ಬ್ಯಾಂಕ್ ನಲ್ಲಿರುವ ಶೇ.90ರಷ್ಟು ಹಣ ಕೇವಲ 15 ಶ್ರೀಮಂತ ಉದ್ಯಮಿಗಳ ಜೇಬಿಗೆ: ರಾಹುಲ್

ಬ್ಯಾಂಕ್ ನಲ್ಲಿ ಜಮೆಯಾಗುವ ಶೇ.90ರಷ್ಟು ಹಣ ಕೇವಲ 15 ಶ್ರೀಮಂತ ಉದ್ಯಮಿಗಳ ಜೇಬು ಸೇರುತ್ತಿದೆ ಎಂದು ಕಾಂಗ್ರೆಸ್...
ಗಾರ್ಮೆಂಟ್ ಫ್ಯಾಕ್ಟರಿಯಲ್ಲಿ ರಾಹುಲ್ ಗಾಂಧಿ
ಗಾರ್ಮೆಂಟ್ ಫ್ಯಾಕ್ಟರಿಯಲ್ಲಿ ರಾಹುಲ್ ಗಾಂಧಿ
ಬೆಂಗಳೂರು: ಬ್ಯಾಂಕ್ ನಲ್ಲಿ ಜಮೆಯಾಗುವ ಶೇ.90ರಷ್ಟು ಹಣ ಕೇವಲ 15 ಶ್ರೀಮಂತ ಉದ್ಯಮಿಗಳ ಜೇಬು ಸೇರುತ್ತಿದೆ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಬುಧವಾರ ಆರೋಪಿಸಿದ್ದಾರೆ.
ಇಂದು ನಗರದಲ್ಲಿ ಗಾರ್ಮೆಂಟ್ ಉದ್ಯಮದ ಮಹಿಳೆಯರೊಂದಿಗೆ ಸಂವಾದ ನಡೆಸಿದ ರಾಹುಲ್ ಗಾಂಧಿ, ಬ್ಯಾಂಕ್ ನಲ್ಲಿರುವ ಎಲ್ಲಾ ಹಣ ದೊಡ್ಡ ದೊಡ್ಡ ಉದ್ಯಮಿಗಳ ಪಾಲಾಗುತ್ತಿದೆ. ಸಣ್ಣ ಮತ್ತು ಮಧ್ಯಮ ಕಂಪನಿಗಳಿಗೆ ಯಾವುದೇ ಹಣ ಸಿಗುತ್ತಿಲ್ಲ ಎಂದರು.
ಬ್ಯಾಂಕ್ ಗಳಿಗೆ 35 ಸಾವಿರ ಕೋಟಿ ರುಪಾಯಿ ವಂಚಿಸಿ ವಿದೇಶಕ್ಕೆ ಪರಾರಿಯಾಗಿರುವ ನೀರವ್ ಮೋದಿ ಯಾರಿಗೂ ಉದ್ಯೋಗ ನೀಡಿಲ್ಲ. ಆದರೆ ಅದೇ ಹಣ ನಿಮ್ಮಂತಹ ಸಣ್ಣ ಮತ್ತು ಮಧ್ಯಮ ಕಂಪನಿಗಳಿಗೆ ನೀಡಿದ್ದರೆ ಸಾವಿರಾರು ಜನರಿಗೆ ಉದ್ಯೋಗ ಸಿಗುತ್ತಿತ್ತು ಎಂದು ಕಾಂಗ್ರೆಸ್ ಅಧ್ಯಕ್ಷ ಹೇಳಿದರು.
ಗಣಿ ಮಾಫಿಯಾದ ರೆಡ್ಡಿ ಸಹೋದರರು ಸಹ 35 ಸಾವಿರ ಕೋಟಿ ರುಪಾಯಿ ಕೊಳ್ಳೆ ಹೊಡೆದಿದ್ದಾರೆ. ಆ ಹಣದಲ್ಲೂ ಸಾವಿರಾರು ಉದ್ಯೋಗ ಸೃಷ್ಟಿಸಬಹುದಿತ್ತು ಎಂದರು.
ಸಬ್ಸಿಡಿ ಮತ್ತು ಸೂಕ್ತ ಸಾಲ ಸೌಲಭ್ಯ ಇಲ್ಲದೆ ಹಲವು ಸಣ್ಣ ಪುಟ್ಟಗಾರ್ಮೆಂಟ್ ಫ್ಯಾಕ್ಟರಿಗಳು ಬಾಂಗ್ಲಾದೇಶಕ್ಕೆ ಸ್ಥಳಾಂತರಗೊಂಡಿವೆ. ಏಕೆಂದರೆ ಅಲ್ಲಿ ಸ್ಪರ್ಧೆ ಇಲ್ಲ ಮತ್ತು ಸಬ್ಸಿಡಿ ಸಿಗುತ್ತದೆ ಎಂದರು. ಅಲ್ಲದೆ ಜಿಎಸ್ ಟಿ ಮತ್ತು ನೋಟ್ ನಿಷೇಧ ಹಲವು ಗಾರ್ಮೆಂಟ್ ಫ್ಯಾಕ್ಟರಿಗಳು ಮುಚ್ಚಲು ಮತ್ತೊಂದು ಕಾರಣ ಎಂದು ಆರೋಪಿಸಿದರು.
ದೇಶದಲ್ಲಿ ಉದ್ಯೋಗದ್ದೇ ದೊಡ್ಡ ಸಮಸ್ಯೆಯಾಗಿದ್ದು, ಕಾಂಗ್ರೆಸ್ ಅಧಿಕಾರಕ್ಕೆ ಬಂದರೇ ಕೋಟ್ಯಾಂತರ ಉದ್ಯೋಗ ಸೃಷ್ಟಿ ಮಾಡುವುದಾಗಿ ಈಗಗಾಲೇ ಚುನಾವಣೆ ಪ್ರಣಾಳಿಕೆಯಲ್ಲಿ ಭರವಸೆ ನೀಡಲಾಗಿದೆ ಎಂದು ರಾಹುಲ್ ಗಾಂಧಿ ಹೇಳಿದರು.
ಪ್ರತಿ ಖಾತೆಗೆ 15 ಲಕ್ಷ ರುಪಾಯಿ ಹಾಕುತ್ತೇನೆ ಅಂದವರು ನಿಮ್ಮ ಜೇಬಿನಲ್ಲಿದ್ದ ಚಿಲ್ಲರೆ ಹಣವನ್ನೂ ಕಿತ್ತು ನೀರವ್ ಮೋದಿಗೆ ಕೊಟ್ಟರು ಎಂದು ದೂರಿದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com