ಪ್ರತಿ ಮತಕ್ಕೂ ಇಲ್ಲಿ ಬೆಲೆಯಿದೆ: ಸ್ಥಳೀಯ ವಿಷಯಗಳು ಈ ಬಾರಿ ಚುನಾವಣೆಯ ಹಾಟ್ ಟಾಪಿಕ್

ಈ ವರ್ಷದ ರಾಜ್ಯ ವಿಧಾನಸಭೆ ಚುನಾವಣೆ ಸ್ಪರ್ಧೆ ಎಷ್ಟು ಕಠಿಣವಾಗಿದೆ ಎಂದರೆ ರಾಜ್ಯದ ಜನತೆಯ ...
ಸಿದ್ದರಾಮಯ್ಯ, ಹೆಚ್.ಡಿ.ಕುಮಾರಸ್ವಾಮಿ, ಬಿ.ಎಸ್.ಯಡಿಯೂರಪ್ಪ
ಸಿದ್ದರಾಮಯ್ಯ, ಹೆಚ್.ಡಿ.ಕುಮಾರಸ್ವಾಮಿ, ಬಿ.ಎಸ್.ಯಡಿಯೂರಪ್ಪ

ಈ ವರ್ಷದ ರಾಜ್ಯ ವಿಧಾನಸಭೆ ಚುನಾವಣೆ ಸ್ಪರ್ಧೆ ಎಷ್ಟು ಕಠಿಣವಾಗಿದೆ ಎಂದರೆ ರಾಜ್ಯದ ಜನತೆಯ ಮನಸ್ಸನ್ನು ತಿಳಿಯಲು ರಾಜಕೀಯ ದಿಗ್ಗಜರಿಗೆ ಕೂಡ ಕಷ್ಟವಾಗುತ್ತಿದೆ.

ಪ್ರಜಾಪ್ರಭುತ್ವದಲ್ಲಿ ಇದು ಒಳ್ಳೆಯ ಸೂಚನೆ. ಈ ಬಾರಿಯ ಕ್ಲಿಷ್ಟ ಚುನಾವಣಾ ಸ್ಪರ್ಧೆಯಲ್ಲಿ ಯಾವ ಪಕ್ಷದ ಕಡೆಗೂ ಮತದಾರ ಸ್ಪಷ್ಟ ಒಲವು ಹೊಂದಿಲ್ಲ. ಇಂತಹ ಪರಿಸ್ಥಿತಿ ರಾಜ್ಯದಲ್ಲಿರುವಾಗ ಪ್ರತಿ ಪಕ್ಷದ ಅಭ್ಯರ್ಥಿಗಳು ಪ್ರತಿ ಮತಕ್ಕೂ ಮತದಾರರಲ್ಲಿ ಮನವಿ ಮಾಡಿಕೊಳ್ಳುವ ಪರಿಸ್ಥಿತಿ ಬಂದಿದೆ. ಪ್ರತಿ ಮತ ಕೂಡ ಅಭ್ಯರ್ಥಿಯ ಗೆಲುವಿಗೆ ಕಾರಣವಾಗಿರುತ್ತದೆ.

ಇದನ್ನು ಹೊರತುಪಡಿಸಿ ಈ ವರ್ಷದ ವಿಧಾನಸಭೆ ಚುನಾವಣಾ ಕಾವು ರಂಗೇರುತ್ತಿರಲಿಲ್ಲ. ಎಲ್ಲರಿಗೂ ಅನ್ವಯವಾಗುವ ಚುನಾವಣೆ ಸಂದರ್ಭದಲ್ಲಿ ದೊಡ್ಡ ವಿಷಯ ಮಾಡುವ ಹಗರಣಗಳಾಗಲಿ, ಚುನಾವಣೆಗೆ ಮಸಾಲೆ ತುಂಬುವಂತಹ ವಿಷಯಗಳಾಗಲಿ ಇರಲಿಲ್ಲ.

