ಮರಾಠಿ ಮತದಾರರ ಮನವೊಲಿಕೆಗೆ ಮಹಾರಾಷ್ಟ್ರ ನಾಯಕರನ್ನು ಕರೆತರುತ್ತಿರುವ ಕಾಂಗ್ರೆಸ್

ಚುನಾವಣೆಗೆ ಪೂರ್ವ ಪ್ರಚಾರದಲ್ಲಿ ಕಾರ್ಯನಿರತರಾಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಮುಂಬೈ...
ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ ಸುಶಿಲ್ ಕುಮಾರ್ ಶಿಂಧೆ ಮತ್ತು ಅಶೋಕ್ ಚವಾಣ್
ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ ಸುಶಿಲ್ ಕುಮಾರ್ ಶಿಂಧೆ ಮತ್ತು ಅಶೋಕ್ ಚವಾಣ್

ಬೆಂಗಳೂರು: ಚುನಾವಣೆಗೆ ಪೂರ್ವ ಪ್ರಚಾರದಲ್ಲಿ ಕಾರ್ಯನಿರತರಾಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಮುಂಬೈ-ಕರ್ನಾಟಕ ಭಾಗದಲ್ಲಿ ಮರಾಠಿ ಮಾತನಾಡುವ ಮತದಾರರನ್ನು ಸೆಳೆಯಲು ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ ಅಶೋಕ್ ಚೌವ್ಹಾಣ್ ಮತ್ತು ಕಾಂಗ್ರೆಸ್ ನ ಹಿರಿಯ ನಾಯಕ ಸುಶಿಲ್ ಕುಮಾರ್ ಶಿಂಧೆ ಅವರನ್ನು ಕರೆತರಲು ಒಲವು ತೋರಿದ್ದಾರೆ.

ಈ ಬಗ್ಗೆ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜೊತೆ ಮಾತನಾಡಿರುವ ಅಶೋಕ್ ಚೌವ್ಹಾಣ್, ಭಾಷಾವಾರು ಮತ್ತು ಗಡಿ ಭಿನ್ನಾಭಿಪ್ರಾಯ ಮುಖ್ಯ ವಿಷಯವಾಗಿರುವಾಗ ಅವುಗಳನ್ನು ಸದ್ಯಕ್ಕೆ ಪಕ್ಕಕ್ಕಿಟ್ಟು ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿಯನ್ನು ಸೋಲಿಸುವ ಏಕೈಕ ಉದ್ದೇಶದಿಂದ ಪ್ರಚಾರದ ಕಡೆಗೆ ಗಮನ ಹರಿಸಬೇಕು.

ಬೆಳಗಾವಿ ಜಿಲ್ಲೆಯಲ್ಲಿ ಪ್ರವಾಸ ನಿರತರಾಗಿರುವ ಅಶೋಕ್ ಚೌವ್ಹಾಣ್, ತಮ್ಮ ಸಂಬಂಧಿ  ಕಾನ್ಪುರ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸುತ್ತಿರುವ ಅಂಜಲಿ ನಿಂಬಾಳ್ಕರ್ ಮತ್ತು ಬೆಳಗಾವಿ ಗ್ರಾಮಾಂತರ ಪ್ರದೇಶದಿಂದ ಸ್ಪರ್ಧಿಸುತ್ತಿರುವ ಕೆಪಿಸಿಸಿ ಮಹಿಳಾ ಘಟಕದ ಮುಖ್ಯಸ್ಥೆ ಲಕ್ಷ್ಮಿ ಹೆಬ್ಬಾಳ್ಕರ್ ಪರವಾಗಿ ಮತಯಾಚಿಸುತ್ತಿದ್ದಾರೆ.

ಗಡಿ ಭಾಗದಲ್ಲಿರುವ ಮರಾಠಿ ಜನರ ಸಮಸ್ಯೆಗಳು ದೀರ್ಘಕಾಲದಿಂದ ಬಗೆಹರಿಯದೆ ಉಳಿದುಕೊಂಡಿದೆ. ಅದನ್ನು ಪರಸ್ಪರ ಒಮ್ಮತದಿಂದ ಬಗೆಹರಿಸಬೇಕಿದೆ. ಕನ್ನಡ ಭಾಷಿಕರು ಮತ್ತು ಮರಾಠಿ ಭಾಷಿಕರ ಭಾವನೆಗಳನ್ನು ಗೌರವಿಸಬೇಕು ಎಂದು ಹೇಳಿದರು.

2031ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಮುಂಬೈ-ಕರ್ನಾಟಕ ಪ್ರಾಂತ್ಯದಲ್ಲಿ 31 ಸೀಟುಗಳನ್ನು ಗೆದ್ದುಕೊಂಡಿತ್ತು. ಬಿಜೆಪಿಗೆ ಬಂದಿದ್ದು 13 ಸೀಟುಗಳು ಮಾತ್ರ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com