ಸಮಾವೇಶದಲ್ಲಿ ಜೆಡಿಎಸ್ ಬಂಡಾಯ ಅಭ್ಯರ್ಥಿ ಹರೀಶ್ ಗೌಡ ಅಸಂಬದ್ಧ ಭಾಷೆ ಬಳಕೆ; ಕ್ಷಮೆಯಾಚನೆ

ಜೆಡಿಎಸ್ ನಿಂದ ಟಿಕೆಟ್ ಸಿಗದ್ದಕ್ಕೆ ಬಂಡಾಯವೆದ್ದು ಸ್ವತಂತ್ರ್ಯ ಅಭ್ಯರ್ಥಿಯಾಗಿ ಚಾಮರಾಜ ಕ್ಷೇತ್ರದಿಂದ ಕಣಕ್ಕಿಳಿದಿರುವ ಕೆ.ಹರೀಶ್ ಗೌಡ ಮೈಸೂರು ವಿವಿ ಮಾಜಿ ವಿಸಿ ...
ಹರೀಶ್ ಗೌಡ
ಹರೀಶ್ ಗೌಡ
ಮೈಸೂರು: ಜೆಡಿಎಸ್ ನಿಂದ ಟಿಕೆಟ್ ಸಿಗದ್ದಕ್ಕೆ ಬಂಡಾಯವೆದ್ದು ಸ್ವತಂತ್ರ್ಯ ಅಭ್ಯರ್ಥಿಯಾಗಿ ಚಾಮರಾಜ ಕ್ಷೇತ್ರದಿಂದ ಕಣಕ್ಕಿಳಿದಿರುವ ಕೆ.ಹರೀಶ್ ಗೌಡ ಮೈಸೂರು ವಿವಿ ಮಾಜಿ ವಿಸಿ ಕೆಎಸ್ ರಂಗಪ್ಪ ವಿರುದ್ದ ಕೆಟ್ಟ ಭಾಷೆ ಬಳಕೆ ಮಾಡಿದ್ದಾರೆ.
ರಂಗಪ್ಪ ಅವರು ಹೇಗೆ ಉಪಕುಲಪತಿಗಳಾದರೂ ಎಂಬ ಬಗ್ಗೆ ಮಾತನಾಡಿದ ಹರೀಶ್ ಗೌಡ, ಮೈಸೂರು ವಿವಿಯಲ್ಲಿ ನಾನು ಬೋಧಕೇತರ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದೆ, ಆದಾದ ಮೇಲೆ ನಾನು ಸ್ವಯಂ ನಿವೃತ್ತಿ ತೆಗೆದುಕೊಂಡೆ, ಕಳೆದ 15 ವರ್ಷಗಳಿಂದ ರಂಗಪ್ಪ ಅವರನ್ನು ನಾನು ನೋಡುತ್ತಿದ್ಜದೇನೆ, ಶಶಿಧರ್ ಪ್ರಸಾದ್ ನಿವೃತ್ತಿ ನಂತಕ ಖಾಲಿಯಿದ್ದ ಉಪಕುಲಪತಿ ಹುದ್ದೆಗೆ ರಂಗಪ್ಪ ಅರ್ಜಿ ಸಲ್ಲಿಸಿದ್ದರು, ಈ ವೇಳೆ ಎಚ್.ಡಿ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದರು.
ನಾನು ವಿಸಿ ಹುದ್ದೆಗೆ ಅರ್ಜಿ ಹಾಕಿದ್ದ ರಂಗಪ್ಪ ಅವರನ್ನು  ಅರ್ಜಿಯ ಬಗ್ಗೆ ವಿಚಾರಿಸಿದೆ, ಅದಕ್ಕೆ ಉತ್ತರ ನೀಡಿದ್ದ ಅವರು, ನಿಮ್ಮ  ಎಚ್ ಡಿ ರೇವಣ್ಣ ನನ್ನ ಅರ್ಜಿಯನ್ನು ಆತನ ಕುಂಡಿ ಕೆಳಗೆ ಹಾಕಿ ಕೊಂಡು ಕುಳಿತಿದ್ದಾರೆ ಎಂದು ಹೇಳಿದ್ದರು ಎಂದು ಹರೀಶ್ ಗೌಡ ತಿಳಿಸಿದ್ದರು.
ಇದಾದ ನಂತರ ಸುದ್ದಿಗೋಷ್ಠಿ ಕರೆದು ತಮ್ಮ ಹೇಳಿಕೆಗೆ ಹರೀಶ್ ಗೌಡ ಕ್ಷಮೆಯಾಚಿಸಿದ್ದಾರೆ,ಅಂತ ಪದವನ್ನು ಬಳಸಿದ್ದಕ್ಕೆ ಕ್ಷಮಿಸಿ, ಸಭೆಯಲ್ಲಿ ಮಹಿಳಾ ಪತ್ರಕರ್ತೆಯರು ಇದ್ದರು, ಹಾಗಾಗಿ ಕ್ಷಮೆ ಕೇಳುತ್ತಿದ್ದೇನೆ ಎಂದರು. ಬಿಜೆಪಿ ಮತ್ತು ಕಾಂಗ್ರೆಸ್ ಅಭ್ಯರ್ಥಿಗಳು ನನ್ನ ಪ್ರತಿ ಸ್ಪರ್ಧಿಗಳೇ ಹೊರತು  ರಂಗಪ್ಪ ಅಲ್ಲ ಎಂದು ಹೇಳಿದ್ದಾರೆ.
ಮೈಸೂರು ಜಿಲ್ಲ ಅಧ್ಯಕ್ಷರಾಗಿದ್ದ ಹರೀಶ್ ಗೌಡ ಟಿಕೆಟ್ ದೊರೆಯದ ಕಾರಣ ಹರೀಶ್ ಗೌಡ ಜೆಡಿಎಸ್ ತೊರೆದು ಸ್ವತಂತ್ರ್ಯ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com