ಸರ್ವಜ್ಞನಗರ: ಅಭಿವೃದ್ಧಿಪರ ಕೆಲಸಗಳಿಗೆ ಮತದಾರರ ಆದ್ಯತೆ, ಪೈಪೋಟಿ ಅನಂತರ

ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್ ಪ್ರತಿನಿಧಿಸುತ್ತಿರುವ ಸರ್ವಜ್ಞನಗರ ತೀವ್ರ ಜಿದ್ದಾಜಿದ್ದಿನ ...
ಕೆ.ಜೆ.ಜಾರ್ಜ್
ಕೆ.ಜೆ.ಜಾರ್ಜ್

ಬೆಂಗಳೂರು: ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್ ಪ್ರತಿನಿಧಿಸುತ್ತಿರುವ ಸರ್ವಜ್ಞನಗರ ತೀವ್ರ ಜಿದ್ದಾಜಿದ್ದಿನ ಕ್ಷೇತ್ರವಾಗಿದೆ. ಕ್ಷೇತ್ರದ 3.34 ಲಕ್ಷ ಮತದಾರರು ಮುಂದಿನ ಶಾಸಕ ಯಾರಾಗುತ್ತಾರೆ ಎಂಬುದನ್ನು ನಿರ್ಧರಿಸಲಿದ್ದಾರೆ.

ಆಪ್ ಪಕ್ಷದಿಂದ ಪೃಥ್ವಿ ರೆಡ್ಡಿ, ಕಾಂಗ್ರೆಸ್ ನಿಂದ ಕೆ.ಜೆ.ಜಾರ್ಜ್, ಬಿಜೆಪಿಯಿಂದ ಮುನಿನಾಗ ರೆಡ್ಡಿ ಮತ್ತು ಜೆಡಿಎಸ್ ನಿಂದ ಅನ್ವರ್ ಶರೀಫ್ ನಿಂತಿದ್ದಾರೆ. ಹಿಂದಿನ ಬಿಜೆಪಿ ಅಭ್ಯರ್ಥಿ ಪದ್ಮನಾಭ ರೆಡ್ಡಿಯವರ ಬದಲಿಗೆ ಎಂ.ಎನ್.ರೆಡ್ಡಿಯನ್ನು ಬಿಜೆಪಿ ಸ್ಪರ್ಧಾಕಣಕ್ಕಿಳಿಸಿದ್ದು ಇವರು ಕ್ಷೇತ್ರದಲ್ಲಿ ಅಷ್ಟೊಂದು ಚಿರಪರಿಚಿತರಲ್ಲ. ಇನ್ನು ಇವರ ವಿರುದ್ಧ ನಾಲ್ಕು ಪ್ರಕರಣಗಳು ವಿಚಾರಣೆ ಹಂತದಲ್ಲಿದ್ದು ಅದು ಕೂಡ ಮುಳುವಾಗುವ ಸಾಧ್ಯತೆಯಿದೆ.

ನಗರಾಭಿವೃದ್ಧಿ ಸಚಿವರಾಗಿ ಕೆ.ಜೆ.ಜಾರ್ಜ್ ಗೆ ಮಿಶ್ರ ಪ್ರತಿಕ್ರಿಯೆ ಸಿಕ್ಕಿದೆ. ಹೊಸ ಮೂಲಭೂತ ಸೌಕರ್ಯಗಳನ್ನು ಆರಂಭಿಸಿದ್ದಕ್ಕೆ ಕೆಲವರು ಜಾರ್ಜ್ ಅವರನ್ನು ಹೊಗಳುತ್ತಿದ್ದರೆ ಇನ್ನು ಕೆಲವರು ಸ್ಟೀಲ್ ಮೇಲ್ಸೇತುವೆಯಂತಹ ಯೋಜನೆಗಳಿಗೆ ಪ್ರತಿಭಟನೆ ವ್ಯಕ್ತವಾಗಿದೆ. ಸರ್ವಜ್ಞನಗರದಲ್ಲಿ ಹಲವರಿಗದೆ ಜಾರ್ಜ್ ಅವರ ಮೇಲೆ ವಿಶ್ವಾಸವಿದೆ, ಇದಕ್ಕೆ ಅವರು ಕೈಗೊಂಡಿರುವ ಅಭಿವೃದ್ಧಿಪರ ಮೂಲಭೂತ ಸೌಕರ್ಯಗಳು ಕಾರಣವಾಗಿದೆ.
 
ಸಂಪೂರ್ಣವಾಗದಿರುವ ವೈಟ್ ಟಾಪಿಂಗ್ ಕೆಲಸಗಳಿಂದ ಸಂಚಾರ ದಟ್ಟಣೆ ಸಮಸ್ಯೆ ಇನ್ನೂ ಹಾಗೆಯೇ ಉಳಿದಿದ್ದು ಮೂಲಭೂತ ಸೌಕರ್ಯಗಳು ಸರಿಯಾಗಿ ಜನರಿಗೆ ತಲುಪಿಲ್ಲ ಎಂಬ ನೋವು ಜಾರ್ಜ್ ಅವರ ಮೇಲೆ ಹಲವರಿಗಿದೆ.

ನಾಗರಿಕ ಸಮಸ್ಯೆಗಳ ಬಗ್ಗೆ ಆಸಕ್ತಿ ಹೊಂದಿರುವ ಪೃಥ್ವಿ ಅವರಿಗೆ ಕ್ಲೀನ್ ಇಮೇಜ್ ಇದೆ. ಆದರೆ ಸರ್ವಜ್ಞನಗರ ಜನತೆಗೆ ಪೃಥ್ವಿ ಅವರ ಬಗ್ಗೆ ಅಷ್ಟು ಪರಿಚಯವಿಲ್ಲ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com