ಅಲ್ಲದೆ ಚುನಾವಣೆಯಲ್ಲಿ ಇಡೀ ರಾಜ್ಯದ ಗಮನ ಸೆಳೆಯುವಂತಹ ಹೊಸ ಸ್ಪರ್ಧಿಗಳು ಸಹ ಈ ಬಾರಿ ಇರಲಿಲ್ಲ. ದೊಡ್ಡ ವಿಷಯಗಳ ಕೊರತೆ ಮಧ್ಯೆ ಪ್ರತಿ ವಿಷಯ ಕೂಡ ದೊಡ್ಡದಾಗುತ್ತದೆ. ದೊಡ್ಡ ದೊಡ್ಡ ಹಗರಣಗಳ ವಿಷಯ ಇಲ್ಲದಿರುವಾಗ ಹಳೆ ವಿಷಯಗಳನ್ನು ಮತ್ತೆ ಕೆದಕಲಾಗುತ್ತದೆ.

ಇಷ್ಟೆಲ್ಲದರ ಮಧ್ಯೆಯೂ ಈ ಬಾರಿಯ ಕರ್ನಾಟಕ ವಿಧಾನಸಭೆ ಚುನಾವಣೆ ಇಡೀ ದೇಶದ ಗಮನ ಸೆಳೆದಿರುವುದು ಮಾತ್ರ ಸುಳ್ಳಲ್ಲ. ಈ ಚುನಾವಣೆಯ ಫಲಿತಾಂಶ 2019ರ ಲೋಕಸಭೆ ಚುನಾವಣೆಗೆ ನಾಂದಿಯಾಗಬಹುದು ಮತ್ತು ದೇಶದ ಎರಡು ದೊಡ್ಡ ಪಕ್ಷಗಳಾದ ಬಿಜೆಪಿ ಮತ್ತು ಕಾಂಗ್ರೆಸ್ ನ ಭವಿಷ್ಯವನ್ನು ಇದು ನಿರ್ಧರಿಸಲಿದೆ ಎಂದು ಹೇಳಲಾಗುತ್ತಿದೆ. ಇದು ರಾಜಕೀಯ ತಜ್ಞರ ಅಭಿಮತ. ಆದರೆ ಮತದಾರ ಇಷ್ಟೊಂದು ದೀರ್ಘವಾಗಿ ಯೋಚಿಸುವುದಿಲ್ಲ. ಮೋದಿ ವರ್ಸಸ್ ರಾಹುಲ್ ಗಾಂಧಿ ಚರ್ಚೆಯ ಹೊರತಾಗಿ ಸಿದ್ದರಾಮಯ್ಯ ವರ್ಸಸ್ ಯಡಿಯೂರಪ್ಪ, ಹಿಂದುತ್ವ ವರ್ಸಸ್ ಜಾತ್ಯತೀತ ತತ್ವ, ಈ ಚುನಾವಣೆಯಲ್ಲಿ ಸ್ಥಳೀಯ ವಿಷಯಗಳು ಹೆಚ್ಚು ಚರ್ಚೆಗೆ ಬರುತ್ತಿವೆ.

ಲಿಂಗಾಯತ ಧರ್ಮಕ್ಕೆ ಪ್ರತ್ಯೇಕ ಧಾರ್ಮಿಕ ಸ್ಥಾನಮಾನ ನೀಡಿರುವ ಕಾಂಗ್ರೆಸ್ ಸರ್ಕಾರ ಚುನಾವಣೆ ಮೇಲೆ ಕಡಿಮೆ ಮಟ್ಟದಲ್ಲಿ ಪ್ರಭಾವ ಬೀರುವ ಸಾಧ್ಯತೆಯಿದೆ. ಪಕ್ಷದ ಮೇಲೆ ಅದು ಹೆಚ್ಚು ಪರಿಣಾಮ ಬೀರಿದಂತೆ ಕಾಣುವುದಿಲ್ಲ, ಹೀಗಾಗಿ ಕಾಂಗ್ರೆಸ್ ಮುಖಂಡರೇ ಆ ಬಗ್ಗೆ ಚರ್ಚಿಸುತ್ತಿಲ್ಲ.

