ಬಿಸಿನೀರು- ಬೆಂಡೇಕಾಯಿಯಲ್ಲಿದೆ ದೊಡ್ಡಗೌಡರ ಆರೋಗ್ಯದ ಗುಟ್ಟು!: ಆರೋಗ್ಯಕ್ಕೆ ಒತ್ತು ನೀಡುವ ನೇತಾರರಿವರು

ಆರೋಗ್ಯವೇ ಭಾಗ್ಯ ಎಂದು ನಂಬಿರುವ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ತಮ್ಮ 85 ನೇ ಇಳಿ ವಯಸ್ಸಿನಲ್ಲಿಯೂ ಇಷ್ಟೊಂದು ಚಟುವಟಿಕೆಯಿಂದಿರಲು ,...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಬೆಂಗಳೂರು: ಆರೋಗ್ಯವೇ ಭಾಗ್ಯ ಎಂದು ನಂಬಿರುವ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ತಮ್ಮ 85 ನೇ ಇಳಿ ವಯಸ್ಸಿನಲ್ಲಿಯೂ ಇಷ್ಟೊಂದು ಚಟುವಟಿಕೆಯಿಂದಿರಲು ಮೂಲಕ ಕಾರಣ ಅವರ ದಿನಚರಿ,  ಬೆಂಡೆಕಾಯಿಯಿಂದ ಮಾಡಿದ ಆಹಾರವಿಲ್ಲದೇ ಅವರ ಊಟ ಪೂರ್ಣವಾಗುವುದಿಲ್ಲ, 
ಬಿಡುವಿಲ್ಲದ ಚುನಾವಣಾ ಪ್ರಚಾರದ ನಡುವೆಯೂ ದೇವೇಗೌಡ ತಮ್ಮ ದಿನಚರಿ ಮಿಸ್ ಮಾಡುವುದಿಲ್ಲ, ಇದೇ ಅವರ ಆರೋಗ್ಯದ ಗುಟ್ಟಾಗಿದೆ. 
ಪ್ರತಿದಿನ ಬೆಳಗ್ಗೆ 5 ಗಂಟೆಗೆ ಏಳುವ ದೇವೇಗೌಡರು ದಿನಚರಿ ಆರಂಭವಾಗುವುದು ಶುಗರ್ ಲೆಸ್ ಕಾಫಿಯಿಂದ,  ಅದಾದ ನಂತರ ಯೋಗ, ಮಹಾನ್ ದೈವ ಭಕ್ತರಾಗಿರುವ ಗೌಡರು, ಕನಿಷ್ಠ ಪಕ್ಷ 1 ತಾಸು ದೇವರ ಧ್ಯಾನ ಹಾಗೂ ಶ್ಲೋಕ ಹೇಳುವುದರಲ್ಲಿ ಕಳೆಯುತ್ತಾರೆ,  ಬೆಳಗ್ಗೆ 11.30ಕ್ಕೆ ರಾಗಿ ಮುದ್ದೆ ಮತ್ತು ಸೊಪ್ಪಿನ ಸಾರು ತಿನ್ನುತ್ತಾರೆ, ಜೊತೆಗೆ ಎಲ್ಲಾ ಸಮಯದಲ್ಲಿಯೂ ಬಿಸಿನೀರು ಕುಡಿಯುತ್ತಾರೆ, ತಾಪಮಾನ 40 ಡಿಗ್ರಿ ಇದ್ದರೂ ಬಿಸಿನೀರು ಕುಡಿಯುವುದನ್ನು ಮಾತ್ರ ಬಿಡುವುದಿಲ್ಲ. ಇದರಿಂದಾಗಿ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ.
