮೋದಿ,ಕಾಂಗ್ರೆಸ್ ಬಡವರ ಹೆಸರಿನಲ್ಲಿ ರಾಜಕೀಯ ಮಾಡುತ್ತಿದೆ ಎಂದು ಆರೋಪಿಸಿದರು.

 ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ರಾಜಕೀಯ ಕಾರಣಕ್ಕಾಗಿ ಅಮಾಯಕರನ್ನು ಹತ್ಯೆ ಮಾಡಲಾಗಿದೆ ಎರಡು ಡಜನ್ ಗಳಿಗೂ  ಹೆಚ್ಚು ಬಿಜೆಪಿ ಕಾರ್ಯಕರ್ತರು  ಜನರ ಹತ್ಯೆಯಾಗಿದೆ . ಹಾಗಾಗೀ ಕಾಂಗ್ರೆಸ್ ಸರ್ಕಾರ ಬದಲಾಯಿಸಬೇಕೋ ಬೇಡ್ವೋ ಎಂದು  ಪ್ರಶ್ನಿಸಿದ ಪ್ರಧಾನಿ, ಕಾಂಗ್ರೆಸ್ ಮುಕ್ತ ಭಾರತಕ್ಕೆ ಜನ ನಿರ್ಧರಿಸಿದ್ದಾರೆ ಎಂದು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com