ಸಿಎಂ ಹುದ್ದೆ ರೇಸ್ ನಲ್ಲಿ ನಾನೂ ಇದ್ದೇನೆ: ಪರಮೇಶ್ವರ್

ಮಲ್ಲಿಕಾರ್ಜುನ ಖರ್ಗೆ, ವೀರಪ್ಪಮೊಯ್ಲಿ, ಸಿದ್ದರಾಮಯ್ಯ, ಕೆಎಚ್ ಮುನಿಯಪ್ಪ ಹಾಗೂ ನಾನು ಸೇರಿದಂತೆ ರಾಜ್ಯದಲ್ಲಿ ಮುಂಚೂಣಿಯಲ್ಲಿರುವ ...
ಜಿ.ಪರಮೇಶ್ವರ್
ಜಿ.ಪರಮೇಶ್ವರ್
ಬೆಂಗಳೂರು: ಒಂದು ವೇಳೆ ಕಾಂಗ್ರೆಸ್ ಪಕ್ಷ ಮತ್ತೆ ಅಧಿಕಾರಕ್ಕೆ ಬಂದರೇ ಸಿದ್ದರಾಮಯ್ಯ ನವರನ್ನು ಏಕಾಏಕಿ ಮುಖ್ಯಮಂತ್ರಿ ಮಾಡಲು ಸಾಧ್ಯವಿಲ್ಲ, ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ್ ಸೇರಿದಂತೆ ಹಲವರು ಸಿಎಂ ಹುದ್ದೆ ಆಕಾಂಕ್ಷಿಗಳಾಗಿದ್ದಾರೆ.
ಕಾಂಗ್ರೆಸ್ ನ ಪ್ರಮುಖ ನಾಯಕರು ಸಿಎಂ ಆಗಬಹುದು, ಇದೆಲ್ಲಾ ಚುನಾವಣೆಯ ನಂತರ ಚರ್ಚೆಯಾಗ ಬೇಕಾದ ವಿಷಯವಾಗಿದೆ. ಮಲ್ಲಿಕಾರ್ಜುನ ಖರ್ಗೆ, ವೀರಪ್ಪಮೊಯ್ಲಿ, ಸಿದ್ದರಾಮಯ್ಯ, ಕೆಎಚ್ ಮುನಿಯಪ್ಪ ಹಾಗೂ ನಾನು ಸೇರಿದಂತೆ ರಾಜ್ಯದಲ್ಲಿ ಮುಂಚೂಣಿಯಲ್ಲಿರುವ ನಾಯಕರು  ಸಿಎಂ ಹುದ್ದೆ ಅಲಂಕರಿಸಬಹುದು ಎಂದು ಹೇಳಿದ್ದಾರೆ.
ಸಿದ್ದರಾಮಯ್ಯ ನಮ್ಮ ಮುಖ್ಯಮಂತ್ರಿ, ಮುಂದೆಯೂ ಅವರೇ ನಮ್ಮ ಸಿಎಂ, ಸಿದ್ದರಾಮಯ್ಯ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಡಿ.ಕೆ ಶಿವಕುಮಾರ್ ಹೇಳಿಕೆ ಕೊಟ್ಟ ಬೆನ್ನಲ್ಲೇ ಪರಮೇಶ್ವರ್ ತಾವು ಕೂಡ ಸಿಎಂ ಹುದ್ದೆ ಆಕಾಂಕ್ಷಿ ಎಂದು ಬಹಿರಂಗವಾಗಿ ಹೇಳಿರುವುದು ಎಲ್ಲರಲ್ಲೂ ಆಶ್ಚರ್ಯ ಮೂಡಿಸಿದೆ.
2013ರ  ವಿಧಾನಸಭೆ ಚುನಾವಣೆಯಲ್ಲಿಯೂ ಕೂಡ ಪರಮೇಶ್ವರ್ ಮುಖ್ಯಮಂತ್ರಿ ಹುದ್ದೆ ಆಕಾಂಕ್ಷಿಯಾಗಿದ್ದರು, ಆದರೆ  ಕೊರಟಗೆರೆಯಲ್ಲಿ ಸೋತ ಕಾರಣ  ಅವರು ಅಸಮಾಧಾನಗೊಂಡಿದ್ದರು. ಸ್ವಕ್ಷೇತ್ರದಲ್ಲಿ ಪರಮೇಶ್ವರ್ ಸೋತಿದ್ದು, ಪಕ್ಷದೊಳಗಿನ ಶತ್ರಗಳಿಗೆ  ಮತ್ತಷ್ಟು ಸಹಕಾರಿಯಾಯಿತು. ಆ ನಂತರ ದಲಿತ ಸಿಎಂ ಆಗಬೇಕೆಂದು ಹಲವಾರು ಪ್ರತಿಭಟನೆಗಳು ನಡೆದವು, ಸಿದ್ದರಾಮಯ್ಯ ಜನತಾ ಪರಿವಾರದವರು ಅವರಿಗೆ ಸಿಎಂ ಹುದ್ದೆ ನೀಡಬಾರದೆಂದು ಪಟ್ಟು ಹಿಡಿಯಲಾಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com