ನನ್ನ ಜೊತೆ ನಾಲ್ಕು ನಿಮಿಷ ಚರ್ಚೆಗೆ ಬನ್ನಿ: ಪ್ರಧಾನಿ ಮೋದಿಗೆ ಜಿಗ್ನೇಶ್ ಮೆವಾನಿ ಆಹ್ವಾನ

ತಮ್ಮ ಸರ್ಕಾರ ಕಳೆದ ನಾಲ್ಕು ವರ್ಷಗಳಲ್ಲಿ ಮಾಡಿರುವ ಸಾಧನೆ ಬಗ್ಗೆ ನಾಲ್ಕು ನಿಮಿಷಗಳ ಕಾಲ ...
ಜಿಗ್ನೇಶ್ ಮೆವಾನಿ
ಜಿಗ್ನೇಶ್ ಮೆವಾನಿ

ಮೈಸೂರು: ತಮ್ಮ ಸರ್ಕಾರ ಕಳೆದ ನಾಲ್ಕು ವರ್ಷಗಳಲ್ಲಿ ಮಾಡಿರುವ ಸಾಧನೆ ಬಗ್ಗೆ ನಾಲ್ಕು ನಿಮಿಷಗಳ ಕಾಲ ಚರ್ಚೆಯಲ್ಲಿ ಭಾಗವಹಿಸುವಂತೆ ಗುಜರಾತ್ ಶಾಸಕ ಜಿಗ್ನೇಶ್ ಮೆವಾನಿ ಪ್ರಧಾನ ಮಂತ್ರಿ ನರೇಂದ್ರ ಮೋದಿಗೆ ಸವಾಲು ಹಾಕಿದ್ದಾರೆ.

ಮೈಸೂರಿನಲ್ಲಿ ನಿನ್ನೆ ಸುದ್ದಿಗಾರಗೊಂದಿಗೆ ಸಂವಾದ ನಡೆಸಿದ ಅವರು, ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಪ್ರಧಾನಿಯವರಿಗೆ ಈ ರೀತಿ ಚರ್ಚೆಗೆ ಬರುವಂತೆ ಆಹ್ವಾನಿಸಿದ ಬಳಿಕ ತಾವು ಕೂಡ ಪ್ರಧಾನಿಗೆ ಸವಾಲು ಹಾಕಿದ್ದಾರೆ.

ಇತ್ತೀಚೆಗೆ ಪ್ರಧಾನಿಯವರು ರಾಜ್ಯದಲ್ಲಿ ಮಾಡಿರುವ ಭಾಷಣದಲ್ಲಿ ವಿಷಯಗಳಿರಲಿಲ್ಲ ಎಂದು ಹೇಳಿದ ಮೋದಿ, ಹಿಮಾಲಯಕ್ಕೆ ಹೋಗಿ ಅಲ್ಲಿ ನೆಲೆಸುವ ಸಮಯ ಪ್ರಧಾನಿಯವರಿಗೆ ಈಗ ಪ್ರಶಸ್ತವಾಗಿದೆ. ಮೋದಿಯವರು ನಿರುದ್ಯೋಗ ಸಮಸ್ಯೆ, ಸಮಸ್ಯೆಗಳಿಂದ ರೈತರನ್ನು ಪಾರು ಮಾಡುವುದು ಹೇಗೆ, ದಲಿತರ ವಿರುದ್ಧ ಹಲ್ಲೆ, ಗಲಭೆಗಳನ್ನು ನಿಯಂತ್ರಿಸುವುದು ಮತ್ತು ನಿರಾಶ್ರಿತರಿಗೆ ವರ್ಷಕ್ಕೆ 30ರಿಂದ 40 ಲಕ್ಷ ಮನೆ ಒದಗಿಸಿಕೊಡುವುದು ಇತ್ಯಾದಿ ವಿಷಯಗಳ ಕುರಿತು ಮಾತನಾಡಬೇಕು ಎಂದರು.

ಜಿಎಸ್ ಟಿಯ ಜಾರಿ ಮತ್ತು ನೋಟುಗಳ ಅಮಾನ್ಯತೆ ದೇಶದ ಆರ್ಥಿಕತೆ ಮೇಲೆ ಭಾರೀ ಹೊಡೆತವನ್ನುಂಟುಮಾಡಿದ್ದು, ಸರ್ಕಾಕ ಕೈಗಾರಿಕಾ ಕಾಯ್ದೆ ಮೂಲಕ ದೇಶದ ಮೇಲೆ ಕೆಟ್ಟ ಪ್ರಭಾವ ಬೀರಿದೆ. ಇದರಿಂದ ಉದ್ಯೋಗ ಸೃಷ್ಟಿ ಕೂಡ ಕುಂಠಿತವಾಗಿದೆ ಎಂದು ಟೀಕಿಸಿದರು.

ಬಿಜೆಪಿ ಮತ್ತು ಆರ್ ಎಸ್ಎಸ್ ಕೋಮುವಾದ ಮತ್ತು ಬಲಪಂಥೀಯವಾದವಾಗಿರುವ ಬಿಜೆಪಿ ಮತ್ತು ಆರ್ ಎಸ್ಎಸ್ ತಾವು ಯಾವುದೇ ರಾಜಕೀಯ ಪಕ್ಷಗಳ ಪರವಾಗಿಲ್ಲ. ತಾವು ಪ್ರತಿ ನಾಗರಿಕ ಚಳವಳಿಯನ್ನು ಪ್ರೋತ್ಸಾಹಿಸುವುದಾಗಿ ಮೆವಾನಿ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com