ಮತದಾನದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಸಂಸದೆ ಶೋಭಾ, ನಾನು ನನ್ನ ಮತವನ್ನು ಚಲಾಯಿಸಿದ್ದೇನೆ, ನಮ್ಮ ಪಕ್ಷದ ಕಾರ್ಯಕರ್ತರು ಬೂತ್ ಗೆ ಬಂದು ಮತ ಚಲಾಯಿಸಿ ಸಂತೋಷ ಪಡುತ್ತಿದ್ದಾರೆ. ಹಾಗೆಯೇ ಜನರು ಕೂಡ ಕರ್ನಾಟಕದಲ್ಲಿ ಬಿಜೆಪಿ ಸರ್ಕಾರಕ್ಕಾಗಿ ಕಾಯುತ್ತಿದ್ದಾರೆ ಎಂದು ತಿಳಿಸಿದ್ದಾರೆ.
ಮಹಿಳಾ ಮತದಾರರಿಗಾಗಿ ಪಿಂಕ್ ಬೂತ್ ತೆರೆದಿರುವುದನ್ನು ಹೊಗಳಿದ ಶೋಭಾ,ಚುನಾವಣಾ ಆಯೋಗದ ನಿರ್ಧಾರವನ್ನು ಸ್ವಾಗತಿಸಿದ್ದಾರೆ.