ಚುನಾವಣಾ ಪ್ರಚಾರದಲ್ಲಿ ಮಾತಿನ ಸಮರ: ನಾಲಗೆ ಹರಿಬಿಟ್ಚ ನಾಯಕರ ನವರಂಗಿ ಹೇಳಿಕೆಗಳು!

ರಾಷ್ಟ್ರೀಯ ನಾಯಕರುಗಳು ನಿರಂತರ ಚುನಾವಣಾ ಪ್ರಚಾರದಿಂದಾಗಿ ಕರ್ನಾಟಕ ವಿಧಾನ ಸಭೆ ಕಣ ಸಾಕಷ್ಟು ರಂಗೇರಿತ್ತು. ಪ್ರಮುಖ ಪಕ್ಷಗಳ ರಾಷ್ಟ್ರ ನಾಯಕರು ..
ರಾಜಕೀಯ ಪಕ್ಷದ ನಾಯಕರುಗಳು
ರಾಜಕೀಯ ಪಕ್ಷದ ನಾಯಕರುಗಳು
Updated on
ಬೆಂಗಳೂರು: ರಾಷ್ಟ್ರೀಯ ನಾಯಕರುಗಳು ನಿರಂತರ ಚುನಾವಣಾ ಪ್ರಚಾರದಿಂದಾಗಿ ಕರ್ನಾಟಕ ವಿಧಾನ ಸಭೆ ಕಣ ಸಾಕಷ್ಟು ರಂಗೇರಿತ್ತು. ಪ್ರಮುಖ ಪಕ್ಷಗಳ ರಾಷ್ಟ್ರ ನಾಯಕರು ರಾಜ್ಯದಲ್ಲಿ ಪ್ರಚಾರ ನಡೆಸಿದರು. ರಾಷ್ಟ್ರೀಯ ಪಕ್ಷಗಳ ನಾಯಕರು ನೀಡಿದ ಹಲವು ರೀತಿಯ ಹೇಳಿಕೆಗಳು ಇಲ್ಲಿವೆ.
2019ರ ಲೋಕಸಭೆ ಚುನಾವಣೆಯನ್ನು ಗಮನದಲ್ಲಿರಿಸಿಕೊಂಡಿರುವ ಬಿಜೆಪಿ ಕರ್ನಾಟಕದಲ್ಲಿ ಪ್ರಚಾರಕ್ಕೆ ಹೆಚ್ಚಿನ ಒತ್ತು ನೀಡಿತ್ತು. ಪ್ರಧಾನಿ ಮೋದಿ ಖುದ್ದಾಗಿ 21 ರ್ಯಾಲಿಗಳಲ್ಲಿ ಭಾಗವಹಿಸಿದ್ದರು. ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ರಾಜ್ಯದ ಹಲವು ಭಾಗಗಳಲ್ಲಿ ಪ್ರವಾಸ ನಡೆಸಿದರು.
ಹಲವು ರಾಜ್ಯಗಳ ಮುಖ್ಯಮಂತ್ರಿಗಳು ಹಾಗೂ ಬಿಜೆಪಿ ಕೇಂದ್ರ ಸಚಿವರು  ಕರ್ನಾಟಕಕ್ಕೆ ಬಂದು ಚುನಾವಣಾ ಪ್ರಚಾರ ನಡೆಸಿದ್ದಾರೆ. ಚುನಾವಣಾ ಪ್ರಚಾರದ ಕೊನೆ ಕೊನೆಯಲ್ಲಿ ನಾಯಕರುಗಳ ಹೇಳಿಕೆ ತೀರಾ ವಯಕ್ತಿಕ ನಿಂದನೆಗೆ ತಿರುಗಿತು  ಮೂರು ಪಕ್ಷಗಳ ನಾಯಕರು ನೆಗೆಟಿವ್ ಆಗಿ ಪ್ರಚಾರ ನಡೆಸಿದ್ದಾರೆ, ಆದರೆ ಕರ್ನಾಟಕ ಮತದಾರ ಸೂಕ್ಷ್ಮವಾಗಿದ್ದು, ಯಾವುದೇ ನೆಗೆಟಿವ್ ಹೇಳಿಕೆಗಳಿಗೆ ಮಹತ್ವ ನೀಡುವುದಿಲ್ಲ ಎಂದು ರಾಜಕೀಯ ವಿಶ್ಲೇಷಕ ಸಂದೀಪ್ ಶಾಸ್ತ್ರಿ ಹೇಳಿದ್ದಾರೆ.