ಪ್ರತಿದಿನ 50 ರಿಂದ 500 ಕಿಮೀ ಪ್ರಯಾಣ ಮಾಡಿದರು ತಮ್ಮ ದಿನನಿತ್ಯದ ಅಭ್ಯಾಸಗಳನ್ನು ಮಾತ್ರ ಮಿಸ್ ಮಾಡುವುದಿಲ್ಲ ಮದ್ಯಾಹ್ನಕ್ಕೆ ರೊಟ್ಟಿ ಅಥವಾ ಉಪ್ಪಿಟ್ಟು ತಿನ್ನುವ ದೇವೇಗೌಡರಿಗೆ ಬೆಂಡೆಕಾಯಿಯ ಖಾದ್ಯ ಇರಲೇಬೇಕು, ಯಾವುದೇ ಚುನಾವಣಾ ತಂತ್ರಗಾರಿಕೆಯಿರಲಿ ಮತ್ತ್ಯಾವುದೇ ತೀವ್ರತರದ ಸಭೆಗಳಿದ್ದರೂ ಮಧ್ಯರಾತ್ರಿಯೊಳಗೆ ಹಾಸಿಗೆಗೆ ತೆರಳುವುದನ್ನು ಮಾತ್ರ ತಪ್ಪಿಸುವುದಿಲ್ಲ.
ದೇವೇಗೌಡರಂತೆ ಹಲವು ರಾಜಕೀಯ ನಾಯಕರುಗಳು ಫಿಟ್ ಆಗಿರಲು ಚುನಾವಣಾ ಪ್ರಚಾರದ ನಡುವೆಯೂ  ಆರೋಗ್ಯದ ಕಡೆ ಒಥ್ತು ನೀಡುತ್ತಿದ್ದಾರೆ. 
ಮಾಜಿ ಮುಖ್ಯಮಂತ್ರಿ ಎಚ್ .ಡಿ ಕುಮಾರ ಸ್ವಾಮಿ ಊಟದ ವಿಷಯದಲ್ಲಿ ಅವರ ತಂದೆಯಷ್ಟು ಕಟ್ಟು ನಿಟ್ಟಿಲ್ಲ,  ಮಧುಮೇಹಿಯಾಗಿರುವ ಅವರಿಗೆ ಅಧಿಕ ರಕ್ತದೊತ್ತಡ ಇದೆ, ಹೀಗಾಗಿ ಸರಳ ಆಹಾರಕ್ಕೆ ಆದ್ಯತೆ ನೀಡುತ್ತಾರೆ, ಅನ್ನ ರಸಂ,ಮತ್ತು ಪಲ್ಯ, ಹೃದಯ ಶಸ್ತ್ರ ಚಿಕಿತ್ಸೆ ನಂತರ ಪೂರ್ಣ ಪ್ರಮಾಣದಲ್ಲಿ ಸಸ್ಯಾಹಾರಿಯಾಗಿರುವ ಅವರು ಮಾಂಸಾಹಾರ ಸೇವನೆ ನಿಲ್ಲಿಸಿದ್ದಾರೆ,
ರಾಜ್ಯದ ದೊರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ತಮ್ಮ ರಾಜಕೀಯ ಗುರು ದೇವೇಗೌಡರಂತೆ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸುತ್ತಾರೆ. ಬೆಳಗ್ಗೆ 6.30 ಕ್ಕೆ ಏದ್ದೇಳುವ ಸಿದ್ದರಾಮಯ್ಯ ಬಿಸಿನೀರಿನ ಜೊತೆ ಉಪ್ಪು ಹಾಕಿ ಗಾರ್ಗಲ್ ಮಾಡುತ್ತಾರೆ, ಮೈಸೂರಿನ ಜನರಂತೆ ಬೆಳಗ್ಗೆ ಎದ್ದ ತಕ್ಷಣ ಕಾಫಿ ಕುಡಿಯದೇ ಒಂದು ಕಪಿ ಟೀ ಕುಡಿಯುತ್ತಾರೆ, ಅರ್ಧ ಗಂಟೆ ಥ್ರೆಡ್ ಮಿಲ್ ಮೇಲೆ ವರ್ಕೌಟ್ ಅತವಾ ವಾಕಿಂಗ್ ಮಾಡುತ್ತಾರೆ, ಎಂದು ಅವರ ಆಪ್ತರು ತಿಳಿಸಿದ್ದಾರೆ.
