ಬಹುಮತ ಪಡೆಯುವ ಆತ್ಮವಿಶ್ವಾಸದಲ್ಲಿ ಬಿಜೆಪಿ: ಸೀಟುಗಳ ಆಧಾರದಲ್ಲಿ ಅಧಿಕಾರಕ್ಕಾಗಿ ಜೆಡಿಎಸ್ ಚೌಕಾಶಿ

ಕರ್ನಾಟಕ ವಿಧಾನ ಸಭೆ ಚುನಾವಣೆಯಲ್ಲಿ ಯಾವ ಪಕ್ಷ ಅತಿ ದೊಡ್ಡ ಬಹುಮತ ಪಡೆಯುತ್ತದೆ ಎಂಬುದು ಎಕ್ಸಿಟ್ ಪೋಲ್ ಸಮೀಕ್ಷೆ ತಿಳಿಸಿಲ್ಲವಾದರೂ...
ಎಚ್.ಡಿ ದೇವೇಗೌಡ
ಎಚ್.ಡಿ ದೇವೇಗೌಡ
ಬೆಂಗಳೂರು: ಕರ್ನಾಟಕ ವಿಧಾನ ಸಭೆ ಚುನಾವಣೆಯಲ್ಲಿ ಯಾವ ಪಕ್ಷ ಅತಿ ದೊಡ್ಡ ಬಹುಮತ ಪಡೆಯುತ್ತದೆ ಎಂಬುದು ಎಕ್ಸಿಟ್ ಪೋಲ್ ಸಮೀಕ್ಷೆ ತಿಳಿಸಿಲ್ಲವಾದರೂ ಬಿಜೆಪಿ ನಾಯಕರು ಮಾತ್ರ ತಾವು ಗೆಲ್ಲುವ ಆತ್ಮ ವಿಶ್ವಾಸ ವ್ಯಕ್ತ ಪಡಿಸುತ್ತಿದ್ದಾರೆ. ಆದರೆ ಕೆಲವು ನಾಯಕರು ಮಾತ್ರ ಫಲಿತಾಂಶದ ಬಗ್ಗೆ ನಡುಕಗೊಂಡಿದ್ದಾರೆ, 
ಮೈತ್ರಿ ಸರ್ಕಾರ ರಚನೆಯ ಸಾಧ್ಯತೆಯಿರುವುದರಿಂದ ರಾಜ್ಯ ನಾಯಕರು ಮಾತ್ರವಲ್ಲ ಕೇಂದ್ರ ನಾಯಕರು ಕೂಡ ರಾಜ್ಯವನ್ನು ಹಿಡಿತದಲ್ಲಿಟ್ಟು ಕೊಳ್ಳಲು ಯತ್ನಿಸುತ್ತಿದ್ದಾರೆ.
ಕಾಂಗ್ರೆಸ್ ಮತ್ತು ಬಿಜೆಪಿಗಳು ಜೆಡಿಎಸ್ ಪಕ್ಷವನ್ನು ಓಲೈಸಲು ಮುಂದಾಗಿವೆ, ಪಕ್ಷ ಪಡೆಯುವ ಸೀಟುಗಳ ಆಧಾರದ ಮೇಲೆ ಅಧಿಕಾರಕ್ಕಾಗಿ ಚೌಕಾಶಿ ಮಾಡಲು ದೇವೇಗೌಡರು ನಿರ್ಧರಿಸಿದ್ದಾರೆ.
ಒಂದು ವೇಳೆ ಜೆಡಿಎಸ್ ಕಾಂಗ್ರೆಸ್ ಮೈತ್ರಿ ಬಯಸಿದ್ದೇ ಆದರೆ ಸಿದ್ದರಾಮಯ್ಯ ಅವರನ್ನು ದೂರ ಇಡಬೇಕು ಎಂಬುದೇ ಮೊದಲ ಷರತ್ತು ಆಗಿರುತ್ತದೆ, ಆದರೆ ಬಿಜೆಪಿ ಜೊತೆ ಜೆಡಿಎಸ್ ಕೈ ಜೋಡಿಸಲು ನಿರ್ಧರಿಸಿದರೇ ಯಡಿಯೂರಪ್ಪ ನಾಯಕತ್ವಕ್ಕೆ ಜೆಡಿಎಸ್ ವಿರೋಧವಿಲ್ಲ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯ ಪಡುತ್ತಾರೆ. 
ಒಂದು ವೇಳೆ ಜೆಡಿಎಸ್ ಒತ್ತಾಯ ಮಾಡಿದರೇ ಬಿಜೆಪಿ ತನ್ನ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಕೂಡ ಬದಲಾಯಿಸಲಿದೆ, ಜಗದೀಶ್ ಶೆಟ್ಟರ್ ಅಥವಾ ಗೋವಿಂದ್ ಕಾರಜೋಳ ಅವರ ಹೆಸರನ್ನು ಪ್ರಸ್ತಾಪಿಸುವ ಸಾಧ್ಯತೆಯಿದೆ, ಇವರು ಜನಪ್ರಿಯ ನಾಯಕರಾಗಿದ್ದಾರೆ, ಆದರೆ ಮಾಸ್ ಲೀಡರ್ ಗಳಲ್ಲ. 
ಒಂದು ವರ್ಷದ ಹಿಂದೆ ಬಿಜೆಪಿ ಚುನಾವಣಾ ಸಿದ್ಧತೆ ಆರಂಭಿಸುವಾಗ ಯಡಿಯೂರಪ್ಪ ಮತ್ತು ಬಿ.ಎಸ್ ಸಂತೋಷ್ ನಡುವೆ ಸಿಎಂ ಅಭ್ಯರ್ಥಿಗಳು ಎಂಬ ಹೆಸರು ಕೇಳಿ ಬಂದಿತ್ತು, ಹಲವು ಸುತ್ತಿನ ಸಮಾಲೋಚನೆಗಳ ನಂತರ ಯಡಿಯೂರಪ್ಪ ಅವರನ್ನು ಸಿಎಂ ಅಭ್ಯರ್ಥಿ ಎಂದು ಘೋಷಿಸಲಾಯಿತು.
ಶನಿವಾರ ಸಂಜೆ ಎಚ್.ಡಿ ಕುಮಾರ ಸ್ವಾಮಿ ಇದ್ದಕ್ಕಿದ್ದಂತೆ ಸಿಂಗಾಪುರಕ್ಕೆ ತೆರಳಿದ್ದು ಹಲವು ಊಹಾ ಪೋಹಗಳಿಗೆ ಎಡೆ ಮಾಡಿಕೊಟ್ಟಿದೆ. ಎರಡು ಪಕ್ಷಗಳ ನಾಯಕರುಗಳ ಜೊತೆ ಮೈತ್ರಿ ಬಗ್ಗೆ ಕುಮಾರ ಸ್ವಾಮಿ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com