ಕರ್ನಾಟಕ ಚುನಾವಣೆ: ಗುಪ್ತಚರ ಸಂಸ್ಥೆ ವರದಿ ಪ್ರಕಾರ ಕಾಂಗ್ರೆಸ್ ಗೆ ಬಹುಮತ

ಕರ್ನಾಟಕದ 15ನೇ ವಿಧಾನಸಭೆಗೆ ಮೊನ್ನೆ ಮತದಾನ ನಡೆದ ನಂತರ ಬಹುತೇಕ ಚುನಾವಣಾತೋತ್ತರ ...
ಮೈಸೂರಿನ ಹುಂಡಿ ಗ್ರಾಮದಲ್ಲಿ ಮತದಾನ ಮಾಡಿ ಹೊರಬಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಮತದಾರರತ್ತ ಕೈಮುಗಿಯುವುದು
ಮೈಸೂರಿನ ಹುಂಡಿ ಗ್ರಾಮದಲ್ಲಿ ಮತದಾನ ಮಾಡಿ ಹೊರಬಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಮತದಾರರತ್ತ ಕೈಮುಗಿಯುವುದು

ಬೆಂಗಳೂರು: ಕರ್ನಾಟಕದ 15ನೇ ವಿಧಾನಸಭೆಗೆ ಮೊನ್ನೆ ಮತದಾನ ನಡೆದ ನಂತರ ಬಹುತೇಕ ಚುನಾವಣಾತೋತ್ತರ ಸಮೀಕ್ಷೆಗಳು ಬಿಜೆಪಿಯ ಪರವಾಗಿದ್ದರೆ ಕೇಂದ್ರ ಮತ್ತು ರಾಜ್ಯ ಗುಪ್ತಚರ ಸಂಸ್ಥೆಗಳು ಕಾಂಗ್ರೆಸ್ ಹೆಚ್ಚಿನ ಸ್ಥಾನಗಳನ್ನು ಗೆಲ್ಲಲಿದೆ ಎಂದು ಹೇಳುತ್ತವೆ.

ಗುಪ್ತಚರ ಸಂಸ್ಥೆಗಳು ನೀಡಿರುವ ವರದಿ ಪ್ರಕಾರ ಯಾವುದೇ ಪಕ್ಷ ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೆ ಬರುವುದಿಲ್ಲ. ಕಾಂಗ್ರೆಸ್ 95ರಿಂದ 102 ಸ್ಥಾನಗಳನ್ನು ಗೆಲ್ಲಲಿದೆ ಎಂದು ಹೇಳುತ್ತವೆ.

ಮುಖ್ಯಮಂತ್ರಿ ಸಿದ್ದರಾಮಯ್ಯನವರು ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದಲ್ಲಿ ಅಲ್ಪ ಮತಗಳ ಮುನ್ನಡೆಯಿಂದ ಜಯ ಗಳಿಸಲಿದ್ದಾರೆ ಎಂದು ಗುಪ್ತಚರ ಸಂಸ್ಥೆಯ ವರದಿ ಹೇಳುತ್ತದೆ. ಮತದಾನ ಬಳಿಕ ನಡೆಸಿದ ಚುನಾವಣೋತ್ತರ ಸಮೀಕ್ಷೆ ಪ್ರಕಾರ ಕಾಂಗ್ರೆಸ್ 95ರಿಂದ 102, ಬಿಜೆಪಿ 80ರಿಂದ 85 ಮತ್ತು ಜೆಡಿಎಸ್ 35ರಿಂದ 40 ಸ್ಥಾನಗಳಲ್ಲಿ ಜಯ ಕಾಣಲಿವೆ.

ಕೇಂದ್ರ ಗುಪ್ತಚರ ವರದಿಯಂತೆ ರಾಜ್ಯ ಜಾಗೃತ ವಿಭಾಗ ಕೂಡ ಕಾಂಗ್ರೆಸ್ ಪರವಾದ ವರದಿಯನ್ನು ನೀಡಿದೆ. ಕಾಂಗ್ರೆಸ್ 102 ಸ್ಥಾನಗಳಲ್ಲಿ, ಬಿಜೆಪಿ 70 ಹಾಗೂ ಜೆಡಿಎಸ್ 28 ಸ್ಥಾನಗಳಲ್ಲಿ ಗೆಲುವು ಕಾಣಲಿವೆ. 30 ಕ್ಷೇತ್ರಗಳಲ್ಲಿ ಪ್ರಬಲ ಸ್ಪರ್ಧೆ ಏರ್ಪಟ್ಟಿದೆ.

ರಾಜ್ಯ ಗೃಹ ಇಲಾಖೆಯ ವರದಿ ಪ್ರಕಾರ, 20 ಕ್ಷೇತ್ರಗಳಲ್ಲಿ ಕಾಂಗ್ರೆಸ್/ಬಿಜೆಪಿ ಮತ್ತು ಕಾಂಗ್ರೆಸ್/ಜೆಡಿಎಸ್ ನಡುವೆ ಪ್ರಬಲ ಸ್ಪರ್ಧೆ ಏರ್ಪಟ್ಟಿದೆ. ಕಾಂಗ್ರೆಸ್ 102 ಸ್ಥಾನಗಳನ್ನು ಪಡೆಯುವ ಮೂಲಕ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಲಿದೆ. ಇನ್ನು 20 ಕ್ಷೇತ್ರಗಳಲ್ಲಿ 10-15 ಸ್ಥಾನಗಳನ್ನು ಕಾಂಗ್ರೆಸ್ ಗೆದ್ದುಕೊಂಡರೆ ಸರಳ ಬಹುಮತದೊಂದಿಗೆ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ಅಧಿಕಾರಿಗಳು ಹೇಳುತ್ತಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com