ಪ್ರಧಾನಿ ಮೋದಿ ನಮ್ಮದು 10ಪರ್ಸೆಂಟ್ ಕಮಿಷನ್ ಸರ್ಕಾರ ಎಂದರು, ಆದರೆ  ರಾಜ್ಯ ಹಿಂದೆಂದು ನೋಡಿರದಂತ ಭ್ರಷ್ಟರು ಅವರ ಸುತ್ತಮುತ್ತಲೇ ಇದ್ದಾರೆ.
ದಿನೇಶ್ ಗುಂಡೂರಾವ್
ಕಾಂಗ್ರೆಸ್ ಮತ್ತೊಮ್ಮೆ ಕರ್ನಾಟಕದಲ್ಲಿ ಅಧಿಕಾರ ಹೊಂದುವ ದುರುದ್ದೇಶದಿಂದ ವೋಟರ್ ಐಡಿ ಪ್ರಕರಣಗಳನ್ನು ನಡೆಸಿದ್ದಾರೆ. ಇದು ಪ್ರಜಾಪ್ರಭುತ್ವಕ್ಕೆ ವಿರೋಧ.
ಅಮಿತ್ ಶಾ
ಮುಖ್ಯಮಂತ್ರಿಗೆ ಬೆಂಗಳೂರು ಏರೆ ಇಷ್ಟವಾಗಲಿಲ್ಲ ಎಂದು ನನಗೆ ತಿಳಿದಿಲ್ಲ, ಮೂವರು ಅಪ್ರಸಿದ್ದ ವ್ಯಕ್ತಿಗಳ ಕೈಗೆ ನೀಡಿದ್ದಾರೆ. ಈ ಮೂವರು ಬೆಂಗಳೂರಿನಲ್ಲಿ ವೋಟ್ ಬ್ಯಾಂಕ್ ರಾಜಕಾರಣ ಮಾಡುತ್ತಿದ್ದಾರೆ,
ಪ್ರಧಾನಿ ನರೇಂದ್ರ ಮೋದಿ
ಮೋದಿ ಉತ್ತಮ ಮಾತುಗಾರ, ಒಬ್ಬ ಕಲಾವಿದನಂತೆ ಅವರು ಮಾತನಾಡುತ್ತಾರೆ, ಆದರೆ ಇಂತ ಮಾತುಗಳಿಂದ ಜನರ ಹೊಟ್ಟೆ ತುಂಬುವುದಿಲ್ಲ, 
ಸೋನಿಯಾ ಗಾಂಧಿ
ಕರ್ನಾಟಕದಲ್ಲಿ ರೈತರಿಗೆ ಏಕೆ ನೀರಿನ ಕೊರತೆಯಾಗುತ್ತಿದೆ. 
ಏಕೆಂದರೇ ಕರ್ನಾಟಕ ಸರ್ಕಾರ ಸ್ಲೀಪಿಂಗ್ ಮೋಡ್ ನಲ್ಲಿದೆ, ರೈತರ ಸಮಸ್ಯೆಗಳಿಗೆ ಸರ್ಕಾರ ಏನನ್ನೂ ಮಾಡಲಿಲ್ಲ.
ನರೇಂದ್ರ ಮೋದಿ
ಬಿಜೆಪಿ ಪ್ರಾಮಾಣಿಕತೆ ಮತ್ತು ಸಭ್ಯತೆ ಬಗ್ಗೆ ಮಾತನಾಡುತ್ತಿದೆ, ಕೊಲೆ ಪ್ರಕರಣದ ಆರೋಪಿಯನ್ನು ಪಕ್ಷದ ಅಧ್ಯಕ್ಷನನ್ನಾಗಿಸಿದೆ.
