ಮಹತ್ವ ಕಳೆದುಕೊಂಡ ದತ್ತಪೀಠ ವಿವಾದ; ಬಿಜೆಪಿಗೆ ಗೆಲುವು ಕಠಿಣ

2000ನೇ ಇಸವಿಯಲ್ಲಿ ಚಿಕ್ಕಮಗಳೂರಿನಲ್ಲಿ ಚುನಾವಣಾ ಪ್ರಚಾರ ನಡೆಸುತ್ತಿದ್ದಾಗ ಅಂದಿನ ...
ಬಾಬಾ ಬುಡನ್ ಗಿರಿ ದೇವಾಲಯಕ್ಕೆ ಹೋಗುತ್ತಿರುವ ಭಕ್ತರು
ಬಾಬಾ ಬುಡನ್ ಗಿರಿ ದೇವಾಲಯಕ್ಕೆ ಹೋಗುತ್ತಿರುವ ಭಕ್ತರು
Updated on

ಬೆಂಗಳೂರು: 2000ನೇ ಇಸವಿಯಲ್ಲಿ ಚಿಕ್ಕಮಗಳೂರಿನಲ್ಲಿ ಚುನಾವಣಾ ಪ್ರಚಾರ ನಡೆಸುತ್ತಿದ್ದಾಗ ಅಂದಿನ ಕೇಂದ್ರ ಸಚಿವರಾಗಿದ್ದ ಅನಂತ್ ಕುಮಾರ್ ಅವರು ಚಿಕ್ಕಮಗಳೂರನ್ನು ದಕ್ಷಿಣ ಭಾರತದ ಅಯೋಧ್ಯೆ ಮಾಡುವುದಾಗಿ ಹೇಳಿದ್ದರು.

ಬಾಬಾ ಬುಡನ್ ಗಿರಿ ಬೆಟ್ಟದಲ್ಲಿ ಧಾರ್ಮಿಕ ಚಟುವಟಿಕೆಗಳನ್ನು ನಡೆಸಲು ಹಕ್ಕು ನೀಡಬೇಕೆಂಬ ಸಂಘ ಪರಿವಾರದ ಚಳವಳಿಗೆ ಯಶಸ್ಸು ಸಿಕ್ಕಿತ್ತು. ಕಾಫಿ ಬೆಳೆಯ ನಾಡಾದ ಚಿಕ್ಕಮಗಳೂರಿನ ಬಾಬಾ ಬುಡನ್ ಗಿರಿ ಬೆಟ್ಟದ ತಪ್ಪಲಿನಲ್ಲಿ ನಂತರ ಕಂಡಿದ್ದು ಕೋಮು ಘರ್ಷಣೆಗಳು.

ಇದಾಗಿ 18 ವರ್ಷಗಳು ಕಳೆದಿವೆ. ಈ ಬಾರಿಯ ಚುನಾವಣೆಯಲ್ಲಿ ದತ್ತಪೀಠ ವಿವಾದ ಅಷ್ಟೊಂದು ಪ್ರಚಾರಕ್ಕೆ ಬರಲಿಲ್ಲ. ಬಾಬಾ ಬುಡನ್ ಗಿರಿ ಬೆಟ್ಟದ ಮೇಲಿರುವ ಇನಾಮ್ ದತ್ತಾತ್ರೇಯ ಬಾಬಾ ಬುಡನ್ ಸ್ವಾಮಿ ದರ್ಗಾಕ್ಕೆ ಮುಸಲ್ಮಾನರು ಭೇಟಿ ನೀಡುತ್ತಾರೆ. ಪೂರ್ಣ ಚಂದ್ರೋದಯ ಸಮಯದಲ್ಲಿ ಸ್ಥಳೀಯ ಹಿಂದೂ ಸಂಘಟನೆಗಳು ವಿಶೇಷ ಧಾರ್ಮಿಕ ಚಟುವಟಿಕೆಗಳನ್ನು ಕೈಗೊಳ್ಳುತ್ತವೆ.

ಚಿಕ್ಕಮಗಳೂರಿನ ಶಾಸಕ ಸಿ.ಟಿ.ರವಿ ಈ ಕ್ಷೇತ್ರದಲ್ಲಿ ಮೂರು ಬಾರಿ ಗೆಲುವು ಸಾಧಿಸಿದ್ದಾರೆ. ಬಿಜೆಪಿಗೆ ಕಳೆದ ಹಲವು ವರ್ಷಗಳಿಂದ ಬಾಬಾ ಬುಡನ್ ಗಿರಿ ದತ್ತಪೀಠ ವಿವಾದ ಒಂದು ವಿಷಯವಾಗಿತ್ತು. ಶತಮಾನಗಳಿಂದ ಹಿಂದೂ ಮತ್ತು ಮುಸಲ್ಮಾನರು ಸೂಫಿ ದರ್ಗಾದಲ್ಲಿ ಪ್ರಾರ್ಥನೆ ಸಲ್ಲಿಸುತ್ತಿದ್ದರು.

