ಹಾಲಿ ಶಾಸಕ-ಮಾಜಿ ಮೇಯರ್ ನಡುವೆ ನೇರ ಹಣಾಹಣಿ: ಸುರೇಶ್ ಕುಮಾರ್ ಗೆ ಶ್ರೀರಕ್ಷೆಯಾಗುತ್ತಾ ಕ್ಲೀನ್ ಇಮೇಜ್ ?

ರಾಜಾಜಿನಗರ ವಿಧಾನಸಭೆ ಕ್ಷೇತ್ರದಲ್ಲಿ ಹಾಲಿ ಶಾಸಕ ಸುರೇಶ್ ಕುಮಾರ್ ಮತ್ತು ಮಾಜಿ ಮೇಯರ್ ಜಿ ಪದ್ಮಾವತಿ ನಡುವೆ ನೇರ ಹಣಾಹಣಿ ಏರ್ಪಟ್ಟಿದೆ...
ಸುರೇಶ್ ಕುಮಾರ್, ಪದ್ಮಾವತಿ, ಎಚ್.ಎಂ ಕೃಷ್ಣಮೂರ್ತಿ
ಸುರೇಶ್ ಕುಮಾರ್, ಪದ್ಮಾವತಿ, ಎಚ್.ಎಂ ಕೃಷ್ಣಮೂರ್ತಿ
ಬೆಂಗಳೂರು: ರಾಜಾಜಿನಗರ  ವಿಧಾನಸಭೆ ಕ್ಷೇತ್ರದಲ್ಲಿ ಹಾಲಿ ಶಾಸಕ ಸುರೇಶ್ ಕುಮಾರ್ ಮತ್ತು ಮಾಜಿ ಮೇಯರ್ ಜಿ ಪದ್ಮಾವತಿ ನಡುವೆ ನೇರ ಹಣಾಹಣಿ ಏರ್ಪಟ್ಟಿದೆ.
2ನೇ ಬಾರಿಗೆ ಇಬ್ಬರು ಮತ್ತೆ ಮುಖಾಮುಖಿಯಾಗಿದ್ದಾರೆ, 2008ರ ವಿಧಾನಸಭೆ ಚುನಾವಣೆಯಲ್ಲಿ ಸುರೇಶ್ ಕುಮಾರ್ 14, 660 ಮತಂಗಳಿಂದ ಪದ್ಮಾವತಿ ಅವರನ್ನು ಸೋಲಿಸಿದ್ದರು. 2013 ರ ಚುನಾವಣೆಯಲ್ಲಿ ಕಾಂಗ್ರೆಸ್ ನ ಮಂಜುಳಾ ನಾಯ್ಡು ಸುರೇಶ್ ಕುಮಾರ್ ವಿರುದ್ಧ 14,767 ಮತಗಳಿಂದ ಪರಾಭವಗೊಂಡಿದ್ದರು.
ಇರುವ 7 ವಾರ್ಡ್ ಗಳ ಪೈಕಿ ದಯಾನಂದ ನಗರ, ಬಸವೇಶ್ವರ ನಗರ, ಕಾಮಾಕ್ಷಿ ಪಾಳ್ಯ ಮತ್ತು ಶ್ರೀರಾಮ ಮಂದಿರ ವಾರ್ಡ್ ಗಳಲ್ಲಿ ಬಿಜೆಪಿ ಕಾರ್ಪೋರೇಟರ್ ಗಳಿದ್ದು, ಪ್ರಕಾಶ್ ನಗರ, ರಾಜಾಜಿನಗರ ಮತ್ತು ಶಿವನಗರಗಳಲ್ಲಿ ಕಾಂಗ್ರೆಸ್ ಪಾಲಿಕೆ  ಸದಸ್ಯರಿದ್ದಾರೆ.
1994 ರಿಂದ ಇಲ್ಲಿಯವರೆಗೆ ಸುರೇಶ್ ಕುಮಾರ್ 4 ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ, 2004 ರಲ್ಲಿ ನೆ,ಲ ನರೇಂದ್ರಬಾಬು ಈ ಕ್ಷೇತ್ರದಿಂದ ಗೆದ್ದು ಬಂದಿದ್ದರು, ನಂತರ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿರುವ ನೆ,ಲ ನರೇಂದ್ರ ಬಾಬು ಮಹಾಲಕ್ಷ್ನಿ ಲೇಔಟ್ ನಿಂದ ಕಣಕ್ಕಿಳಿದಿದ್ದಾರೆ, ನರೇಂದ್ರ ಬಾಬು ಅವರಿಗೆ ರಾಜಾಜಿನಗರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಬೆಂಬಲಿಗರಿದ್ದಾರೆ, 2013 ರಲ್ಲಿ  ಬಿಜೆಪಿಯಲ್ಲಿ ಉಂಟಾದ ಒಡಕಿನಿಂದಾಗಿ ಕೆಜೆಪಿಯಿಂದ ಶೋಭಾ ಕರಂದ್ಲಾಜೆ ಸುರೇಶ್ ಕುಮಾರ್ ವಿರುದ್ಧ ಸ್ಪರ್ದಿಸಿದ್ದರು, ಈ ವೇಳೆ ಮತ ವಿಭಜನೆಯಾದರು ಸುರೇಶ್ ಕುಮಾರ್ ಗೆಲುವು ಸಾಧಿಸಿದ್ದರು.
ಯಾವುದೇ ಪ್ರಬಲ ಸಮುದಾಯದಿಂದ ಬಂದಿಲ್ಲವಾದರೂ ಸುರೇಶ್ ಕುಮಾರ್ ಅವರಿಗೆ ಕ್ಲೀನ್ ಇಮೇಜ್ ಇದೆ, ಗಣಿ ಹಗರಣದಲ್ಲಿ ಯಡಿಯೂರಪ್ಪ ಹೆಸರು ಥಳುಕು ಹಾಕಿಕೊಂಡು ಅವರು ರಾಜೀನಾಮೆ ನೀಡಿದ ಸಂದರ್ಭದಲ್ಲಿ ಸಿಎಂ ಹುದ್ದೆಗೆ ಸುರೇಶ್ ಕುಮಾರ್ ಹೆಸರು ಕೇಳಿ ಬಂದಿತ್ತು, 2008 ರಲ್ಲಿ ಸುರೇಶ್ ಕುಮಾರ್ ವಿರುದ್ಧ ಸ್ಪರ್ದಿಸಿದ್ದ ಪದ್ಮಾವತಿ ಕಾಂಗ್ರೆಸ್ ನ ಕೌನ್ಸಿಲರ್ ಆಗಿದ್ದರು,ನಂತರ ಅವರು ಮೇಯರ್ ಆಗಿ ಕೆಲಸ ಮಾಡಿ ಜನಪ್ರಿಯರಾಗಿದ್ದಾರೆ,. ಸುರೇಶ್ ಕುಮಾರ್ 4 ಚುನಾವಣೆಯಲ್ಲಿ ಗೆದ್ದಿದ್ದು, ಇದು ಐದನೇ ಚುನಾವಣೆಯಾಗಿದೆ. ಜೆಡಿಎಸ್ ನಿಂದ ಎಚ್,ಎಂ ಕೃಷ್ಣಮೂರ್ತಿ ಕಣಕ್ಕಿಳಿದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com