ಶಿವಾಜಿನಗರದಲ್ಲಿ ಇಬ್ಬರು ಹುಲಿಗಳ ಮಧ್ಯೆ ಮೇಕೆಯಾಗಿ ಸ್ಪರ್ಧಿಸುತ್ತಿದ್ದೇನೆ: ಆಪ್ ಅಭ್ಯರ್ಥಿ ಆಯುಬ್ ಖಾನ್

ರಾಜ್ಯ ವಿಧಾನಸಭೆ ಚುನಾವಣೆಗೆ ಸಾಮಾನ್ಯ ವ್ಯಕ್ತಿಗಳನ್ನು ಅಭ್ಯರ್ಥಿಗಳನ್ನಾಗಿ ಕಣಕ್ಕಿಳಿಸಲು ...
ಶಿವಾಜಿನಗರ ಕ್ಷೇತ್ರದ ಆಪ್ ಅಭ್ಯರ್ಥಿ ಆಯುಬ್ ಖಾನ್ ಪಕ್ಷದ ಸ್ಥಾಪಕ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಜೊತೆ
ಶಿವಾಜಿನಗರ ಕ್ಷೇತ್ರದ ಆಪ್ ಅಭ್ಯರ್ಥಿ ಆಯುಬ್ ಖಾನ್ ಪಕ್ಷದ ಸ್ಥಾಪಕ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಜೊತೆ
Updated on

ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆಗೆ ಸಾಮಾನ್ಯ ವ್ಯಕ್ತಿಗಳನ್ನು ಅಭ್ಯರ್ಥಿಗಳನ್ನಾಗಿ  ಕಣಕ್ಕಿಳಿಸಲು ಮುಂದಾಗಿರುವ ಆಮ್ ಆದ್ಮಿ ಪಕ್ಷ ಆಟೋರಿಕ್ಷಾ ಚಾಲಕ ಆಯುಬ್ ಖಾನ್ ನನ್ನು ಬೆಂಗಳೂರಿನ ಶಿವಾಜಿನಗರ ಕ್ಷೇತ್ರದಿಂದ ಕಣಕ್ಕಿಳಿಸಲಿದೆ. ಇವರು ಒಂದು ಕಾಲದಲ್ಲಿ ಬಾಲಿವುಡ್ ನಟ ಸಲ್ಮಾನ್ ಖಾನ್ ಸ್ನೇಹಿತರಾಗಿದ್ದರು. ಆಯುಬ್ ಖಾನ್ ಅವರು ಕಾಂಗ್ರೆಸ್ ನಿಂದ ಆರ್.ರೋಶನ್ ಬೇಗ್ ಮತ್ತು ಬಿಜೆಪಿಯ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಅವರನ್ನು ಎದುರಿಸಲಿದ್ದಾರೆ.

ನಾನು ಇಬ್ಬರು ಹುಲಿಗಳ ನಡುವಿನ ಮೇಕೆ ಎಂದು ಹೇಳುವ ಆಯುಬ್ ಖಾನ್, ತಾವು ಚುನಾವಣೆಯಲ್ಲಿ ಗೆದ್ದರೆ ಶಿವಾಜಿನಗರದ ರಸ್ಸೆಲ್ ಮಾರುಕಟ್ಟೆಯ ಕಳೆದುಹೋಗಿರುವ ಸೌಂದರ್ಯವನ್ನು ಮತ್ತೆ ಸ್ಥಾಪಿಸುವುದಾಗಿ ಮತ್ತು ತ್ಯಾಜ್ಯ ಸಂಸ್ಕರಣಾ ಘಟಕಗಳನ್ನು ಸರಿಯಾಗಿ ನಿರ್ವಹಿಸಿ ಸ್ವಚ್ಛ ಮಾಂಸದಂಗಡಿಗಳು ಮತ್ತು ಕಸಾಯಿಖಾನೆಗಳನ್ನು ಮಾಡುವುದಾಗಿ ಭರವಸೆ ನೀಡಿದ್ದಾರೆ.

