ಬೊಮ್ಮನಹಳ್ಳಿಯಲ್ಲಿ ಪ್ರವಾಹ- ಟ್ರಾಫಿಕ್ ನದ್ದೇ ಕಾರುಬಾರು: ಶಾಸಕರು ತಲೆಕೆಡಿಸಿಕೊಳ್ಳುವುದಿಲ್ಲ ಚೂರು!

ಕಳೆದ ಐದು ವರ್ಷಗಳಲ್ಲಿ ಬೊಮ್ಮನಹಳ್ಳಿ ಕ್ಷೇತ್ರದಲ್ಲಿ ಅಂದುಕೊಂಡಷ್ಟು ಅಭಿವೃದ್ಧಿ ನಡೆದಿಲ್ಲ, ಬಿಜೆಪಿ ಶಾಸಕ ಸತೀಶ್ ರೆಡ್ಡಿ ...
ಸತೀಶ್ ರೆಡ್ಡಿ
ಸತೀಶ್ ರೆಡ್ಡಿ
Updated on
ಬೆಂಗಳೂರು: ಕಳೆದ ಐದು ವರ್ಷಗಳಲ್ಲಿ  ಬೊಮ್ಮನಹಳ್ಳಿ ಕ್ಷೇತ್ರದಲ್ಲಿ ಅಂದುಕೊಂಡಷ್ಟು ಅಭಿವೃದ್ಧಿ ನಡೆದಿಲ್ಲ, ಬಿಜೆಪಿ ಶಾಸಕ ಸತೀಶ್ ರೆಡ್ಡಿ  ಮತ್ತೆ ಅಧಿಕಾರಕ್ಕೆ ಬರಲು ಹಾತೊರೆಯುತ್ತಿದ್ದಾರೆ.
ಕಳೆದ ಒಂದು ದಶಕದಿಂದ ಬೊಮ್ಮನಹಳ್ಳಿ ವಿಧಾನಸಭೆ ಕ್ಷೇತ್ರ ಬಿಜೆಪಿ ಭದ್ರಕೋಟೆಯಾಗಿದೆ. ಹಾಲಿ ಶಾಸಕ ಸತೀಶ್ ರೆಡ್ಡಿ 2 ಬಾರಿ ಇಲ್ಲಿಂದಲೇ ಅಯ್ಕೆಯಾಗಿದ್ದಾರೆ,
ಇರುವ 8 ವಾರ್ಡ್‌ ಗಳ ಪೈಕಿ 7 ರಲ್ಲಿ ಬಿಜೆಪಿ ಸದಸ್ಯರಿದ್ದಾರೆ. ಬಲಿಷ್ಠ ಕಾರ್ಯಕರ್ತರ ಪಡೆ, ಜನರೊಂದಿಗೆ ಉತ್ತಮ ಬಾಂಧವ್ಯ ಹೊಂದಿರುವುದು ಸತೀಶ್ ರೆಡ್ಡಿ ಅವರಿಗೆ ಸಹಾಯಕವಾಗಲಿದೆ.
ರೆಡ್ಡಿ ಸಮುದಾಯದ ಮತಗಳು ಹೆಚ್ಚಿಗೆ ಇರುವ ಕಾರಣ ಸತೀಶ್ ರೆಡ್ಡಿ ಗೆಲುವು ಸುಲಭವಾಗಿತ್ತು. ಆದರೆ ಹಲವು ನಾಗರಿಕ ಸಮಸ್ಯೆಗಳಿಂದ ಕ್ಷೇತ್ರ ಹೊರತಾಗಿಲ್ಲ.
2017ರಲ್ಲಿ ಸುರಿದ ಧಾರಾಕಾರ ಮಳೆಯಿಂದಾಗಿ ಕ್ಷೇತ್ರ ಜಲಾವೃತಗೊಂಡಿದ್ದು, ರಾಜ ಕಾಲುವೆಗಳು ಬ್ಲಾಕ್ ಆಗಿದ್ದವು, ಬೊಮ್ಮನಹಳ್ಳಿಯಲ್ಲಿ  ಪ್ರವಾಹ ಪರಿಸ್ಥಿತಿ ಉಂಟಾಗಿತ್ತು, ಜೊತೆಗೆ ಈ ಕ್ಷೇತ್ರದಲ್ಲಿ ಟ್ರಾಫಿಕ್ ಸಮಸ್ಯೆ ಕೂಡ ಹೆಚ್ಚಿದೆ. 
ಕಾಂಗ್ರೆಸ್ ನಿಂದ ಸುಷ್ಮಾ ರಾಜ್ ಗೋಪಾಲ್ ರೆಡ್ಡಿ ಕಣಕ್ಕಿಳಿದಿದ್ದಾರೆ, ಜೆಡಿಎಸ್ ನಿಂದ ಟಿ.ಅರ್ ಪ್ರಸಾದ್ ಸ್ಪರ್ಧಿಸಿದ್ದಾರೆ, 
ದಾರರ ಸಂಖ್ಯೆ: 323128, ಕಳೆದ ಬಾರಿ ವೋಟ್ ಮಾಡಿದವರು ಶೇ. 54.09ರಷ್ಟು ಮಂದಿ. 174734 ಮತಗಳ ಪೈಕಿ ಸತೀಶ್ ರೆಡ್ಡಿ ಮತ ಗಳಿಕೆ 86552 ಮತಗಳನ್ನು ಪಡೆದು ಗೆಲುವು ಸಾಧಿಸಿದ್ದರು. ಕಾಂಗ್ರೆಸ್ಸಿನ ನಾಗಭೂಷಣ ಸಿ ಅವರು 60700 ಗಳಿಸಿ ಸೋಲು ಕಂಡರು. ಶೇ 14.80(25852 ಮತಗಳು) ಅಂತರದಿಂದ ಸತೀಶ್ ರೆಡ್ಡಿ ಗೆಲುವು ಸಾಧಿಸಿದರು. ಕಳೆದ ಬಾರಿಗಿಂತ ಹೆಚ್ಚಿನ ಶೇಕಡಾವಾರು ಮತದಾನ ನಿರೀಕ್ಷಿಸಲಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com