ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಕಡಿಮೆ ಮತದಾನ: ಬಿಜೆಪಿ ಮತ್ತು ಕಾಂಗ್ರೆಸ್ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಸಾಧ್ಯತೆ

ಹೈದರಾಬಾದ್-ಕರ್ನಾಟಕ ಭಾಗದ ಆರು ಜಿಲ್ಲೆಗಳಲ್ಲಿ ಕಡಿಮೆ ಪ್ರಮಾಣದಲ್ಲಿ ಮತದಾನವಾಗಿರುವುದು ...

ಕಲಬುರಗಿ: ಹೈದರಾಬಾದ್-ಕರ್ನಾಟಕ ಭಾಗದ ಆರು ಜಿಲ್ಲೆಗಳಲ್ಲಿ ಕಡಿಮೆ ಪ್ರಮಾಣದಲ್ಲಿ ಮತದಾನವಾಗಿರುವುದು ಬಿಜೆಪಿ ಭವಿಷ್ಯದ ಮೇಲೆ ಹಾನಿ ಮಾಡುವ ಸಾಧ್ಯತೆಯಿದ್ದು ಕಾಂಗ್ರೆಸ್ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಸಾಧ್ಯತೆಯಿದೆ ಎನ್ನುತ್ತಾರೆ ರಾಜಕೀಯ ತಜ್ಞ ಪ್ರೊ ಚಂದ್ರಕಾಂತ್ ಯತ್ನೂರು.

ಯತ್ನೂರ್ ಅವರು ಕಲಬುರಗಿ ಜಿಲ್ಲೆಯ ಕರ್ನಾಟಕ ಕೇಂದ್ರ ವಿಶ್ವವಿದ್ಯಾಲಯದ ರಿಜಿಸ್ಟ್ರಾರ್ ಆಗಿದ್ದಾರೆ. ಕಡಿಮೆ ಮತದಾನವಾಗಿರುವುದು ಬಿಜೆಪಿಗೆ ಕೆಟ್ಟ ಸುದ್ದಿಯಾದರೆ ಕಾಂಗ್ರೆಸ್ ಮೇಲೆ ಕೂಡ ಹೊಡೆತ ಬೀಳುವ ಸಾಧ್ಯತೆಯಿದೆ.

ಹೈದರಾಬಾದ್ ಕರ್ನಾಟಕ ಭಾಗದಲ್ಲಿ ಕಾಂಗ್ರೆಸ್ ಪ್ರಾಬಲ್ಯ ಹೆಚ್ಚಾಗಿದೆ. 40 ಸೀಟುಗಳಲ್ಲಿ 31 ಕ್ಷೇತ್ರಗಳಲ್ಲಿ ಈಗ ಕಾಂಗ್ರೆಸ್ ಶಾಸಕರಿದ್ದಾರೆ. ಇಲ್ಲಿ ಈ ಬಾರಿ ಕನಿಷ್ಠ 15 ಸೀಟುಗಳನ್ನು ಗೆಲ್ಲುವ ವಿಶ್ವಾಸದಲ್ಲಿದ್ದ ಬಿಜೆಪಿಗೆ ಕಡಿಮೆ ಮತದಾನವಾಗಿರುವುದರಿಂದ 8ರಿಂದ 10 ಸ್ಥಾನಗಳು ಮಾತ್ರ ಸಿಗುವ ಸಾಧ್ಯತೆಯಿದೆ. ಕಾಂಗ್ರೆಸ್ ಶಾಸಕರ ಸಂಖ್ಯೆ ಕೂಡ ಈ ಬಾರಿ 25ಕ್ಕಿಳಿಯುವ ಸಾಧ್ಯತೆಯಿದೆ.

ಬೇಸಿಗೆಯ ಉರಿಬಿಸಿಲು ಮತ್ತು ಮಧ್ಯಾಹ್ನ ನಂತರದ ಮಳೆಯಿಂದಾಗಿ ಹೈದರಾಬಾದ್ ಕರ್ನಾಟಕ ಭಾಗದ ಬಹುತೇಕ ಮಂದಿ ಮತಗಟ್ಟೆಗೆ ತೆರಳಿ ಮತ ಚಲಾಯಿಸಲು ಹಿಂದೇಟು ಹಾಕಿದ್ದಾರೆ. ಮತದಾರರ ನಿರಾಸಕ್ತಿ ಮತ್ತು ನಗರಗಳಿಗೆ ಜನರು ವಲಸೆ ಹೋಗಿರುವುದರಿಂದ ಮತದಾನದ ದಿನ ಊರಿಗೆ ಹೋಗಲು ಹಿಂದೇಟು ಹಾಕಿದ್ದಾರೆ.

ಮತದಾನ ಮಾಡುವ ಬಗ್ಗೆ ವಿವಿಧ ಮಾಧ್ಯಮಗಳಲ್ಲಿ ಅರಿವು ಅಭಿಯಾನ ಕೈಗೊಂಡರೂ ಸಹ ಕಡಿಮೆ ಮತದಾನವಾಗಿರುವ ಬಗ್ಗೆ ಸರ್ಕಾರ ಮತ್ತು ಸರ್ಕಾರೇತರ ಸಂಘಟನೆಗಳು ಆತ್ಮಾವಲೋಕನ ಮಾಡಿಕೊಳ್ಳಬೇಕು ಎನ್ನುತ್ತಾರೆ ಪ್ರೊ. ಚಂದ್ರಕಾಂತ್ ಯತ್ನೂರು.

Related Stories

No stories found.

Advertisement

X
Kannada Prabha
www.kannadaprabha.com