ಪ್ರಧಾನಿ ಮೋದಿ ನನ್ನನ್ನು ಹೊಗಳಿದ್ದರ ಹಿಂದಿನ ಮರ್ಮ ನನಗೆ ಗೊತ್ತು: ಹೆಚ್ ಡಿ ದೇವೇಗೌಡ

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ನನ್ನನ್ನು ಯಾಕೆ ಹೊಗಳಿದ್ದು ಅಂತ ನನಗೆ ಗೊತ್ತಿದೆ ಎಂದು ಮಾಜಿ ಪ್ರಧಾನಿ, ಜೆಡಿಎಸ್ ರಾಷ್ಟ್ರಾಧ್ಯಕ್ಷ ಹೆಚ್ ಡಿ ದೇವೇಗೌಡ ಅವರು ಹೇಳಿದ್ದಾರೆ...
ಹೆಚ್ ಡಿ ದೇವೇಗೌಡ
ಹೆಚ್ ಡಿ ದೇವೇಗೌಡ
Updated on: 
ಚಿಕ್ಕಮಗಳೂರು: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ನನ್ನನ್ನು ಯಾಕೆ ಹೊಗಳಿದ್ದು ಅಂತ ನನಗೆ ಗೊತ್ತಿದೆ ಎಂದು ಮಾಜಿ ಪ್ರಧಾನಿ, ಜೆಡಿಎಸ್ ರಾಷ್ಟ್ರಾಧ್ಯಕ್ಷ ಹೆಚ್ ಡಿ ದೇವೇಗೌಡ ಅವರು ಹೇಳಿದ್ದಾರೆ. 
ಚಿಕ್ಕಮಗಳೂರು ಜಿಲ್ಲೆಯ ಕಡೂರಿನಲ್ಲಿ ನಡೆದ ಜೆಡಿಎಸ್ ಸಮಾವೇಶದಲ್ಲಿ ಮಾತನಾಡಿದ ದೇವೇಗೌಡ ಅವರು, ಪ್ರಧಾನಿ ಮೋದಿ ನನ್ನನ್ನು ಮೊದಲು ಹೊಗಳಿ ನಂತರ ಜೆಡಿಎಸ್ ಗೆ ಮತ ಹಾಕಬೇಡಿ ಅಂತಾ ಹೇಳಿದ್ದರು, ಒಬ್ಬ ಕನ್ನಡಿಗ ಪ್ರಧಾನಿಯಾಗಿದ್ದರು. ಮತ್ತೊಮ್ಮೆ ನಮ್ಮ ರಾಜ್ಯದ ನಾಯಕ ಪ್ರಧಾನಿ ಆಗುವ ಸಾಧ್ಯತೆ ಕಡಿಮೆ ಇವೆ. ಈ ಹಿನ್ನೆಲೆಯಲ್ಲಿ ಒಬ್ಬ ಮಾಜಿ ಪ್ರಧಾನಿಗಳ ಬಗ್ಗೆ ಅಗೌರವದಿಂದ ಮಾತನಾಡಬೇಡಿ ಅಂತಾ ಕಾಂಗ್ರೆಸ್ ನಾಯಕರಿಗೆ ತಿಳಿಸುವುದಕ್ಕಾಗಿ ನನ್ನನ್ನು ಹೊಗಳಿದ್ದಾರೆ ಅಂತಾ ಸ್ಪಷ್ಟನೆ ನೀಡಿದ್ದಾರೆ. 
ಒಬ್ಬ ಕನ್ನಡಿಗ ಪ್ರಧಾನಿ ಆಗಿದ್ದಾರೆ ಅಂತಾ ಜೆ.ಹೆಚ್ ಪಟೇಲ್ ಅವರು ಮುಖ್ಯಮಂತ್ರಿ ಕಚೇರಿಯಲ್ಲಿ ನನ್ನ ಫೋಟೋ ಹಾಕಿದ್ದರು. ನಂತರ ಬಂದ ಎಸ್ ಎಂ ಕೃಷ್ಣ, ಧರಂಸಿಂಗ್, ಕುಮಾರಸ್ವಾಮಿ, ಯಡಿಯೂರಪ್ಪ, ಜಗದೀಶ್ ಶೆಟ್ಟರ್ ಮತ್ತು ಸದಾನಂದಗೌಡರು ನನ್ನ ಫೋಟೋ ತೆಗೆಯಲಿಲ್ಲ. ಆದರೆ ಸಿದ್ದರಾಮಯ್ಯ ಬಂದ ಕೂಡಲೇ ನನ್ನ ಫೋಟೋ ತೆಗೆದು ಹಾಕದ್ದರು. ಆ ಅನಾಗರಿಕತೆಗೆ ಸಿಎಂಗೆ ನನ್ನ ಬಗ್ಗೆ ಮೋದಿ ಹೇಳಿದ್ದಾರೆ ಎಂದರು. 
ಜೆಡಿಎಸ್ ಗೆ ಮತ ಹಾಕಿದರೆ ಬಿಜೆಪಿಗೆ ಹೋಗುತ್ತದೆ ಅಂತಾ ನಮ್ಮ ಗೌರವಯುತ ಮಹಾನ್ ದೊಡ್ಡ ಮುಖ್ಯಮಂತ್ರಿ ಹೇಳುತ್ತಾರೆ. ಸಿಎಂ ಹೇಳುವ ಶೈಲಿಯನ್ನು ನಾನು ಮಾಡಿ ತೋರಿಸಬಲ್ಲೆ, ಆದರೆ ಅದು ತಪ್ಪಾಗುತ್ತದೆ ಎಂದು ಸಿದ್ದರಾಮಯ್ಯ ಅವರಿಗೆ ತಿರುಗೇಟು ನೀಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com