ನಾನು ಮಂತ್ರಾಲಯ ರಾಘವೇಂದ್ರ ಸ್ವಾಮಿಯ ಭಕ್ತ, ಅವರು ಕಾವಿಧಾರಿ, ಕೇಸರಿ ಕಾವಿಯ ಸಂಕೇತ: ಜಗ್ಗೇಶ್

ಭೂ ಕಬಳಿಕೆದಾರರನ್ನು ತೆರವುಗೊಳಿಸಿ ಯಶವಂತಪುರದಲ್ಲಿ ಮಿನಿ ಲಾಲ್ ಬಾಗ್ ನಿರ್ಮಿಸುತ್ತೇನೆ, ಇದರಿಂದ ಟ್ರಾಫಿಕ್ ಜಾಮ್ ಕಡಿಮೆಯಾಗುತ್ತದೆ.
ಜಗ್ಗೇಶ್
ಜಗ್ಗೇಶ್
ಬೆಂಗಳೂರು: ಕನ್ನಡ ಸಿನಿಮಾ ರಂಗದಲ್ಲಿ ನವರಸ ನಾಯಕ ಎಂದೇ ಪ್ರಸಿದ್ಧವಾಗಿರುವ ಜಗ್ಗೇಶ್ ಸುಮಾರು 100 ಕ್ಕೂ ಹೆಚ್ಚು ಸಿನಿಮಾ ಗಳಲ್ಲಿ ನಟಿಸಿದ್ದಾರೆ. ಹಲವು ರಾಜ್ಯ ಹಾಗೂ ರಾಷ್ಚ್ರ ಪ್ರಶಸ್ತಿ ಗಳಿಸಿದ್ದಾರೆ. ಹಲವು ಸಿನಿಮಾಗಳನ್ನು ನಿರ್ದೇಶಿಸಿದ್ದಾರೆ. ಸುಮಾರು 35 ವರ್ಷಗಳಿಂದ ಕನ್ನಡ ಪ್ರೇಕ್ಷಕರನ್ನು ರಂಜಿಸುತ್ತಾ ಬಂದಿರುವ ಜಗ್ಗೇಶ್ ಈ ಬಾರಿ ಯಶವಂತಪುರ ವಿಧಾನಸಭೆ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ. ಅವರು ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ನೀಡಿರುವ ಸಂದರ್ಶನದ ಆಯ್ದ ಭಾಗ ಇಲ್ಲಿದೆ.
2008 ರಲ್ಲಿ ತುರುವೆಕೆರೆಯಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದೀರಿ, ಈ ಬಾರಿ ಯಶವಂತಪುರ ಏಕೆ?
ಯಶವಂತಪುರ ವಿಧಾನಸಭೆ ಕ್ಷೇತ್ರದಿಂದ ಸ್ಪರ್ಧಿಸುವುದಾಗಿ ನಾನು ಕೇಳಲಿಲ್ಲ, ನಾಯಕರೇ ನನ್ನನ್ನು ಈ ಕ್ಷೇತ್ರದಿಂದ ಸ್ಪರ್ಧಿಸುವಂತೆ ಹೇಳಿದರು.
ಬಿಜೆಪಿ ಸೇರಿದ್ದು ಏಕೆ?
ನಾನು ಮಂತ್ರಾಲಯ ರಾಘವೇಂದ್ರ ಸ್ವಾಮಿ ಭಕ್ತ, ರಾಘವೇಂದ್ರ ಸ್ವಾಮಿಗಳು ಕಾವಿ ಧರಿಸಿದ್ದಾರೆ, ಕೇಸರಿ ಕಾವಿಯ ಸಂಕೇತ, ಹೆಚ್ಚಾಗಿ ನಾನು ಮೋದಿ ಅವರಿಂದ ಪ್ರಭಾವಿತನಾಗಿದ್ದು ಬಿಜೆಪಿ ಸೇರಿದ್ದೇನೆ.
ಯಶವಂತಪುರ ಕ್ಷೇತ್ರದಿಂದ ಶೋಭ ಕರಂದ್ಲಾಜೆ ಸ್ಪರ್ಧಿಸಲು ಬಯಸಿದ್ದರು.ನಿಮ್ಮ ಮತ್ತು ಅವರ ನಡುವೆ ಈ ವಿಚಾರವಾಗಿ ಮನಸ್ತಾಪ ವಿದೆಯೇ?
ಹಾಗೇನು ಇಲ್ಲ, ಅವರು ಏಕೆ ಅಸಮಾಧಾನಗೊಳ್ಳುತ್ತಾರೆ, ಅವರು ನಮ್ಮ ಹಿರಿಯ ನಾಯಕಿ, ನನಗೆ ಅವರು ತಮ್ಮ ಬೆಂಬಲ ಸೂಚಿಸಿದ್ದಾರೆ.
ಹಾಲಿ ಶಾಸಕ ಸೋಮಶೇಖರ್ ನಿಮ್ಮ ವಿರುದ್ದ ಸ್ಪರ್ಧಿಸಿದ್ದಾರೆ, ಅವರ ಬಗ್ಗೆ ನಿಮ್ಮ ಅಭಿಪ್ರಾಯ?
