
ಬೆಂಗಳೂರು: ಸೇನಾಪಡೆ ಸಿಬ್ಬಂದಿ, ರಾಜ್ಯದಲ್ಲಿರುವ ಕೇಂದ್ರ ಮತ್ತು ರಾಜ್ಯ ಪೊಲೀಸರು ಕರ್ತವ್ಯದಲ್ಲಿರುವವರು ಮೇ 12ರಂದು ಮತ ಚಲಾಯಿಸಬಹುದು. ಬೆಂಗಳೂರಿನ 28 ವಿಧಾನಸಭಾ ಕ್ಷೇತ್ರಗಳಲ್ಲಿ ಕನಿಷ್ಠ 673 ಮತದಾರರು ಸೇವಾ ಮತದಾರರೆಂದು ತಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದಾರೆ. ಬ್ಯಾಟರಾಯನಪುರದಲ್ಲಿ ಅತಿಹೆಚ್ಚು 107 ಸೇವಾ ಮತದಾರರಿದ್ದಾರೆ.
ಜಂಟಿ ಮುಖ್ಯ ಚುನಾವಣಾಧಿಕಾರಿ ಸೂರ್ಯಸೇನ ಎ ವಿ ಮಾತನಾಡಿ, ಕರ್ನಾಟಕದಲ್ಲಿ ವಿದ್ಯುನ್ಮಾನ ಮತಯಂತ್ರ ವ್ಯವಸ್ಥೆಯನ್ನು ಮೊದಲ ಬಾರಿಗೆ ಬಳಸಲಾಗುತ್ತಿದೆ. ಎಲ್ಲಾ ಸೇವಾ ಮತದಾರರಿಗೆ ಏಪ್ರಿಲ್ 28ರಂದು ಬ್ಯಾಲಟ್ ಪೇಪರ್ ಗಳನ್ನು ಕಳುಹಿಸಲಾಗಿದೆ. ಅದನ್ನು ಅವರು ಭರ್ತಿ ಮಾಡಿ ರಿಟರ್ನಿಂಗ್ ಅಧಿಕಾರಿಗೆ ಕಳುಹಿಸಬೇಕು ಎನ್ನುತ್ತಾರೆ.
ಮೂರರಿಂದ 5 ಲಕ್ಷ ಮತದಾರರಿರುವ ಕ್ಷೇತ್ರಗಳಲ್ಲಿ 1,500 ಮತಗಳು ಹೆಚ್ಚು ವಿಷಯವಾಗುವುದಿಲ್ಲ. ಆದರೆ ತೀವ್ರ ಪೈಪೋಟಿಯಿದ್ದಾಗ ಪ್ರತಿ ಮತ ಕೂಡ ಮುಖ್ಯವಾಗುತ್ತದೆ ಎನ್ನುತ್ತಾರೆ ನ್ಯಾಷನಲ್ ಎಲೆಕ್ಷನ್ ವಾಚ್, ಡೆಮೊಕ್ರಾಟಿಕ್ ರಿಫಾರ್ಮ್ಸ್ ಅಸೋಸಿಯೇಷನ್ ನ ಸ್ಥಾಪಕ ಸದಸ್ಯ ಹಾಗೂ ಪ್ರೊಫೆಸರ್ ತ್ರಿಲೋಚನ್ ಶಾಸ್ತ್ರಿ ಹೇಳುತ್ತಾರೆ.
ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಕರ್ನಾಟಕದಲ್ಲಿ 27,908 ಸೇವಾ ಮತದಾರರಿದ್ದು, ಅವರಲ್ಲಿ 27,461 ಪುರುಷರು ಮತ್ತು 447 ಮಹಿಳೆಯರಿದ್ದಾರೆ. ಅತಿ ಹೆಚ್ಚು ಸೇವಾ ಮತದಾರರು ಬೆಳಗಾವಿ ಗ್ರಾಮೀಣ ಭಾಗ, ಯಮ್ಮನಕರಡಿ, ಗೋಕಾಕ್, ಖಾನಾಪುರ, ಕಿತ್ತೂರು ಮತ್ತು ಹುಕ್ಕೇರಿಯಲ್ಲಿದ್ದಾರೆ.
ಯಾವುದೇ ಸೇವೆಯಲ್ಲಿರುವ ಸೇವಾ ಮತದಾರರಿಗೆ ಸೇನೆ ಕಾಯ್ದೆ 1950 ಅನ್ವಯವಾಗುತ್ತದೆ. ಪೋಸ್ಟಲ್ ಬ್ಯಾಲಟ್ ಅಥವಾ ಪ್ರೊಕ್ಸಿ ವೋಟಿಂಗ್ ಅನ್ವಯವಾಗುತ್ತದೆ.
Advertisement