ಬೆಳಗ್ಗೆ ತಿಂಡಿಗೆ ದೋಸೆ, ಇಡ್ಲಿ, ಅಥವಾ ಉಪ್ಪಿಟ್ಟಿಗೆ ಆದ್ಯತೆ ನೀಡುತ್ತಾರೆ, ಜೊತೆಗೆ ಒಂದು ಗ್ಲಾಸ್ ಮಜ್ಜಿಗೆ ಹಾಗೂ ಪಪ್ಪಾಯ ಸೇವನೆ ಕಡ್ಡಾಯ. ಬೆಂಗಳೂರಿನಲ್ಲಿರಲಿ ಅಥವಾ ಮೈಸೂರಿನಲ್ಲೇ ಇರಲಿ ಮದ್ಯಾಹ್ನದ ಊಟಕ್ಕೆ ರಾಗಿ ಮುದ್ದೆ ನಾಟಿ ಕೋಳಿ ಸಾರು, ಕೈಮಾ ಉಂಡೆ ಮತ್ತು ಮೀನು ಸಾರು ತಿನ್ನಲು ಬಯಸುತ್ತಾರೆ, ಆದರೆ ಪ್ರಯಾಣದ ವೇಳೆ ಮಾತ್ರ ಸಸ್ಯಾಹಾರಕ್ಕೆ ಒತ್ತು ನೀಡುತ್ತಾರೆ. ದಿನದಲ್ಲಿ ಮೂರು ಬಾರಿ ಟೀ ಸೇವನೆ ಮಾಡುತ್ತಾರೆ, ಟೀ ಕುಡಿದ ನಂತರ ಒಂದು ಗ್ಲಾಸ್ ಬಿಸಿನೀರು ಕುಡಿಯುವುದನ್ನು ಮರೆಯುವುದಿಲ್ಲ, ಬಿಸಿನೀರಿನ ಸೇವನೆಯಿಂದ ಅವರ ಧ್ವನಿಯಲ್ಲಿ ಯಾವುದೇ ಸಮಸ್ಯೆಯಾಗದೇ ಉತ್ತಮ ಸ್ಥಿತಿಯಲ್ಲಿರುತ್ತದೆ. ಅತಿ ಹೆಚ್ಚಿನ ಆರೋಗ್ಯ ಪ್ರಜ್ಞೆ ಇರುವ ಸಿದ್ದರಾಮಯ್ಯ ರಾತ್ರಿ 2 ಚಪಾತಿ ಮಾತ್ರ ತಿನ್ನುತ್ತಾರೆ.ಮಧು ಮೇಹಿಯಾಗಿರುವ ಕಾರಣ ಸಕ್ಕರೆ ಇಲ್ಲದ ಪಾನೀಯಗಳಿಗೆ ಆದ್ಯತೆ ನೀಡುತ್ತಾರೆ.
ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ಕೂಡ ಇದರಿಂದ ಹೊರತಲ್ಲ, ಕಟ್ಟಾ ಸಸ್ಯಾಹಾರಿಯಾಗಿರುವ ಬಿಎಸ್ ವೈ ಬೆಳಗ್ಗೆ 4.30ಕ್ಕೆ ಏಳುತ್ತಾರೆ, ಬೆಂಗಳೂರು ಅಥವಾ ಶಿಕಾರಿಪುರದಲ್ಲಿ ಅಥವಾ ಬೇರೆ ಯಾವುದೇ ಸ್ಥಳದಲ್ಲಿದ್ದರೂ ಬೆಳಗ್ಗೆ 40 ನಿಮಿಷ ವಾಕ್ ಮಾಡುವುದನ್ನು ತಪ್ಪಿಸುವುದಿಲ್ಲ, ಬೆಳಗಿನ ಉಪಹಾರಕ್ಕೆ ಉಪ್ಪಿಟ್ಟು, ಇಡ್ಲಿ ತಿನ್ನುತ್ತಾರೆ, ಮಧ್ಯಾಹ್ನ ಚಪಾತಿ ಇಲ್ಲವೇ ಮುದ್ದೆ ಸೇವಿಸುತ್ತಾರೆ, ಯಾವಾಗಲು ಬಿಸಿನೀರು ಕುಡಿಯುವ ಯಡಿಯೂರಪ್ಪ ಎಲ್ಲಿಯೇ ಹೋದರು ತನ್ನ ಬಿಸಿನೀರಿನ ಫ್ಲಾಸ್ಕ್ ಅನ್ನು ತೆಗೆದುಕೊಂಡು ಹೋಗುತ್ತಾರೆ, ಫಿಟ್ ಆಗಿರಲು ಡ್ರೈ ಫ್ರೂಟ್ಸ್ ತಿನ್ನುತ್ತಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com