ಮತ್ತೊಂದು ವಿಚಾರ ಸಿದ್ದರಾಮಯ್ಯ ಹಿಂದೂ ವಿರೋಧಿ ಎಂಬುದನ್ನು ಸಾಬೀತುಪಡಿಸುವ ಬಿಜೆಪಿ ಪ್ರಯತ್ನ. ಇದು ಕರಾವಳಿ ಕರ್ನಾಟಕದ ಮೇಲೆ ಕಾಂಗ್ರೆಸ್ ಮೇಲೆ ಸ್ವಲ್ಪ ಪರಿಣಾಮ ಬೀರಬಹುದು. ಆದರೆ ಬೇರೆ ಕಡೆಗಳಲ್ಲಿ ಮತದಾರರನ್ನು ಬಿಜೆಪಿಯತ್ತ ಸೆಳೆಯಲು ಅಷ್ಟು ಉಪಯೋಗವಾಗಲಿಕ್ಕಿಲ್ಲ. ಕನ್ನಡ ಹೆಮ್ಮೆ, ಅಂತರಾಜ್ಯ ನೀರಿನ ವಿವಾದ, ರೈತರ ಸಮಸ್ಯೆಗಳು, ಕಾನೂನು ಮತ್ತು ಸುವ್ಯವಸ್ಥೆ, ಜನಪ್ರಿಯತೆಯ ರಾಜಕೀಯ ಮತ್ತು ಸಮಾಧಾನ, ಭ್ರಷ್ಟಾಚಾರ ಮೊದಲಾದವುಗಳು ರಾಜಕೀಯ ಮುಖಂಡರ ಚುನಾವಣಾ ಪ್ರಚಾರಗಳಲ್ಲಿ ಕೇಳಿಬರುತ್ತಿದ್ದು ಅದು ಬದಲಾವಣೆಯನ್ನುಂಟುಮಾಡಬಹುದು ಆದರೆ ಇದರ ಪರಿಣಾಮ ಜಾಸ್ತಿಯಾಗಲಿಕ್ಕಿಲ್ಲ ಎಂಬ ಭಾವನೆ ಜನಸಾಮಾನ್ಯರದ್ದು.

ಒಂದೆಡೆ ಇದು ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ನಡುವಿನ ಸ್ಪರ್ಧಾಕಣವಾದರೆ ಇನ್ನೊಂದೆಡೆ ಸಿದ್ದರಾಮಯ್ಯ, ಯಡಿಯೂರಪ್ಪ ಮತ್ತು ಕುಮಾರಸ್ವಾಮಿ ನಡುವಿನ ಮತ್ತು ರಾಷ್ಟ್ರಮಟ್ಟದಲ್ಲಿ ನರೇಂದ್ರ ಮೋದಿ ಮತ್ತು ರಾಹುಲ್ ಗಾಂಧಿ ನಡುವಿನ ನೇರ ಹಣಾಹಣಿಯಾಗಿದೆ.

ಅಂದಾಜು ಪ್ರಕಾರ, ಒಟ್ಟು 223 ಸ್ಥಾನಗಳಲ್ಲಿ 90 ಕ್ಷೇತ್ರಗಳಲ್ಲಿ ನೇರ ಹಣಾಹಣಿ ಏರ್ಪಡುವ ಸಾಧ್ಯತೆಯಿದೆ. ಚುನಾವಣಾ ಪೂರ್ವ ಸಮೀಕ್ಷೆಗಳ ಪ್ರಕಾರ ಬಿಜೆಪಿ, ಜೆಡಿಎಸ್ ಗಿಂತ ಕಾಂಗ್ರೆಸ್ ಹೆಚ್ಚಿನ ಸ್ಥಾನಗಳನ್ನು ಗೆಲ್ಲಲಿದೆ. ಬಿಜೆಪಿ ಕಳೆದ ಸಾಲಿಗಿಂತ ಉತ್ತಮ ಸಾಧನೆ ಈ ಬಾರಿಯ ಚುನಾವಣೆಯಲ್ಲಿ ಮಾಡಲಿದೆ ಎನ್ನಲಾಗುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com