ಚುನಾವಣೆ : ಚಿತ್ತಾಪುರದಲ್ಲಿ ಹೇಳಿಕೊಳ್ಳುವಂತಹ ಹೆಚ್ಚಿನ ಅಭಿವೃದ್ದಿಯಾಗಿಲ್ಲ

ಕಲಬುರಗಿಯ ಜಿಲ್ಲೆಯ ಚಿತ್ತಾಪುರ ಮೀಸಲು ಕ್ಷೇತ್ರದಲ್ಲಿ ಹೇಳಿಕೊಳ್ಳುವಂತಹ ಹೆಚ್ಚಿನ ಅಭಿವೃದ್ದಿ ಕೆಲಸಗಳು ಆಗಿಲ್ಲ ಎಂದು ಜನರು ಹೇಳುತ್ತಿದ್ದಾರೆ.
ಪ್ರಿಯಾಂಕ ಖರ್ಗೆ
ಪ್ರಿಯಾಂಕ ಖರ್ಗೆ

ಚಿತ್ತಾಪುರ : ಕಲಬುರಗಿಯ ಜಿಲ್ಲೆಯ ಚಿತ್ತಾಪುರ ಮೀಸಲು ಕ್ಷೇತ್ರ ಕಾಂಗ್ರೆಸ್ ಹಾಗೂ ಬಿಜೆಪಿ   ಅಭ್ಯರ್ಥಿಗಳ ನಡುವಣ ಹೋರಾಟದ ಕಣವಾಗಿ  ತೀವ್ರ ಕುತೂಹಲ ಕೆರಳಿಸಿದೆ.

ಪ್ರವಾಸೋದ್ಯಮ ಮತ್ತು ಐಟಿ ಬಿಟಿ ಸಚಿವ ಪ್ರಿಯಾಂಕ ಖರ್ಗೆ , ಇಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದು, ಹಲವು ಅಭಿವೃದ್ದಿ ಕಾರ್ಯಗಳನ್ನು ಮಾಡಿದ್ದಾರೆ ಆದರೆ, ಹೇಳಿಕೊಳ್ಳುವಂತಹ ಹೆಚ್ಚಿನ  ಅಭಿವೃದ್ದಿಯಾಗಿಲ್ಲ ಎಂದು  ಜನರು ಹೇಳುತ್ತಾರೆ.

ವಾಲ್ಮೀಕಿ ಕಮಲ್ ಬಿಜೆಪಿ  ಅಭ್ಯರ್ಥಿಯಾಗಿದ್ದು, ಮೇಲ್ವರ್ಗದ ನಾಯಕರಾದ ವಿಶ್ವನಾಥ್ ಪಾಟೀಲ್ ಹೆಬ್ಬಾಳ್ ಮತ್ತು ಲಿಂಗ ರೆಡ್ಡಿ ಬಾಸರೆಡ್ಡಿ ಬೆಂಬಲವಿದೆ. ಇವರು 2013ರ ಚುನಾವಣೆಯಲ್ಲಿ ಪ್ರಿಯಾಂಕ್ ಖರ್ಗೆ ಅವರನ್ನು ಬೆಂಬಲಿಸಿದ್ದರು.

ನಾಗವಿ ಶಿಕ್ಷಣ ಹಬ್ ಸ್ಥಾಪನೆ ಪ್ರಿಯಾಂಕ್ ಅವರಿಗೆ ಸಲ್ಲುತ್ತದೆ. ನಾಗವಿ ಯಲ್ಲಮ್ಮ ದೇವಾಲಯದ ಬಳಿ 282. 32 ಎಕರೆ ಜಾಗದಲ್ಲಿ ಸುಮಾರು 22 ಕೋಟಿ ರೂ . ವೆಚ್ಚದಲ್ಲಿ  ಸ್ಥಾಪಿಸಿರುವ ಈ ಶಿಕ್ಷಣ ಕೇಂದ್ರದಲ್ಲಿ  ಆದರ್ಶ ವಿದ್ಯಾಲವೂ ಇದೆ.

