ಫಲಿತಾಂಶಕ್ಕಾಗಿ ಎಲ್ಲರ ತವಕ: ಜೆಡಿಎಸ್, ಕೈ-ಕಮಲ ಪಾಳಯಗಳಲ್ಲಿ ಮೂಡಿದೆ ನಡುಕ!

ಕರ್ನಾಟಕ ವಿಧಾನ ಸಭೆ ಚುನಾವಣಾ ಫಲಿತಾಂಶಕ್ಕೆ ಇನ್ನೂ ಕೇವಲ ಒಂದೇ ಒಂದು ದಿನ ಮಾತ್ರವಿದೆ, ಎಲ್ಲಾ ಪಕ್ಷಗಳು ಫಲಿತಾಂಶದ ...
ಜೆಡಿಎಸ್, ಕೈ-ಕಮಲ ಪಾಳೆಯಗಳಲ್ಲಿ  ನಡುಕ
ಜೆಡಿಎಸ್, ಕೈ-ಕಮಲ ಪಾಳೆಯಗಳಲ್ಲಿ ನಡುಕ
Updated on: 
ಬೆಂಗಳೂರು: ಕರ್ನಾಟಕ ವಿಧಾನ ಸಭೆ ಚುನಾವಣಾ ಫಲಿತಾಂಶಕ್ಕೆ ಇನ್ನೂ ಕೇವಲ ಒಂದೇ ಒಂದು ದಿನ ಮಾತ್ರವಿದೆ, ಎಲ್ಲಾ ಪಕ್ಷಗಳು ಫಲಿತಾಂಶದ ಸಾಧ್ಯತೆಯ ವಿಶ್ಲೇಷಣೆ ಮಾಡುತ್ತಿವೆ,  ರಾಜ್ಯದ ಪ್ರಮುಖ ಮೂರು ಪಕ್ಷಗಳಲ್ಲೂ ಕುತೂಹಲ ಮನೆ ಮಾಡಿದೆ.
ಗೆಲುವಿನ ಬಗ್ಗೆ ಕಾಂಗ್ರೆಸ್ ನಲ್ಲಿ ಆತಂಕ
ಎಕ್ಸಿಟ್ ಪೋಲ್ ಸಮೀಕ್ಷೆ ಬಿಜೆಪಿ ಪರವಾಗಿ ಬಂದಿರುವುದರಿಂದ ಸಹಜವಾಗಿಯೇ ಕಾಂಗ್ರೆಸ್ ಪಾಳೆಯದಲ್ಲಿ ಆತಂಕ ಮೂಡಿದೆ. ಬೆಂಗಳೂರಿಗೆ ಆಗಮಿಸಿರುವ ಎಐಸಿಸಿ ಪ್ರಧಾನ ಕಾರ್ಯದರ್ಶಿ ಮತ್ತು ಕರ್ನಾಟಕ ಉಸ್ತುವಾಪಿ ಕೆಸಿ ವೇಣುಗೋಪಾಲ್ ಪಕ್ಷದ ವಾರ್ ರೂಂ ನಲ್ಲಿ ಪಕ್ಷದ ಮುಖಂಡರುಗಳ ಜೊತೆ ಸಭೆ ನಡೆಸಿದ್ದಾರೆ, 
ಪ್ರತಿ ಜಿಲ್ಲೆ ಹಾಗೂ ಕ್ಷೇತ್ರಗಳ ಅಭ್ಯರ್ಥಿಗಳಿಂದ ಮತದಾನದ ವಿವರಣೆ ಪಡೆದುಕೊಂಡಿದ್ದಾರೆ, ಆದರೆ ಸಿಎಂ ಸಿದ್ದರಾಮಯ್ಯ ಮಾತ್ರ ಕಾಂಗ್ರೆಸ್ ಪಕ್ಷಕ್ಕೆ ಬಹುಮತ ದೊರೆಯಲಿದೆ ಎಂದು ವಿಶ್ವಾಸ ವ್ಯಕ್ತ ಪಡಿಸಿದ್ದಾರೆ.
ಇನ್ನೂ ಅತಂತ್ರ ವಿಧಾನಸಭೆ ನಿರ್ಮಾಣವಾಗುವ ಭಯದಲ್ಲಿರುವ ಕಾಂಗ್ರೆಸ್ , ಜೆಡಿಎಸ್ ಮತ್ತು ಬಿಜೆಪಿ ಅಧಿಕಾರಕ್ಕೆ ಬರುವುದನ್ನು ತಡೆಯಲು ತಂತ್ರ ರೂಪಿಸುವ ಸಾಧ್ಯತೆಯಿದೆ.
