ಸತ್ತವರನ್ನು ಬಿಟ್ಟು, ಎಲ್ಲರೂ ನನಗೆ ಮತದಾನ ಮಾಡಬೇಕು: ಸಿದ್ದರಾಮಯ್ಯ

ರಾಜ್ಯ ವಿಧಾನ ಸಭೆ ಚುನಾವಣೆಯ ಬಹಿರಂಗ ಪ್ರಚಾರದ ಅಂತಿಮ ದಿನವಾದ ನಿನ್ನೆ ಅಂದರೆ ಗುರುವಾರ ಸಿಎಂ ಸಿದ್ದರಾಮಯ್ಯ ಚಾಮುಂಡೇಶ್ವರಿ ಕ್ಷೇತ್ರದ ವಿವಿಧ ...
ಮೈಸೂರಿನಲ್ಲಿ ಸಿಎಂ ಸಿದ್ದರಾಮಯ್ಯ ಪ್ರಚಾರ
ಮೈಸೂರಿನಲ್ಲಿ ಸಿಎಂ ಸಿದ್ದರಾಮಯ್ಯ ಪ್ರಚಾರ
ಮೈಸೂರು: ರಾಜ್ಯ ವಿಧಾನ ಸಭೆ ಚುನಾವಣೆಯ ಬಹಿರಂಗ ಪ್ರಚಾರದ ಅಂತಿಮ ದಿನವಾದ ನಿನ್ನೆ ಅಂದರೆ ಗುರುವಾರ ಸಿಎಂ ಸಿದ್ದರಾಮಯ್ಯ ಚಾಮುಂಡೇಶ್ವರಿ ಕ್ಷೇತ್ರದ ವಿವಿಧ ಹಳ್ಳಿಗಳಲ್ಲಿ ಬಿರುಸಿನ ಪ್ರಚಾರ ನಡೆಸಿದರು.
ಒಕ್ಕಲಿಗ- ವೀರಶೈವ ಸಮುದಾಯದ ಪ್ರಾಬಲ್ಯವಿರುವ ಹಳ್ಳಿಗಳಲ್ಲಿ ಪ್ರಚಾರ ನಡೆಸಿದ ಸಿಎಂ  ತಾವು ಈ ಹಿಂದೆ ಕ್ಷೇತ್ರಕ್ಕೆ ನೀಡಿರುವ ಅನುದಾನ ಹಾಗೂ ವಿವಿಧ ಯೋಜನೆಗಳನ್ನು ಜನರ ಮುಂದೆ ಸ್ಮರಿಸಿದರು.
ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣದಿಂದ ಗೋಪಾಲಪುರ ಮತ್ತು ಡುರಾ ಗ್ರಾಮಗಳಿಗೆ ಸಿದ್ದರಾಮಯ್ಯ ತೆರಳಿದರು, ಗ್ರಾಮಕ್ಕೆ ಸಿಎಂ ವಾಹನ ಆಗಮಿಸುತ್ತಿದ್ದಂತೆಯೇ ಅಪಾರ ಪ್ರಮಾಣದಲ್ಲಿ ಜನರು ಸೇರಿದರು. ಹಲವು ಯುವಕರು ಹಾಗೂ ಹಿರಿಯರು ಸಿಎಂ ಗೆ ನಮಸ್ಕರಿಸಿದರು. ಜೆಡಿಎಸ್ ಅನ್ನು ನಂಬಬೇಡಿ, ಅವರು 25 ಸೀಟುಗಳನ್ನು ಗೆಲ್ಲುವುದು ಕಷ್ಟ. ಎಂದು ಹೇಳಿದರು.
ಡುರಾ ನಂತರ ತಕ್ಷಣವೇ ಪಕ್ಕದ ಮತ್ತೊಂದು ಗ್ರಾಮಕ್ಕೆ ತೆರಳಿದರು, ಅಲ್ಲಿ ಸಿಎಂ ಅರಿಗೆ ಹಾರ ಹಾಕಿ ಸ್ವಾಗತಿಸಿ ಪಟಾಕಿ ಸಿಡಿಸಲಾಯಿತು, ನಂತರ ಸಿದ್ದರಾಮಯ್ಯ ಬೊಗಾದಿಗೆ ಬಂದರು ಈ ವೇಳೆ ಜೆಡಿಎಸ್ ರ್ಯಾಲಿ ನಡೆಸತ್ತಿತ್ತು. ಯಾವುದೇ ರೀತಿಯ ಘರ್ಷಣೆ ನಡೆಯಬಾರದೆಂದು ಮುನ್ನೆಚ್ಚರಿಕೆ ತೆಗೆದುಕೊಂಡ ಪೊಲೀಸರು, ರಸ್ತೆ ಕ್ಲೋಸ್ ಮಾಡಿದ್ದರು.
ಕುರುಬ ಸಮುದಾಯದ ಪ್ರಾಬಲ್ಯವಿರುವ ಹಿನಕಲ್ ನಲ್ಲಿ ಸಿಎಂ ದೆ ಪೂರ್ಣ ಕುಂಭ ಸ್ವಾಗತ ಕೋರಲಾಯಿತು. ವೀರಗಾಸೆ ಮತ್ತು ಡೊಳ್ಳು ಕುಣಿತ ಏರ್ಪಡಿಸಲಾಗಿತ್ತು,.ಈ ವೇಳೆ ಮಾತನಾಡಿದ ಸಿಎಂ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದರು. ಜೆಡಿಎಸ್ 30ಕ್ಕಿಂತ ಹೆಚ್ಚಿನ ಸ್ಥಾನ ಗೆಲ್ಲಲು ಸಾಧ್ಯವಿಲ್ಲ ಎಂದು ಹೇಳಿದರು.
ಇದಕ್ಕೂ ಮೊದಲು ಸಿದ್ದರಾಮಯ್ಯ ಲಿಂಗಾಯತ ಸಮುದಾಯ ಅಧಿಕ ಸಂಖ್ಯೆಯಲ್ಲಿರುವ ಜೆಗ್ಗಳ್ಳಿಯಲ್ಲಿ ಪ್ರಚಾರ ನಡೆಸಿದರು, ನಂತರ ಮಂಡಕಳ್ಳಿಯಲ್ಲಿರುವ ಮಲ್ಲಮ್ಮ ದೇವಾಲಯಕ್ಕೆ ತೆರಳಿ ಪೂಜೆ ಸಲ್ಲಿಸಿ ಮಾತನಾಡಿದ ಸಿಎಂ, ನನಗೆ ಎಲ್ಲಾ ಮತದಾರರು ಬೇಕು, ಸತ್ತವರನ್ನು ಹೊರತು ಪಡಿಸಿ ಎಲ್ಲರು ನನಗೆ ಮತಹಾಕಬೇಕು ಎಂದು ಮತದಾರಿರಿಗೆ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com