 ಮೂರಾರ್ಜಿ ದೇಸಾಯಿ ವಸತಿ ಶಾಲೆ, ನಾಲ್ಕು ಹಿಂದುಳಿದ ವರ್ಗಗಳ ಹಾಸ್ಟೆಲ್ , ಐಟಿಐ ಸಂಸ್ಥೆಯನ್ನು ಸಹ ಸ್ಥಾಪಿಸಲಾಗಿದೆ. ಮೊಗಲಾ ಹಳ್ಳಿಯಲ್ಲಿ ಸ್ಥಾಪಿಸಲಾಗಿರುವ ಒರಿಯಂಟಲ್ ಸಿಮೆಂಟ್ ಕೈಗಾರಿಕೆಯಿಂದ 1, 198 ಮಂದಿಗೆ ಉದ್ಯೋಗ ದೊರಕಿದಂತಾಗಿದೆ ಎಂದು ಪ್ರಿಯಾಂಕ ಖರ್ಗೆ ಹೇಳುತ್ತಾರೆ.

ಚಿತ್ತಾಪುರದಲ್ಲಿನ ಪ್ರವಾಸೋದ್ಯಮ ಅಭಿವೃದ್ದಿಗಾಗಿ 85.32 ಕೋಟಿ ರೂ. ಮೀಸಲಿಡಲಾಗಿದ್ದು  30 ಕೋಟಿ  ಬೆಳೆ ನಷ್ಟ ಪರಿಹಾರವನ್ನು ನೀಡಲಾಗಿದೆ. ಆದಾಗ್ಯೂ, ತಳಮಟ್ಟದ ಕಾರ್ಯಕರ್ತರನ್ನು ಮಾತನಾಡಿಸಿದಾಗ ವಿರುದ್ಧವಾದ ಚಿತ್ರಣ ದೊರೆಯುತ್ತದೆ.

ಮೊಗ್ಲಾ ಗ್ರಾಮದಲ್ಲಿ 900 ಜನರು ವಾಸಿಸುತ್ತಿದ್ದು, 250 ಮನೆಗಳಿವೆ. ಆದರೆ ಕೇವಲ 20 ಮನೆಗಳಿಗೆ ಮಾತ್ರ ಶೌಚಾಲಯ ವ್ಯವಸ್ಥೆಯಿದೆ. ಈ ಮನೆಗಳು ಗ್ರಾಮ ಪಂಚಾತಿಯಿಗೆ ಸೇರಿದ್ದರೂ, ಸಾರ್ವಜನಿಕ ಶೌಚಾಲಯವಿಲ್ಲ ಎಂದು  ಗ್ರಾಮದ ಮುಖಂಡ  ಶರಣು ಸಾಹು ಆರೋಪಿಸುತ್ತಾರೆ

1957 ರಿಂದಲೂ ಇಲ್ಲಿಯವರೆಗೂ ಇಂತಹ ಪ್ರಕರಣಗಳು ಅನೇಕ ಹಳ್ಳಿಗಳಿವೆ ಎಂದು ಮಾಜಿ ಶಾಸಕ ವಿಶ್ವನಾಥ್  ಪಾಟೀಲ್ ಹೆಬ್ಬಾಳ್ ಹೇಳುತ್ತಾರೆ. ಚಿತ್ತಾಪುರದಿಂದ 10 ಬಾರಿ ವಿಧಾನಸಭಾ ಕ್ಷೇತ್ರಕ್ಕೆ ಕಾಂಗ್ರೆಸ್  ಅಭ್ಯರ್ಥಿಯನ್ನು  ಆರಿಸಿ ಕಳುಹಿಸಲಾಗಿದೆ.

 ವಿಶ್ವನಾಥ್ ಪಾಟೀಲ್ ಹೆಬ್ಬಾಳ್  ಮೂರು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರು , ಬಾಬುರಾವ್ ಚಿಂಚಣಸೂರು ಕಾಂಗ್ರೆಸ್ ಪಕ್ಷದಿಂದ ಮೂರು ಬಾರಿ ಚುನಾಯಿತರಾಗಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com