ರಾಹುಲ್ ಗಾಂಧಿ
ಸೋನಿಯಾ ಗಾಂಧಿ ಅವರು ಕರ್ನಾಟಕದಲ್ಲಿ ಪ್ರಚಾರಕ್ಕೆ ಬಂದರೆ ಪಕ್ಷಕ್ಕೆ ಸಹಾಯವಾಗುತ್ತದೆ ಎಂದು ಕಾಂಗ್ರೆಸ್ ನಾಯಕರು ಹೇಳಿದ್ದಾರೆ, ಅಂದರೇ ಅದರ ಅರ್ಥ, ಕಾಂಗ್ರೆಸ್ ಪಕ್ಷದ ಅಧ್ಯಕ್ಷರ ಮೇಲೆ ಅವರಿಗೆ ನಂಬಿಕೆ ಇಲ್ಲ ಎಂದು ಅರ್ಥ.
ನರೇಂದ್ರ ಮೋದಿ
ನಮ್ಮ ತಾಯಿ ಇಟಲಿಯವರು, ಆದರೂ ಈ ದೇಶದಲ್ಲಿ ಬಹಳಷ್ಟು ವರ್ಷ ಕಳೆದಿದ್ದಾರೆ. ದೇಶಕ್ಕಾಗಿ ಬಹಳಷ್ಟು ತ್ಯಾಗ ಮಾಡಿದ್ದಾರೆ. ಸೋನಿಯಾ ಮತ್ತು ರಾಹುಲ್ ಬಗ್ಗೆ ಮಾತನಾಡುವುದರಿಂದ ಅವರಿಗೆ ಖುಷಿ ಆಗುತ್ತೆ ಎಂಬುದಾದರೆ ಮಾತನಾಡಲಿ.
ರಾಹುಲ್‌ ಗಾಂಧಿ
ಈ ಚುನಾವಣೆ ಸಾಮಾನ್ಯವಾದ ಚುನಾವಣೆ ಅಲ್ಲ, ದೇಶದ ಭದ್ರತೆ ಮತ್ತು  ಜಿಹಾದಿ ಶಕ್ತಿಗಳ ನಡುವಿನ  ಹೋರಾಟವಾಗಿದೆ.  ಶಿವನ ಕೇಂದ್ರವಾಗಿರುವ ಈ ವಲಯ ಜಿಹಾದಿ ಶಕ್ತಿಗಳಿಂದಾಗಿ ಕುಖ್ಯಾತಿ ಪಡೆದಿದೆ.  ಅಂದು ನಡೆದಿದ್ದ ಕೋಮು ಹಿಂಸಾಚಾರದಲ್ಲಿ 18 ಜನರ ಹತ್ಯೆಯಾಗಿತ್ತು ಎಂದು ಹೇಳಿದರು.
ಹಿಂದೂಗಳು ಒಗ್ಗಟ್ಟನಿಂದ ಬದುಕಬೇಕು, ಇಲ್ಲದಿದ್ದರೆ ಸಮಾಜ ವಿರೋಧಿಗಳು  ಹಿಂದೂ ಸಮಾಜವನ್ನು ಒಡೆದು ಅನುಕೂಲ ಪಡೆದುಕೊಳ್ಳುತ್ತಾರೆ. 
ಯೋಗಿ ಆದಿತ್ಯನಾಥ್
ತಾನು ಪ್ರಧಾನಿಯಾಗಲು ಸಿದ್ದ ಎಂದು ಹೇಳಿಕೆ ನೀಡಿರುವ ರಾಹುಲ್ ಗಾಂಧಿ  ಹಗಲು ಗನಸು ಕಾಣುವುದನ್ನು ನಿಲ್ಲಿಸಬೇಕು. 
ಗಿರಿರಾಜ್ ಸಿಂಗ್

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com