ಆದರೆ ಕಳೆದೆರಡು ದಶಕಗಳಲ್ಲಿ ಬಿಜೆಪಿಯು ದತ್ತ ಪೀಠ ವಿಷಯವನ್ನು ಎತ್ತುತ್ತಿದ್ದು ಇದು ಹಿಂದೂ ದೇವಾಲಯ ಎಂದು ಪ್ರತಿಪಾದಿಸಿಕೊಂಡು ಬರುತ್ತಿದೆ. ಆದರೆ ಈ ಬಾರಿಯ ಚುನಾವಣೆಯಲ್ಲಿ ಚಿಕ್ಕಮಗಳೂರಿನ ಘಟ್ಟ ಪ್ರದೇಶದ ಜನರು ದೇವಾಲಯಕ್ಕಿಂತ ಹೆಚ್ಚಿನ ಬೇರೆ ವಿಷಯಗಳ ಬಗ್ಗೆ ಬೇಡಿಕೆಯನ್ನಿಟ್ಟಿದ್ದಾರೆ. ಜಿಲ್ಲೆಗೆ ಮತ್ತು ಚಿಕ್ಕಮಗಳೂರು ಪಟ್ಟಣಕ್ಕೆ ಇದುವರೆಗೆ ಬೃಹತ್ ನೀರಾವರಿ ಯೋಜನೆ ಬಾರದಿದ್ದು ನೀರು ಒದಗಿಸುವ ಕುರಿತು ಇಲ್ಲಿನ ಜನರು ಜನಪ್ರತಿನಿಧಿಗಳಲ್ಲಿ ಕೇಳುತ್ತಿದ್ದಾರೆ.

ಮುಂದಿನ ಕೆಲವು ತಿಂಗಳುಗಳಲ್ಲಿ ಆರಂಭವಾಗಲಿರುವ ಭದ್ರಾ ಮೇಲ್ದಂಡೆ ಯೋಜನೆ ಚಿಕ್ಕಮಗಳೂರಿಗೆ ನೀರಿನ ಪೂರೈಕೆಗೆ ಸ್ವಲ್ಪ ಸಹಾಯವಾಗಬಹುದು. ಚಿಕ್ಕಮಗಳೂರು ಪಟ್ಟಣ ಸದ್ಯ ಯಗಚಿ ಅಣೆಕಟ್ಟನ್ನು ನೀರಿಗಾಗಿ ಆಸರೆಯಾಗಿಟ್ಟಿದ್ದು ಅದು ಸುಮಾರು 20 ಕಿಲೋ ಮೀಟರ್ ದೂರದಲ್ಲಿದೆ. ಚಿಕ್ಕಮಗಳೂರಿನ ಬೆಟ್ಟ ಪ್ರದೇಶಗಳಿಂದ ದೀರ್ಘಕಾಲದಿಂದ ಕಿರುಜಲಪಾತಗಳು ಬರುತ್ತಿದ್ದರೂ ಕೂಡ ಹಲವು ವರ್ಷಗಳಿಂದ ಕುಡಿಯುವ ನೀರಿನ ಸಮಸ್ಯೆಗಳನ್ನು ಎದುರಿಸುತ್ತಿದೆ. ಕಡೂರು, ತರಿಕೆರೆ ತಾಲ್ಲೂಕುಗಳಲ್ಲಿ ಕೂಡ ನೀರಿನ ಸಮಸ್ಯೆ ಬೃಹತ್ತಾಗಿದೆ ಎಂದು ಇಲ್ಲಿನ ವಿಶ್ಲೇಷಕರೊಬ್ಬರು ಹೇಳುತ್ತಾರೆ.

ಪಶ್ಚಿಮ ಘಟ್ಟ ಪ್ರದೇಶ ಚಿಕ್ಕಮಗಳೂರಿನಲ್ಲಿ ಈ ಬಾರಿ ಕಾಂಗ್ರೆಸ್ ಮತ್ತು ಬಿಜೆಪಿ ಮಧ್ಯೆ ಹಣಾಹಣಿಯಿದೆ. ಮೂಡಿಗೆರೆ, ಶೃಂಗೇರಿ, ಚಿಕ್ಕಮಗಳೂರು ತಾಲ್ಲೂಕುಗಳು ಬಿಜೆಪಿಯ ಭದ್ರಕೋಟೆಯಾಗಿದ್ದು ಈ ಬಾರಿ ಫಲಿತಾಂಶ ಅಚ್ಚರಿಯಾಗಿ ಕಂಡರೂ ಸಂಶಯಪಡಬೇಕಾಗಿಲ್ಲ. ಶಾಸಕ ಸಿ ಟಿ ರವಿಯವರಿಗೆ ಗೆಲ್ಲುವುದು ತುಸು ತ್ರಾಸದಾಯಕ ಎನ್ನಬಹುದು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com