ಹುಬ್ಬಳ್ಳಿಯನ್ನು ಪಾಕ್ ಗೆ ಹೋಲಿಸಿದ್ದ ಮೌಲ್ವಿ ಈಗ ಕಾಂಗ್ರೆಸ್ ಪ್ರಚಾರಕ!

ಅಂದು ಪೋಲೀಸರೆದುರೇ ಹುಬ್ಬಳ್ಳಿಯ ಗಣೇಶ ಪೇಟೆಯನ್ನು ಪಾಕಿಸ್ತಾನಕ್ಕೆ ಹೋಲಿಸಿ ಜೈಲು ಪಾಲಾಗಿದ್ದ ಮೌಲ್ವಿ ಅಬ್ದುಲ್ ಹಮೀದ್ ಖೈರಾತಿ ಇಂದು ಕಾಂಗ್ರೆಸ್ ಪ್ರಚಾರಕ!
ಮೌಲ್ವಿ ಅಬ್ದುಲ್ ಹಮೀದ್ ಖೈರಾತಿ
ಮೌಲ್ವಿ ಅಬ್ದುಲ್ ಹಮೀದ್ ಖೈರಾತಿ
Updated on: 
ಹುಬ್ಬಳ್ಳಿ: ಅಂದು ಪೋಲೀಸರೆದುರೇ ಹುಬ್ಬಳ್ಳಿಯ ಗಣೇಶ ಪೇಟೆಯನ್ನು ಪಾಕಿಸ್ತಾನಕ್ಕೆ ಹೋಲಿಸಿ ಜೈಲು ಪಾಲಾಗಿದ್ದ ಮೌಲ್ವಿ ಅಬ್ದುಲ್ ಹಮೀದ್ ಖೈರಾತಿ ಇಂದು ಕಾಂಗ್ರೆಸ್ ಪ್ರಚಾರಕ!
ಕರ್ನಾಟಕ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಹುಬ್ಬಳ್ಳಿ-ಧಾರವಾಡ ಪೂರ್ವ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವ ಪ್ರಸಾದ್ ಅಬ್ಬಯ್ಯ ಅವರನ್ನು ಬೆಂಬಲಿಸುವಂತೆ ಮೌಲ್ವಿ ಖೈರಾತಿ ಪ್ರಚಾರ ನಡೆಸುತ್ತಿದ್ದಾರೆ.
ಈದ್ ಮಿಲಾದ್ ಸಂದರ್ಭದಲ್ಲಿ ಹುಬ್ಬಳ್ಳಿ ಗಣೇಶ್ ಪೇಟೆ ಮಸೀದಿಯಲ್ಲಿ ನಡೆದ ಕಾರ್ಯಕ್ರಮದ ವೇಳೆ ಮೌಲ್ವಿ ಖೈರಾತಿ ಪೋಲೀಸರ ಸಮ್ಮುಖದಲ್ಲಿಯೇ ’ಗಣೇಶ್ ಪೇಟೆ ನೋಡಲು ಪಾಕಿಸ್ತಾನದಂತಿದೆ, ಪಾಕಿಸ್ತಾನವನ್ನು ನೋಡಲು ನಾವು ಅಲ್ಲಿಗೆ ಹೋಗಬೇಕಾಗಿಲ್ಲ." ಎಂದು ದೇಶದ್ರೋಹದ ಹೇಳಿಕೆ ನೀಡಿದ್ದರು.
ದೇಶದ್ರೋಹದ ಹೇಳಿಕೆ ನಿಡಿದ್ದ ಖೈರಾತಿ ಯನ್ನು ಬಂಧಿಸಿ ಜೈಲಿಗಟ್ಟಲಾಗಿತ್ತು.
ಪ್ರಸ್ತುತ ಅದೇ ಮೌಲ್ವಿ ಖೈರಾತಿ  ಕಾಂಗ್ರೆಸ್ ಪರವಾಗಿ ಸಾರ್ವಜನಿಕರಲ್ಲಿ ಮತಯಾಚನೆ ನಡೆಸುತ್ತಿರುವುದು ಚರ್ಚೆಗೆ ಆಸ್ಪದ ನಿಡಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com