ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಸಂಚಾರ ದಟ್ಟಣೆ, ತ್ಯಾಜ್ಯ ವಿಲೇವಾರಿ, ಕೆರೆಗಳ ಅತಿಕ್ರಮಣ: ಐಟಿ ಕೇಂದ್ರ ಮಹದೇವಪುರದ ಸಮಸ್ಯೆ

ಮಹದೇವಪುರ ವಿಧಾನಸಭಾ ಕ್ಷೇತ್ರ ಪರಿಶಿಷ್ಟ ಜಾತಿ ಅಭ್ಯರ್ಥಿಗೆ ಮೀಸಲಾಗಿದೆ. ಆದರೆ ಇಲ್ಲಿ ಯಾರು...
Published on

ಬೆಂಗಳೂರು: ಮಹದೇವಪುರ ವಿಧಾನಸಭಾ ಕ್ಷೇತ್ರ ಪರಿಶಿಷ್ಟ ಜಾತಿ ಅಭ್ಯರ್ಥಿಗೆ ಮೀಸಲಾಗಿದೆ. ಆದರೆ ಇಲ್ಲಿ ಯಾರು ಗೆಲ್ಲುತ್ತಾರೆ ಎಂಬುದನ್ನು ಜಾತಿ ರಾಜಕಾರಣ, ಹಿಂದುಳಿದ ಸಮುದಾಯಗಳ ಹಿತಾಸಕ್ತಿ ಮತ್ತು ಕ್ಷೇತ್ರಗಳಲ್ಲಿರುವ ವಿವಿಧ ಜಾತಿಗಳ ಜನರು ನಿರ್ಧರಿಸುತ್ತಾರೆ.

ಮದಹೇವಪುರ ಬೆಂಗಳೂರಿನಲ್ಲಿ ಪ್ರಮುಖ ಮಾಹಿತಿ ತಂತ್ರಜ್ಞಾನ ವಲಯವಾಗಿದೆ. ಇಲ್ಲಿ ಆಕ್ಸೆಂಚರ್, ಡೆಲ್ ಇಎಂಸಿ, ಎರಿಕ್ಸನ್, ಹೆವ್ಲೆಟ್ ಪಕರ್ಡ್, ಎಂಫಾಸಿಸ್, ಸ್ಯಾಮ್ ಸಂಗ್, ಸೇಪಿಯಂಟ್ ಕಾರ್ಪೊರೇಷನ್ ಮತ್ತು ವೆಲ್ಸ್ ಫಾರ್ಗೊದಂತಹ ಐಟಿ ಕಂಪೆನಿಗಳಿವೆ. ಇದು ಐಟಿಪಿಎಲ್, ವೈಟ್ ಫೀಲ್ಡ್, ಮಾರತಹಳ್ಳಿ, ಬೆಲ್ಲಂದೂರು ಪ್ರದೇಶಗಳಿಗೆ ಹತ್ತಿರವಾಗಿದೆ.

ವೈಟ್ ಫೀಲ್ಡ್ ವೆಲ್ಫೇರ್ ಅಸೋಸಿಯೇಷನ್ ಎಂಬ ನಾಗರಿಕ ಸಮಸ್ಯೆಗಳ ಬಗ್ಗೆ ಹೋರಾಡುವ ಸಂಘಟನೆ ಯಾವ ಪಕ್ಷದ ಜೊತೆ ಕೂಡ ಗುರುತಿಸಿಕೊಂಡಿಲ್ಲ. ಈ ಕ್ಷೇತ್ರದ ಸಮಸ್ಯೆಗಳು ಪರಿಶಿಷ್ಟ ಜಾತಿಯ ಸಮಸ್ಯೆಗಳನ್ನು ಬಗೆಹರಿಸುತ್ತಿಲ್ಲ.

ಇಲ್ಲಿನ ಎಲ್ಲಾ ಸಮುದಾಯದವರು ಮತ ಹಾಕಬೇಕೆಂಬುದು ನಮ್ಮ ಉದ್ದೇಶವಾಗಿದೆ. ನಾವು ಒಟ್ಟಾರೆಯಾಗಿ ಕ್ಷೇತ್ರದ ನಾಗರಿಕ ಸಮಸ್ಯೆಗಳ ಬಗ್ಗೆ ಗಮನ ಹರಿಸುತ್ತೇವೆ ಮತ್ತು ನಿರ್ದಿಷ್ಟ ಸಮುದಾಯ ಅಥವಾ ವರ್ಗಕ್ಕೆ ಮಾತ್ರವಲ್ಲ ಎಂದು ವೈಟ್ ಫೀಲ್ಡ್ ರೈಸಿಂಗ್ ಸದಸ್ಯ ಝಬಿ ಜಮಲ್ ಹೇಳುತ್ತಾರೆ.

ಬಿಜೆಪಿಯಿಂದ ಎರಡು ಬಾರಿ ಶಾಸಕರಾಗಿರುವ ಅರವಿಂದ ಲಿಂಬಾವಳಿ ಈ ಬಾರಿ ಹ್ಯಾಟ್ರಿಕ್ ಬಾರಿಸುವ ಕನಸು ಕಾಣುತ್ತಿದ್ದಾರೆ. ಕ್ಷೇತ್ರದಲ್ಲಿ ಅವರ ಪರ ಮತದಾರರಿಗೆ ಒಲವಿದೆ. ಆದರೆ ಅಧಿಕಾರ ವಿರೋಧಿ ಅಂಶಗಳು ಅವರಿಗೆ ಮುಳುವಾಗುವ ಸಾಧ್ಯತೆಯಿದೆ. ಕ್ಷೇತ್ರದಲ್ಲಿ ಸಂಚಾರ ಸಮಸ್ಯೆ, 34 ಕೆರೆಗಳ ಅತಿಕ್ರಮಣ ಪ್ರಕರಣಗಳಿದ್ದು ತ್ಯಾಜ್ಯ ನಿರ್ವಹಣೆ ಘಟಕದ ಸಮಸ್ಯೆ ಕೂಡ ಇದೆ.

ಈ ಬಾರಿ ಕಾಂಗ್ರೆಸ್ ನ ಎ.ಸಿ.ಶ್ರೀನಿವಾಸ್ ಅರವಿಂದ ಲಿಂಬಾವಳಿಯವರಿಗೆ ಪ್ರಬಲ ಪೈಪೋಟಿ ನೀಡುವ ಸಾಧ್ಯತೆಯಿದೆ. ಭೂಗಳ್ಳ ಆರೋಪ ಇವರ ಮೇಲಿದೆ. ಇನ್ನು ಆಮ್ ಆದ್ಮಿ ಪಕ್ಷದಿಂದ ಭಾಸ್ಕರ್ ಪ್ರಸಾದ್ ಸ್ಪರ್ಧಿಸುತ್ತಿದ್ದಾರೆ. ಎಲೆಕ್ಟ್ರಿಕಲ್ ಎಂಜಿನಿಯರ್ ಆಗಿರುವ ಭಾಸ್ಕರ್, ತಾವು ಹಲವು ಜನಪರ ಹೋರಾಟಗಳಲ್ಲಿ ಭಾಗಿಯಾಗಿದ್ದರಿಂದ ಜನರಿಗೆ ಹತ್ತಿರವಾಗಿದ್ದೇನೆ ಎನ್ನುತ್ತಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com