ಸಿದ್ದರಾಮಯ್ಯ ಯಾವುದೇ ಆತಂಕಕ್ಕೊಳಗಾಗದೇ ತಣ್ಣಗಿದ್ದಾರೆ,  ಆಂತರಿಕ ಭಿನ್ನಾಭಿಪ್ರಾಯಗಳಿಂದ ನಲುಗಿರುವ ಕಾಂಗ್ರೆಸ್ ಪಕ್ಷ, ಅತಂತ್ರ ವಿಧಾನಸಭೆ ಹಿನ್ನೆಲೆಯಲ್ಲಿ ಜೆಡಿಎಸ್ ಜೊತೆ ಕೈ ಜೋಡಿಸಿದರೇ ಮತ್ತೆ ಕಾಂಗ್ರೆಸ್ ನಲ್ಲಿ ಭಿನ್ನಾಭಿಪ್ರಾಯ ಹೆಚ್ಚುವ ಸಾಧ್ಯತೆಯಿದೆ.
ಎಕ್ಸಿಟ್ ಪೊಲ್ ಸಮೀಕ್ಷೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದೆಂದು ತಿಳಿಸಿದ ನಂತರ ಬಿಜೆಪಿ ಪಾಳಯದಲ್ಲಿ ಹಲವು ನಿರೀಕ್ಷೆಗಳನ್ನು ಮೂಡಿಸಿದೆ. ಬಿಜೆಪಿ ತನ್ನ ಪ್ರಚಾರ ಸಮಯದಲ್ಲಿ ಮಿಷನ್ 150 ಘೋಷಣೆಯನ್ನು ನಿಲ್ಲಿಸಿತು. ಮುಖ್ಯಮಂತ್ರಿ ಅಭ್ಯರ್ಥಿ ಯಡಿಯೂರಪ್ಪ ಭಾನುವಾರ ಪೂರ್ತಿ ಬ್ಯುಸಿಯಾಗಿದ್ದರು,. ಪ್ರತಿ ಕ್ಷೇತ್ರ ಅಭ್ಯರ್ಥಿಯ ಭವಿಷ್ಯ ಬಗ್ಗೆ ಮಾಹಿತಿ ಪಡೆಯುತ್ತಿದ್ದರು.
ಯಡಿಯೂರಪ್ಪ ಅವರು ನಿರಂತರವಾಗಿ ಬಿಜೆಪಿ ರಾಷ್ಚ್ರೀಯ ಅಧ್ಯಕ್ಷ ಅಮಿತ್  ಶಾ ಜೊತೆ ಸಂಪರ್ಕದಲ್ಲಿದ್ದಾರೆ, ಫಲಿತಾಂಶ ತಮ್ಮ ಪರವಾಗಿ ಬಂದರೇ ಅಂದರೇ 120 ಸೀಟು ಬಂದರೇ ತನ್ನದೇ ಸರ್ಕಾರ ರಚಿಸಲು ಬಿಜೆಪಿ ಹವಣಿಸುತ್ತಿದೆ.
ಕಿಂಗ್ ಮೇಕರ್ ಆಗುವ ನಿರೀಕ್ಷೆಯಲ್ಲಿ ಜೆಡಿಎಸ್
ಎಕ್ಸಿಟ್ ಪೋಲ್ ಸರ್ವೆಯಲ್ಲಿ ಅತಂತ್ರ ವಿಧಾನ ಸಭೆ ನಿರ್ಮಾಣವಾಗಿ ಜೆಡಿಎಸ್ ಕಿಂಗ್ ಮೇಕರ್ ಆಗಲಿದೆ ಎಂದು ಹೇಳಲಾಗಿದೆ. ಬಿಜೆಪಿ ಮತ್ತು ಕಾಂಗ್ರೆಸ್ ಗಳು ಅಭ್ಯರ್ಥಿಗಳ ಗೆಲುವಿನ ಆಧಾರದಲ್ಲಿ ಸರ್ಕಾರ ರಚನೆ ಲೆಕ್ಕಾಚಾರದಲ್ಲಿ ನಿರತರಾಗಿದ್ದಾರೆ, ಆದರೆ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್ ಡಿ ಕುಮಾರ ಸ್ವಾಮಿ ತಮ್ಮ ಆರೋಗ್ಯ ತಪಾಸಣೆಗಾಗಿ ಸಿಂಗಾಪೂರ್ ಗೆ ತೆರಳಿದ್ದಾರೆ.
ಹಿಂದಿನ ಸರ್ಕಾರಗಳ ಆಡಳಿತದಿಂದ ಜನ ಬೇಸತ್ತಿದ್ದು, ರಾಜ್ಯಕ್ಕೆ ಪ್ರಾದೇಶಿಕ ಪಕ್ಷಕ್ಕೆ ಬೆಂಬಲ ನೀಡಲಿದ್ದಾರೆ ಎಂದು ದೇವೇಗೌಡ ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com