ಸೋಮಶೇಖರ್ ಭ್ರಷ್ಟ, ಉತ್ತಮ ಕೆಲಸ ಮಾಡುವುದರಲ್ಲಿ ಹಿಂದುಳಿದಿದ್ದಾರೆ,. ರಸ್ತೆಗೆ ನಿಗಧಿತ 4 ಇಂಚುಗಳ ಡಾಂಬರು ಹಾಕುವ ಬದಲು ಕೇವಲ 1 ಇಂಚು ಡಾಂಬರು ಹಾಕಿ ಉಳಿದ ಹಣವನ್ನು ತಮ್ಮ ಜೇಬಿಗಿಳಿಸಿದ್ದಾರೆ, ಜೊತೆಗೆ ರಾಜ ಕಾಲುವೆ ಕಾಮಗಾರಿಯಲ್ಲೂ ಇದೇ ರೀತಿ ವಂತನೆ ಮಾಡಿದ್ದಾರೆ, ಅವರ ವಿರುದ್ಧ ಕ್ಷೇತ್ರದ ಜನತೆಗೆ ಅಸಮಾಧಾನವಿದೆ, ಅವರು ಈ ಬಾರಿ ಸೋಲುತ್ತಾರೆ.
ಯಶವಂತಪುರದಲ್ಲಿ ಕಮಲ ಆರಳತ್ತದೆ ಎಂದು ನಿಮಗನ್ನಿಸುತ್ತದೆಯೆ?
ಯಶವಂತಪುರದಲ್ಲಿ ಬಿಜೆಪಿ ಯಾವಾಗಲೂ ಪ್ರಬಲವಾಗಿದೆ, ಆರ್ ಅಶೋಕ್, ಶ್ರಿನಿವಾಸ್ ಮತ್ತು ಶೋಭ ಕರಂದ್ಲಾಜೆ ಮುಂತಾದ ನಾಯಕರಿದ್ದಾರೆ, ಕೇವಲ ಕಳೆದ ಬಾರಿ ಮಾತ್ರ ಕಾಂಗ್ರೆಸ್ ಜಯ ಗಳಿಸಿತ್ತು, ಈ ಬಾರಿ ಮತ್ತೆ ಬಿಜೆಪಿ ಗೆಲ್ಲುತ್ತದೆ.
ನಿಮ್ಮ ಗೆಲುವಿಗೆ ಸಹಾಯ ಮಾಡುವ ದೊಡ್ಡ ಅಂಶ ಯಾವುದು?
ದೇಶಾದ್ಯಂತ ಮೋದಿ ಅಲೆ ಇದೆ.
ಜನ ನಿಮಗೆ ಮತ ನೀಡಬೇಕೆಂದು ಏಕೆ ಬಯಸುವಿರಿ?
ಕಳೆದ 35 ವರ್ಷಗಳಿಂದ ನಾನು ಸಿನಿಮಾ ರಂಗದಲ್ಲಿ ಕೆಲಸ ಮಾಡುತ್ತಿದ್ದೇನೆ, ನನ್ನ ವಿರುದ್ಧ ಯಾವುದೇ ಕಪ್ಪು ಚುಕ್ಕೆಗಳಿಲ್ಲ, ನಾನು ಇಲ್ಲಿ ಕೆಲಸ ಮಾಡಲು ಬಯಸುತ್ತೇನೆ, ಗ್ಲಾಮರ್ ಇಟ್ಟುಕೊಂಡು ನಾನು ಇಲ್ಲಿ ಮತ ಕೇಳುತ್ತಿಲ್ಲ,2008 ರಲ್ಲಿ ಬಿಜೆಪಿ ಸರ್ಕಾರ ಇದ್ದಾಗ ನಾನು ಕೆಎಸ್ ಆರ್ ಟಿಸಿ ಉಪಾಧ್ಯಕ್ಷನಾಗಿದ್ದೆ, ಈ ವೇಳೆ ನಿಗಮಕ್ಕೆ 7 ರಾಷ್ಟ್ರೀಯ ಪ್ರಶಸ್ತಿ ಲಭಿಸಿದ್ದವು.
ಒಂದು ವೇಳೆ ಗೆದ್ದರೇ ಯಶವಂತಪುರವನ್ನು ಹೇಗೆ ಅಭಿವೃದ್ಧಿ ಪಡಿಸುತ್ತೀರಿ?
ಇಲ್ಲಿ ಸುಮಾರು ನೂರು ಎಕರೆ ಅಷ್ಟು ಭೂಮಿ ಒತ್ತುವರಿಯಾಗಿದೆ,ಭೂ ಕಬಳಿಕೆದಾರರನ್ನು ತೆರವುಗೊಳಿಸಿ ಈ ಭೂಮಿಯನ್ನು ಕಾಡಾಗಿ ಪರಿವರ್ತಿಸಿ ಟ್ರೀ ಪಾರ್ಕ್ ಮಾಡುತ್ತೇನೆ, ಇಲ್ಲಿಂದ ಜನ ಲಾಲ್ ಬಾಗ್ ತೆರಳುತ್ತಾರೆ, ಇದರಿಂದ ಟ್ರಾಫಿಕ್ ಸಮಸ್ಯೆ ಉಂಟಾಗುತ್ತದೆ. ನಾವು ಇಲ್ಲಿಯೇ ಮಿನಿ ಲಾಲ್ ಬಾಗ್ ನಿರ್ಮಿಸಿದರೇ ಇದೊಂದು ಪ್ರವಾಸಿ ತಾಣವಾಗುತ್ತದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com