ತಳಮಟ್ಟದಿಂದ ಬದಲಾವಣೆ ತರಲು ಸಾರ್ವಜನಿಕರಿಂದ ಅಭ್ಯರ್ಥಿಯನ್ನು ಕಣಕ್ಕಿಳಿಸುವುದು ಆಪ್ ನ ಉದ್ದೇಶವಾಗಿತ್ತು. ಕೆಜಿಎಫ್ ನಲ್ಲಿ ಜನಿಸಿದ ಆಯುಬ್ ಖಾನ್ ಬಾಲ್ಯದಿಂದಲೇ ಪ್ರಕ್ಷುಬ್ಧ ಜೀವನವನ್ನು ಕಂಡವರು. 10ನೇ ವಯಸ್ಸಿನಲ್ಲಿ ಮುಂಬೈಯ ಬಂದ್ರಾದ ಚಿಂಬೈ ಎಂಬ ಮೀನುಗಾರಿಕೆ ಪ್ರದೇಶಕ್ಕೆ ಹೋಗಿ ನೆಲೆಸಿದರು. ಬಾಲ್ಯದಲ್ಲಿನ ಬಡತನದಿಂದಾಗಿ ತನ್ನ ಮಾವ ಅಲ್ತಾಫ್ ಬಾಯ್ ನ ಸೈಕಲ್ ಅಂಗಡಿಯಲ್ಲಿ ಕೆಲಸ ಮಾಡಲು ಆರಂಭಿಸಿದರು.

15ನೇ ವರ್ಷದಲ್ಲಿದ್ದಾಗ ಬಾಲಿವುಡ್ ನಟ ಸಲ್ಮಾನ್ ಖಾನ್ ಸೈಕಲ್ ನ ಟ್ಯೂಬ್ ರಿಪೇರಿ ಮಾಡಿಸಿಕೊಳ್ಳಲು ಬಂದಿದ್ದಾಗ ಪರಿಚಯವಾಗಿ ಸ್ನೇಹಿತರಾದೆವು. ನಂತರ ಅವರು ಬಾಲಿವುಡ್ ಚಿತ್ರರಂಗಕ್ಕೆ ಪ್ರವೇಶಿಸಿದ ನಂತರ ನಮ್ಮ ಸ್ನೇಹ ಕೊನೆಗೊಂಡಿತು. ನಾನು ಕೆಜಿಎಫ್ ಗೆ ವಾಪಸ್ಸಾದೆ ಎನ್ನುತ್ತಾರೆ.

ಕೆಜಿಎಫ್ ನಲ್ಲಿ ಜೈ ಹಿಂದ್ ಕರ್ನಾಟಕ ಆಟೋ ಸಂಘಟನೆಯ ಮುಖ್ಯಸ್ಥರಾದರು. ಆಟೋ ಚಾಲಕರ ಸಂಕಷ್ಟದ ಬಗ್ಗೆ ಹೋರಾಟ ನಡೆಸುತ್ತಾರೆ. ಆಟೋ ಚಾಲಕರಿಗೆ ಪರವಾನಗಿ ನೀಡಲು 8ನೇ ತರಗತಿ ಕಡ್ಡಾಯವಾಗಬೇಕೆಂಬುದು ಏಕೆ ಎಂದು ಅವರು ಪ್ರಶ್ನಿಸುತ್ತಾರೆ. ರಾಜಕೀಯ ನಾಯಕರಿಗೆ ಇಲ್ಲದ ಶೈಕ್ಷಣಿಕ ಅರ್ಹತೆ ಬದುಕಿಗಾಗಿ ದುಡಿಯುವ ಆಟೋ ಚಾಲಕರಿಗೆ ಏಕೆ ಎಂದು ಕೇಳುತ್ತಾರೆ.

ತಾವು ಗೆದ್ದುಬಂದರೆ ಎಸ್ ಸಿ/ಎಸ್ ಟಿಗಳಿಗೆ ಸಬ್ಸಿಡಿ ಬಡ್ಡಿ ದರದಲ್ಲಿ ಆಟೋ ಅಥವಾ ಟ್ಯಾಕ್ಸಿ ಖರೀದಿಸಲು ಬ್ಯಾಂಕ್ ಸಾಲ, ಶಿವಾಜಿನಗರ ಪ್ರದೇಶಕ್ಕೆ ಹೊಸ ತ್ಯಾಜ್ಯ ನಿರ್ವಹಣಾ ವ್ಯವಸ್ಥೆ ಇತ್ಯಾದಿಗಳನ್ನು ಜಾರಿಗೆ ತರುವುದಾಗಿ ಭರವಸೆ ನೀಡಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com